ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಧರು, ಉಗ್ರರು ಸೇರಿ 10 ಸಾವು

Last Updated 27 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಜಮ್ಮು, ನವದೆಹಲಿ (ಪಿಟಿಐ):  ಅರ್ನಿಯಾ ಗಡಿ ವಲಯದ ಅಂತರ­ರಾಷ್ಟ್ರೀಯ ಗಡಿಯಲ್ಲಿ ಸೇನೆ ಮತ್ತು ಉಗ್ರರ ಮಧ್ಯೆ ಗುರುವಾರ ನಡೆದ ದಾಳಿ­ಯಲ್ಲಿ ಮೂವರು ಯೋಧರು ಹಾಗೂ ನಾಲ್ವರು ಉಗ್ರರು ಸೇರಿ­ದಂತೆ ಒಟ್ಟು ಹತ್ತು ಮಂದಿ ಸಾವನ್ನಪ್ಪಿದ್ದಾರೆ. 

ಘಟನೆಯಲ್ಲಿ ಮೂವರು ನಾಗರಿಕ ಸಾವನ್ನ­ಪ್ಪಿದ್ದು, ಅನೇಕ ಮಂದಿ ಗಾಯ­ಗೊಂಡಿ­ದ್ದಾರೆ. ಉಗ್ರರು ಸೇನೆಯ ಸಮ­ವಸ್ತ್ರ ಧರಿಸಿದ್ದರು.

ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮ ಆಯೋಜನೆ ಆಗಿರುವ ಒಂದು ದಿನದ ಮುನ್ನ ಈ ಘಟನೆ ನಡೆ­ದಿದೆ. ವಿಧಾನಸಭೆ ಚುನಾವಣೆ ಕಾರಣ ಪ್ರಧಾನಿ ಮೋದಿ ಶುಕ್ರವಾರ ಉದಂ­ಪುರ್‌ (ಘಟನಾ ಸ್ಥಳದಿಂದ ನೂರು ಕಿಲೋ ಮೀಟರ್‌ ದೂರದಲ್ಲಿದೆ) ಮತ್ತು ಪೂಂಚ್‌ ಜಿಲ್ಲೆ­ಯಲ್ಲಿ ಚುನಾ­­ವಣಾ ರ್‍್ಯಾಲಿ­ಯ­ನ್ನುದ್ದೇ­ಶಿಸಿ ಮಾತನಾಡ­ಲಿದ್ದಾರೆ.

ರಜೊರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಒಳನುಸುಳಲು ಪ್ರಯ­ತ್ನಿ­­ಸುತ್ತಿದ್ದ ಉಗ್ರರನ್ನು ಸೇನೆ ಹಿಮ್ಮೆಟ್ಟಿಸಿದ್ದು, ಕೆಲ ಶಂಕಿತ ಉಗ್ರರರನ್ನು ಬಂಧಿಸಿದೆ. ಬಂಧಿತ ಶಂಕಿತ ಉಗ್ರನೊಬ್ಬನಿಂದ ಎಕೆ47 ಬಂದೂಕು, 30 ಮದ್ದು­ಗುಂಡು­ಗಳು, ಪಿಸ್ತೂಲ್‌ ಮತ್ತು ₨8100 ಪಾಕಿ­ಸ್ತಾನಿ ನೋಟುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

‘ಅರ್ನಿಯಾ ವಲಯದಲ್ಲಿ ಸೇನೆ ಮತ್ತು ಉಗ್ರರ ಮಧ್ಯೆ ನಡೆದ ಕಾಳಗ­ದಲ್ಲಿ ಮೂವರು ಯೋಧರು ಮತ್ತು ಉಗ್ರರು ಸಾವನ್ನಪ್ಪಿದ್ದಾರೆ’ ಎಂದು ನವ­ದೆಹಲಿಯಲ್ಲಿರುವ ಸೇನೆಯ ಮೂಲಗಳು ತಿಳಿಸಿವೆ.

‘ಅರ್ನಿಯಾ ವಲಯದ ಪಿಂಡಿ ಖಾಟ್ಟರ್‌ ವಲಯದಲ್ಲಿರುವ 92­ಇನ್‌ಫೆಂಟ್ರಿ ಬ್ರಿಗೇಡ್‌ಗೆ ಸೇರಿದ ಬಂಕರ್‌ ಸೇನೆ ತೆರವು ಮಾಡಿತ್ತು. ಈ ಬಂಕರ್‌ ಅನ್ನು ಉಗ್ರರು ವಶಕ್ಕೆ ತೆಗೆದು­ಕೊಂಡಿ­ದ್ದಾರೆ’ ಎಂದು ಮೂಲಗಳು ತಿಳಿಸಿವೆ. ಉಗ್ರರು ಸೇನೆ ಬಂಕರ್‌ ವಶಪಡಿಸಿ­ಕೊಳ್ಳುವುದಕ್ಕೂ ಮುನ್ನ ಸೇತುವೆ ಸಮೀಪ ನಿಂತು ಬಟ್ಟೆ ಬದಲಾಯಿಸಿ ಸೇನೆಯ ಸಮವಸ್ತ್ರ ಧರಿಸಿದ್ದರು ಎಂದು ಗುಪ್ತಚರ ಇಲಾಖೆ ವರದಿಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT