ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಧನಿಗೆ ಅಂತಿಮ ನಮನ

Last Updated 26 ನವೆಂಬರ್ 2014, 20:08 IST
ಅಕ್ಷರ ಗಾತ್ರ

ಹಾಸನ: ಮಿದುಳು ರಕ್ತಸ್ರಾವದಿಂದ ಈಚೆಗೆ ಮೃತಪಟ್ಟ ಜಿಲ್ಲೆಯ ಸಾಲ­ಗಾಮೆ ಗ್ರಾಮದ ಯೋಧ ಮಧು­ಸೂದನ್‌ (35) ಅವರ ಪಾರ್ಥಿವ ಶರೀ­ರದ ಅಂತ್ಯ­ಕ್ರಿಯೆ­ಯನ್ನು ಬುಧವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರ­ವೇ­­ರಿ­ಸಲಾಯಿತು. ಮಧುಸೂದನ್‌ ಅವರು ಕೆಲವು ತಿಂಗಳಿಂದ ಪಂಜಾಬಿನ ಪಠಾಣ್‌­­ಕೋಟ್‌­ನಲ್ಲಿ ಕಾರ್ಯ ನಿರ್ವಹಿಸು­ತ್ತಿ­ದ್ದರು. ಎರಡು ದಿನಗಳ ಹಿಂದೆ ಅವರು ನಿಧನರಾಗಿದ್ದರು.

ಬುಧವಾರ ಬೆಳಿಗ್ಗೆ ಪಾರ್ಥಿವ ಶರೀರ­ವನ್ನು ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ತರ­ಲಾಯಿತು. ಇಲ್ಲಿ ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್‌, ಪೊಲೀಸ್ ವರಿಷ್ಠಾಧಿ­ಕಾರಿ ರವಿ ಡಿ. ಚನ್ನಣ್ಣನವರ, ಹೆಚ್ಚುವರಿ ಜಿಲ್ಲಾ­ಧಿಕಾರಿ ಡಾ.ಎಚ್.ಎನ್. ಗೋಪಾಲ­­­ಕೃಷ್ಣ, ಪ್ರೊಬೇಷನ್ ಐಎಎಸ್ ಅಧಿಕಾರಿ ವೆಂಕಟ್, ತಹಶೀ­ಲ್ದಾರ್‌ ಮಂಜುನಾಥ್, ಸೈನಿಕ ಕಲ್ಯಾಣ ಇಲಾ­ಖೆಯ ಅಧಿಕಾರಿ ಶಿವಸ್ವಾಮಿ ಹಾಗೂ ಇತರರು ಮೃತದೇಹಕ್ಕೆ ಹೂಗು­ಚ್ಛವಿರಿಸಿ ಅಂತಿಮ ನಮನ ಸಲ್ಲಿಸಿದರು.

ನಂತರ ಪಾರ್ಥಿವ ಶರೀರವನ್ನು ಯೋಧನ ಸ್ವಗ್ರಾಮ ಸಾಲಗಾಮೆಗೆ ಒಯ್ದು ಅಂತ್ಯಕ್ರಿಯೆ ನಡೆಸಲಾಯಿತು. ಸೇನೆಯಲ್ಲಿ 15 ವರ್ಷಗಳ ಸೇವೆ ಸಲ್ಲಿಸಿದ್ದ ಮಧುಸೂದನ್‌ಗೆ ತಂದೆ, ತಾಯಿ, ಪತ್ನಿ ಹಾಗೂ ಸಹೋದರ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT