ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರವಿ ಪೂಜಾರಿ ಪತ್ನಿ, ಮಗನ ಸೆರೆ

Last Updated 24 ಡಿಸೆಂಬರ್ 2014, 6:45 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಭೂಗತಪಾತಕಿ ರವಿ ಪೂಜಾರಿ ಪತ್ನಿ ಮತ್ತು ಮಗನನ್ನು ಇಲ್ಲಿನ ಅಂತರ­ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳು ಬಂಧಿಸಿದ್ದಾರೆ. ಶ್ರೀದೇವಿ ಸಂತೋಷ್‌  ಪೂಜಾರಿ ಹಾಗೂ ಆರ್ಯನ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಪೂಜಾರಿ ಸಹಚರರು ಮೈಸೂರು ನ್ಯಾಯಾ­ಲಯಕ್ಕೆ
(ಮೈಸೂರು ವರದಿ):
ಮಂಗಳೂರಿನ ಭೂಗತ ಪಾತಕಿ ರವಿ ಪೂಜಾರಿ ಸಹಚರರನ್ನು ನಗರದ ೩ನೇ ಹೆಚ್ಚುವರಿ ಸೆಷನ್ಸ್‌ ನ್ಯಾಯಾ­ಲಯಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಮಂಗಳವಾರ ಹಾಜರು­ಪಡಿಸಲಾಯಿತು.

ಮಂಗಳೂರಿನ ಬಿಲ್ಡರ್ ಹಾಗೂ ಭಾರತಿ ಡೆವಲಪರ್ ಮಾಲೀಕ ಜೋನ್ ಪ್ಯಾಟ್ರಿಕ್ ಎಂಬುವರನ್ನು ರವಿ ಪೂಜಾರಿ ಸಹಚರರು ಹತ್ಯೆ ಮಾಡಲು ಯತ್ನಿಸಿದ ಆರೋಪದ ಮೇಲೆ ೯ ಮಂದಿ ವಿರುದ್ಧ ದೂರು ದಾಖ­ಲಾಗಿತ್ತು. ಈ ಪೈಕಿ 7 ಮಂದಿ­ಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದರು.

ನಂತರ ನಗರದ ನ್ಯಾಯಾಲಯಕ್ಕೆ ಹಾಜರು­ಪಡಿಸಿದ್ದರು. ಕಳೆದ ಜನವರಿ ತಿಂಗಳಲ್ಲಿ ನಡೆದ ಘಟನೆ­ಯಲ್ಲಿ ತೀವ್ರವಾಗಿ ಗಾಯ­ಗೊಂಡು, ಸಾವಿನ ದವಡೆಯಿಂದ ಪಾರಾ­ಗಿದ್ದ ಜೋನ್‌ ಪ್ಯಾಟ್ರಿಕ್‌ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ನಂತರ ಅವರು ನೀಡಿದ ದೂರಿನ ಮೇರೆಗೆ ಮಂಗಳೂರಿನಲ್ಲಿ ಪ್ರಕರಣ ದಾಖಲಾ­ಗಿತ್ತು. 

ರವಿ ಪೂಜಾರಿಯ ಸಹ­ಚರರ ವಿರುದ್ಧ ಸಂಘಟಿತ ಅಪರಾಧ ತಡೆ ಕಾಯ್ದೆ (ಪೋಕ) ಅಡಿ ದೂರು ದಾಖ­ಲಾಗಿತ್ತು. ಪೋಕ ಅಡಿ ದಾಖಲಾದ ಪ್ರಕರಣ ವಿಚಾ­ರಣೆ ನಡೆಸಲು ಮೈಸೂರು ನ್ಯಾಯಾ­ಲಯದಲ್ಲಿ ಮಾತ್ರ ಅವಕಾಶ­ವಿದೆ. ಹೀಗಾಗಿ, ಆರೋಪಿಗಳನ್ನು ಮೈಸೂರಿಗೆ ಕರೆತರಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT