ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಮದಿ ವಶಕ್ಕೆ ಪಡೆದ ಇರಾಕ್‌

ಐಎಸ್‌ ಉಗ್ರರ ವಿರುದ್ಧ ಕಾರ್ಯಾಚರಣೆ
Last Updated 27 ಮೇ 2015, 19:30 IST
ಅಕ್ಷರ ಗಾತ್ರ

ಬಾಗ್ದಾದ್‌(ಐಎಎನ್ಎಸ್‌): ಅನ್ಬರ್‌ನ ರಾಜಧಾನಿ ರಮದಿಯನ್ನು ಐ.ಎಸ್‌ ಉಗ್ರರಿಂದ ವಶಪಡಿಸಿಕೊಳ್ಳುವಲ್ಲಿ ಇರಾಕ್‌ ಸೇನೆ ಬಹುತೇಕ ಯಶಸ್ವಿಯಾಗಿದೆ.

ರಮದಿ ಮತ್ತು ಸಲಾಹುದಿನ್‌ ಪ್ರಾಂತ್ಯದಿಂದ ಉಗ್ರರನ್ನು ಹೊರದಬ್ಬಲು ಇರಾಕ್‌ ಸೇನೆ ಮಂಗಳವಾರ ಆರಂಭಿಸಿದ್ದ ಸೇನಾ ದಾಳಿ ಯಶಸ್ವಿಯಾಗಿದೆ ಎಂದು ಅನ್ಬರ್‌ ಪ್ರಾಂತ್ಯದ ಸೇನಾ ಮೂಲಗಳು ತಿಳಿಸಿವೆ.

ಉಗ್ರರು ಬೀಡುಬಿಟ್ಟಿದ್ದ ರಮದಿ ನಗರದ ಮೇಲೆ ಇರಾಕ್  ಸೇನೆ, ಪೊಲೀಸ್ ಹಾಗೂ ಸುನ್ನಿ ಮತ್ತು ಷಿಯಾ ಪಂಥಗಳನ್ನು ಒಳಗೊಂಡ ‘ಹಶ್ದ್‌ ಶಾಬಿ’ ಸೇನೆ ಮಂಗಳವಾರದಿಂದಲೇ ದಾಳಿ ಆರಂಭಿಸಿತ್ತು.

ಪಶ್ಚಿಮ ಬಾಗ್ದಾದ್‌ನಿಂದ 110 ಕಿ.ಮೀ. ದೂರದಲ್ಲಿರುವ ಅನ್ಬರ್‌ ವಿಶ್ವವಿದ್ಯಾಲಯ ಆವರಣದಲ್ಲಿ ಬುಧವಾರ ಸೇನೆ ಮತ್ತು ಉಗ್ರರ ನಡುವೆ ನಡೆದ ಕಾಳಗದಲ್ಲಿ 20 ಮಂದಿ ಉಗ್ರರು ಹತ್ಯೆಯಾಗಿದ್ದಾರೆ.

ದಕ್ಷಿಣ ರಮದಿ ಪ್ರದೇಶವನ್ನು ಸೇನೆಯು ಸಂಪೂರ್ಣ ವಶಕ್ಕೆ ಪಡೆದಿದ್ದು, ಉಗ್ರರನ್ನು ಅಲ್ಲಿಂದ ಹೊರದಬ್ಬಲಾಗಿದೆ ಎಂದು ಸೇನೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 11 ದಿನಗಳ ಹಿಂದೆ ಇರಾಕ್‌ ಸೇನೆ ರಮದಿಯಿಂದ ಕಾಲ್ತೆಗೆದ ನಂತರ ಐ.ಎಸ್‌ ಉಗ್ರರು ಈ ನಗರದ ಮೇಲೆ ಹಿಡಿತ ಸಾಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT