ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗೋಲಿಯಲ್ಲಿ ‘ಕಲಾಸಿಂಚನ’

Last Updated 23 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಎಂ.ಜಿ.ರಸ್ತೆಯ ರಂಗೋಲಿ ಮೆಟ್ರೊ ಆರ್ಟ್‌ ಸೆಂಟರ್‌ನಲ್ಲಿ ‘ಕಲಾಸಿಂಚನ’ ಸಮೂಹ ಕಲಾಕೃತಿಗಳ ಪ್ರದರ್ಶನ ಆರಂಭಗೊಂಡಿದೆ. ಪ್ರದರ್ಶನದಲ್ಲಿ ಉದಯೋನ್ಮುಖ ಕಲಾವಿದರಾದ ಉಮರ್ ಫಾರೂಕ್ ಎಚ್. ಗಟನೂರ್, ಸರ್ವಮಂಗಳಾ ಬಿ.ಪಾಟೀಲ್, ಬಿ.ಕೆ.ರಾಜೇಶ್, ಕೃಷ್ಣ ಆರ್‌.ಝಿಂಗಾಡೆ ಅವರ ಕಲಾಕೃತಿಗಳನ್ನು ಕಾಣಬಹುದು. ಪ್ರದರ್ಶನ ಏ.27ರವರೆಗೆ ನಡೆಯಲಿದೆ. ಬೆಳಿಗ್ಗೆ 10ರಿಂದ ಸಂಜೆ 7ರವರೆಗೆ ಪ್ರದರ್ಶನ ತೆರೆದಿರುತ್ತದೆ.

ಕೃಷ್ಣ ಆರ್.ಝಿಂಗಾಡೆ
ಮುದ್ದೆಬಿಹಾಳದ ಕೃಷ್ಣ ಆರ್‌.ಝಿಂಗಾಡೆ ಅವರು ಗುಲ್ಬರ್ಗದ ಎಸ್‌.ಬಿ. ಕಾಲೇಜಿನಲ್ಲಿ ಫೈನ್‌ ಆರ್ಟ್‌ನಲ್ಲಿ ಎಂ.ಎ. ಮಾಡಿದ್ದಾರೆ. ಕೃಷ್ಣ ಅವರು ರಿಯಲಿಸ್ಟಿಕ್‌, ಕಂಟೆಂಪರಿ, ಲ್ಯಾಂಡ್‌ಸ್ಕೇಪ್‌ ಹೀಗೆ ವಿವಿಧ ಬಗೆಯ ಕಲಾಕೃತಿಗಳನ್ನು ರಚಿಸಿದ್ದಾರೆ. ತೈಲವರ್ಣ, ಜಲವರ್ಣ, ಆಕ್ರಿಲಿಕ್‌ ಅಲ್ಲದೆ ಮಿಶ್ರ ಮಾಧ್ಯಮದಲ್ಲೂ ಕಲಾಕೃತಿ ರಚಿಸಿದ್ದಾರೆ. ಅನೇಕ ಕಾರ್ಯಾಗಾರ ಮತ್ತು ಪ್ರದರ್ಶನಗಳಲ್ಲಿ ಭಾಗಿಯಾಗಿದ್ದಾರೆ. ಬೆಳಗಾವಿಯಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನ, ಬಿಜಾಪುರದಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಚಿತ್ರಕಲಾ ಶಿಬಿರ, ಲಕ್ಷ್ಮಿ ಬ್ರೂಕೆ ಬೆಂಗಳೂರು ಮಂತ್ರಾಲಯದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಕಲಾಶಿಬಿರದಲ್ಲಿ ಭಾಗವಹಿಸಿದ್ದಾರೆ. ‘ಭಾರತ್‌ ನಿರ್ಮಾಣ್‌ ಆಂದೋಲನ ಬೆಂಗಳೂರು’ ನೀಡುವ ಕಲಾಸಡಕ್‌ ಪ್ರಶಸ್ತಿ ಮತ್ತು ಚಿನ್ನದ ಪದಕದ ಗೌರವ ಇವರಿಗೆ ಸಂದಿದೆ. ಇವರು ಹವ್ಯಾಸಿ ಕಲಾವಿದರಾಗಿದ್ದಾರೆ.

ಉಮರ್ ಫಾರೂಕ್
ಉಮರ್ ಫಾರೂಕ್ ಎಚ್. ಗಟನೂರ್ ಅವರು ಹಂಪಿ ಕನ್ನಡ ವಿವಿಯಿಂದ ದೃಶ್ಯ ಕಲಾ ಮಾಧ್ಯಮದಲ್ಲಿ ಎಂ.ಎ. ಮಾಡಿದ್ದಾರೆ. ರೇಖಾಚಿತ್ರ, ಜಲವರ್ಣದಲ್ಲಿ ಬುದ್ಧನ ಚಿತ್ರಗಳು ಇವರ ವಿಶೇಷ. ಉಮರ್‌ ಅವರಿಗೆ ಮನುಷ್ಯನ ಬದಲಾಗುವ ನಡವಳಿಕೆ ಮತ್ತು ಅದರಿಂದ ಸಂಸ್ಕೃತಿಯ ಮೇಲೆ ಆಗುವ ಪರಿಣಾಮದ ಕುರಿತು ಹೆಚ್ಚು ಆಸಕ್ತಿ. ಅನೇಕ ಕಲಾಶಿಬಿರ ಮತ್ತು ಸಮೂಹ ಕಲಾಪ್ರದರ್ಶನಗಳಲ್ಲಿ ಇವರು ಭಾಗವಹಿಸಿದ್ದಾರೆ.

ಸರ್ವಮಂಗಳ
ಸರ್ವಮಂಗಳ ಬಿ. ಪಾಟೀಲ್ ಅವರು ಶರಣ ಬಸವೇಶ್ವರ ಕಾಲೇಜಿನಲ್ಲಿ ಫೈನ್‌ ಆರ್ಟ್‌ನಲ್ಲಿ ಎಂ.ಎ.ಪದವಿ ಪಡೆದಿದ್ದಾರೆ. ಸಮಕಾಲೀನ ಮತ್ತು ತಂಜಾವೂರು ಶೈಲಿಯಲ್ಲಿ ಒಲವಿರುವವರು. ಶಿಲ್ಪಕಲೆಯಲ್ಲೂ ಆಸಕ್ತರು. ರೆಕ್ಕೆಗಳಿರುವ ಹೆಣ್ಣಿನ ಚಿತ್ರ ರಚಿಸುವ ಮೂಲಕ ಸ್ವಾತಂತ್ರ್ಯಕ್ಕಾಗಿ ತುಡಿಯುವ ಹೆಣ್ಣಿನ ಅಂತರಂಗವನ್ನು ಕಲಾಕೃತಿಯ ಮೂಲಕ ಬಿಚ್ಚಿಟ್ಟವರು. ಸಾಂಪ್ರದಾಯಿಕ ಕಲೆ ಮತ್ತು ಶಿಲ್ಪಕಲೆಯ ಜೊತೆಗೆ ಗ್ರಾಫಿಕ್‌ ಕ್ಯಾಂಪ್‌ಗಳಲ್ಲೂ ಭಾಗವಹಿಸಿದ್ದಾರೆ.

ಬಿ.ಕೆ.ರಾಜೇಶ್‌
ಬಿಜಾಪುರದ ಮುದ್ದೇಬಿಹಾಳದವರಾದ ರಾಜೇಶ್‌ ಚಿತ್ರಕಲೆಯಲ್ಲಿ ಡಿಪ್ಲೊಮಾ ಪದವೀಧರರು. ಗಣೇಶ, ಬುದ್ಧ ಮತ್ತು ಪ್ರಕೃತಿ ಸಂಬಂಧಿ ಚಿತ್ರಗಳನ್ನು ರಚಿಸುವುದರಲ್ಲಿ ಆಸಕ್ತರು. ಕರ್ನಾಟಕ ಕಲಾಮೇಳ, 7ನೇ ದಕ್ಷಿಣ ವಲಯ ಮಟ್ಟದ ಕ್ಯಾಮ್ಲಿನ್ ಆರ್ಟ್‌ ‘ವಾಟರ್‌ ಕಲರ್‌ ಲೈಫ್‌’ ಪ್ರದರ್ಶನದಲ್ಲಿ ಭಾಗವಹಿಸಿದ್ದಾರೆ.

ಮಲೈ ರಮೇಶ್‌
ರಾಯಚೂರಿನ ಮಲೈ ರಮೆಶ್‌ ಬೆಂಗಳೂರಿನಲ್ಲಿ ಕ್ರಾಫ್ಟ್‌ ಟೀಚರ್‌. ಚಾಕ್‌ಪೀಸ್‌ನಲ್ಲಿ ಸೂಕ್ಷ್ಮ ಚಿತ್ರಗಳನ್ನು ರಚಿಸುವುದು. ಕಾಳಿನಲ್ಲಿ ಚಿತ್ರ ರಚಿಸುವುದು, ಅಂಚೆಕಾರ್ಡಿನಲ್ಲಿ ಅತಿಸೂಕ್ಷ್ಮ ಬರವಣಿಗೆ, ಬ್ಲೇಡ್ ಮತ್ತು ಸೂಜಿಗಳನ್ನು ಮಾತ್ರ ಬಳಸಿ ಕಲಾಕೃತಿ ರಚನೆ ಇವರ ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT