ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಭೂಮಿ ನಿರ್ಲಕ್ಷ್ಯ ಬೇಡ: ಸತ್ಯನಾರಾಯಣ

Last Updated 6 ಮಾರ್ಚ್ 2015, 7:11 IST
ಅಕ್ಷರ ಗಾತ್ರ

ಬಾಗಲಕೋಟೆ: ರಂಗಭೂಮಿ ಮತ್ತು ಜಾನಪದ ಕ್ಷೇತ್ರದ ಬಗ್ಗೆ ಯುವಜನರು ನಿರ್ಲಕ್ಷ್ಯ ತಾಳದೇ ಆಸಕ್ತಿ ಬೆಳೆಸಿ­ಕೊಳ್ಳಬೇಕು ಎಂದು ವಿದ್ಯಾಪ್ರಸಾರಕ ಮಂಡಳದ ಗೌರವ ಕಾರ್ಯದರ್ಶಿ ಎಸ್.ಬಿ.ಸತ್ಯನಾರಾಯಣ ಸಲಹೆ ನೀಡಿದರು.   

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನಗರದ ವಿದ್ಯಾಪ್ರಸಾರಕ ಮಂಡಳದ ಎಸ್.ಆರ್.ನರಸಾಪುರ ಕಲಾ ಹಾಗೂ ಎಂ.ಬಿ.ಶಿರೂರ ವಾಣಿಜ್ಯ ಮಹಾವಿ­ದ್ಯಾಲಯದ ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ಕಾಲೇಜು ರಂಗೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. 
ದೂರದರ್ಶನ ಪ್ರಭಾವದಿಂದ ನಾಟಕಗಳು ಇಂದು ಮಾಯವಾಗಿವೆ ಎಂದು ವಿಷಾದ ವ್ಯಕ್ತಪಡಿಸಿದರು.

ಇಳಕಲ್‌ನ ಎಸ್.ಆರ್.ಕಂಠಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ವಿಶ್ವನಾಥ ವಂಶಾಕೃತಮಠ, ಟಿ.ವಿ ಹಾಗೂ ಆಧುನಿಕ ಕಂಪ್ಯೂಟರ್ ಪ್ರಭಾವದಿಂದ ರಂಗಭೂಮಿ ಇಂದು ಗೌಣವಾಗಿದೆ ಎಂದು ಹೇಳಿದರು.

2016ರಿಂದ ರಾಷ್ಟ್ರೀಯ ಏಕರೂಪ ಪಠ್ಯಕ್ರಮ ಜಾರಿಯಾಗಲಿದೆ. ಇದರಲ್ಲಿ ಶೇ 50ರಷ್ಟು ಅಭ್ಯಾಸಕ್ಕೆ ಅನುಗುಣವಾಗಿ ಹಾಗೂ ಶೇ 50ರಷ್ಟು ವ್ಯಕ್ತಿತ್ವ ವಿಕಸನಗೊಳಿಸುವ ಮತ್ತು ಮೂಲಭೂತ ತರಬೇತಿ ಕೊಡುವ ಶಿಕ್ಷಣ ಪಠ್ಯಕ್ರಮದಲ್ಲಿ ಅನ್ವಯವಾಗಲಿದೆ ಎಂದರು.
ರಂಗಭೂಮಿ ಮೂಲಕ ಶಿಕ್ಷಣ ಪಡೆಯುವುದು ಅಗತ್ಯವಾಗಿದ್ದು, ಪಾರಂಪರಿಕ ಕಲೆ ಉಳಿಸಬೇಕಾಗಿದೆ ಎಂದು ಹೇಳಿದರು.
ರಂಗಕರ್ಮಿ ಬಸವರಾಜ ಮಠ ಮಾತನಾಡಿ, ರಂಗಭೂಮಿ ಕಲೆಯಿಂದ ಸಾಮಾನ್ಯ ಜ್ಞಾನ ಪಡೆದುಕೊಂಡರೆ ಪುಸ್ತಕ ಓದುವುದರಿಂದ ಬುದ್ದಿಯನ್ನು ಪಡೆಯಲು ಸಾಧ್ಯವಿದೆ ಎಂದರು.

ಎಸ್.ಆರ್.ಎನ್.ಕಲಾ ಹಾಗೂ ಎಂ.ಬಿ.ಶಿರೂರ ವಾಣಿಜ್ಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಜಿ.ಬಿ.ಕುಲಕರ್ಣಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ  ರಂಗಭೂಮಿ ಹಾಗೂ ಜಾನಪದ ಕುರಿತು ತರಬೇತಿ ನೀಡುತ್ತಿದ್ದು ಇದಕ್ಕಾಗಿ ಕಾಲೇಜಿನಿಂದ 20 ವಿದ್ಯಾರ್ಥಿಗಳನ್ನು ಕಳಿಸಲಾಗುವುದು ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀಶೈಲ ಕರಿಶಂಕರಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಾಲೇಜು ವಿದ್ಯಾರ್ಥಿಗಳಿಗೆ ನಾಟಕದ ಗೀಳು ಹಚ್ಚಲು ಜಾನಪದ ಮತ್ತು ನಾಟಕ ಕುರಿತು ಜೂನ್‌ದಿಂದ ಕಾಲೇಜು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುವುದು ಎಂದು ಹೇಳಿದರು. ವಿವಿಧ ಕಾಲೇಜಿಗಳ ವಿದ್ಯಾರ್ಥಿಗಳು ನಾಟಕ ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT