ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರವಿಶಾಸ್ತ್ರಿ ದಾಖಲೆ ಸರಿಗಟ್ಟಿದ ಡೊನಾಲ್ಡ್‌

Last Updated 18 ಜುಲೈ 2016, 19:30 IST
ಅಕ್ಷರ ಗಾತ್ರ

ಕಾಲ್ವೆನ್‌ ಬೇ, ಬ್ರಿಟನ್‌ (ಎಎಫ್‌ಪಿ): ದೇಶಿ ಟೂರ್ನಿಗಳಲ್ಲಿ ಗ್ಲೋಮರ್ಗನ್‌ ತಂಡವನ್ನು ಪ್ರತಿನಿಧಿಸುವ ಯುವ       ಆಟಗಾರ ಆ್ಯೆನೆಯುರಿನ್‌ ಹೆನ್ರಿ ಡೊನಾಲ್ಡ್‌  ಅವರು ವೇಗವಾಗಿ ದ್ವಿಶತಕ ಕಲೆ ಹಾಕಿ ಭಾರತದ ರವಿಶಾಸ್ತ್ರಿ ದಾಖಲೆಯನ್ನು ಸರಿಗಟ್ಟಿದ್ದಾರೆ.

ಇಲ್ಲಿ ನಡೆದ ಡರ್ಬಿಷೈರ್‌ ವಿರುದ್ಧದ ಪಂದ್ಯದಲ್ಲಿ ಡೊನಾಲ್ಡ್‌  123 ಎಸೆತಗಳಲ್ಲಿ 15 ಸಿಕ್ಸರ್‌ಗಳು ಸೇರಿದಂತೆ 200 ರನ್‌ಗಳನ್ನು ಕಲೆ ಹಾಕಿದರು. 1985ರಲ್ಲಿ ರವಿ ಶಾಸ್ತ್ರಿ ಕೂಡ ಇಷ್ಟೇ ಎಸೆತಗಳಲ್ಲಿ ದ್ವಿಶತಕ ಬಾರಿಸಿದ್ದರು.

ಕೌಂಟಿ ಚಾಂಪಿಯನ್‌ಷಿಪ್‌ನಲ್ಲಿ ಗ್ಲೋಮರ್ಗನ್‌  ತಂಡ 96 ರನ್ ಗಳಿಸಿದ್ದ ವೇಳೆ ಪ್ರಮುಖ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆಗ ಕ್ರೀಸ್‌ಗೆ ಬಂದ 19 ವರ್ಷದ ಡೊನಾಲ್ಡ್‌  ಅಬ್ಬರಿಸಿದರು. ಇದರಿಂದ ತಂಡಕ್ಕೆ ಒಟ್ಟು 491 ರನ್ ಕಲೆ ಹಾಕಲು ಸಾಧ್ಯವಾಯಿತು.

ಗ್ಲೋಮರ್ಗನ್‌ ಎರಡು ವರ್ಷಗಳ ಹಿಂದೆ ಪ್ರಥಮ ದರ್ಜೆ ಮಾದರಿಗೆ ಪದಾರ್ಪಣೆ ಮಾಡಿದ್ದರು. 15 ಪಂದ್ಯಗಳನ್ನಾಡಿದ್ದು ಒಟ್ಟು 869 ರನ್‌ ಕಲೆ ಹಾಕಿದ್ದಾರೆ. ಡೊನಾಲ್ಡ್ ಎಂಟು ಲೀಸ್ಟ್ ಎ ಪಂದ್ಯಗಳನ್ನು ಆಡಿದ್ದು, 114 ರನ್‌ಗಳನ್ನು ಕಲೆಹಾಕಿದ್ದಾರೆ.  12 ಟ್ವೆಂಟಿ–20 ಪಂದ್ಯಗಳಿಂದ ಎರಡು ಅರ್ಧಶತಕಗಳನ್ನು ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT