ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ

Last Updated 23 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಪಣಜಿ (ಐಎಎನ್‌ಎಸ್‌): ಹಲ್ಲೆ, ಅತ್ಯಾಚಾರ ಯತ್ನ ಮತ್ತು ದರೋ­ಡೆಗೆ ಒಳಗಾದ ರಷ್ಯಾದ ಮಹಿಳೆ­ಯನ್ನು ವೈದ್ಯಕೀಯ ತಪಾಸಣೆಗೆಂದು ಇಲ್ಲಿನ ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ (ಜಿಎಂಸಿ) ಕಳುಹಿಸಿದಾಗ ಅಲ್ಲಿನ ವೈದ್ಯ­ರೊಬ್ಬರು ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

ಲೈಂಗಿಕ ಶೋಷಣೆಗೆ ಒಳಗಾದ ಮಹಿಳೆ ಈ ವಿಷಯವನ್ನು ರಷ್ಯಾದ ಕಾನ್ಸುಲೇಟ್‌ ಅಧಿಕಾರಿಗೆ ತಿಳಿಸಿದ್ದಾರೆ. ರಷ್ಯಾದ ಮಹಿಳೆ ಏಳು ದಿನಗಳ ಕಾಲ ಪ್ರವಾಸಕ್ಕೆಂದು ಗೋವಾಕ್ಕೆ ಬಂದಿದ್ದರು. ಕಳೆದ ಶನಿವಾರ ಅವರು ಬಾಗಾ ಬೀಚ್‌ನಲ್ಲಿ ವಿಹರಿಸುತ್ತಿದ್ದಾಗ  ದುರು­ಳರ ಗುಂಪೊಂದು ಅವರ ಮೇಲೆ ಹಲ್ಲೆ ಮಾಡಿ, ಅತ್ಯಾಚಾರಕ್ಕೆ ಯತ್ನಿಸಿತು. ಬಳಿಕ ಚಿನ್ನದ ಸರ ಮತ್ತು 33 ಸಾವಿರ ನಗದನ್ನು ದರೋಡೆ ಮಾಡಿತ್ತು. ಈ ಪ್ರಕರಣಕ್ಕೆ ಸಂಬಂಧಿ­ಸಿ­ದಂತೆ ಮಹಿಳೆ­ಯನ್ನು ತಪಾಸಣೆಗಾಗಿ ಜಿಎಂಸಿಗೆ ಕಳುಹಿಸಿ­ದಾಗ ಅಲ್ಲಿನ ವೈದ್ಯರೊಬ್ಬರು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ರಷ್ಯಾ ಕಾನ್ಸುಲೇಟ್‌ನ ಕಾನೂನು ಸಲಹೆ­ಗಾರ ವಿಕ್ರಂ ವರ್ಮಾ ತಿಳಿಸಿದ್ದಾರೆ.

‘ಮೊದಲಿಗೆ ರಷ್ಯಾ ಮಹಿಳೆ ಮೇಲೆ ಹಲ್ಲೆ, ಅತ್ಯಾಚಾರ ಯತ್ನ ಮತ್ತು ದರೋಡೆಗೆ ಸಂಬಂಧಿಸಿದಂತೆ ಪ್ರಕ­ರಣ ದಾಖಲಿಸುವಲ್ಲಿ ಪೊಲೀಸರಿಂದ ಕರ್ತವ್ಯ ಲೋಪಗಳಾಗಿವೆ.  ವೈದ್ಯ­ಕೀಯ ತಪಾಸ­ಣೆಯೂ ನಿಯಮ­ದಂತೆ  ಪ್ರಕ್ರಿಯೆಗಳು ನಡೆದಿಲ್ಲ. ಬದ­ಲಿಗೆ ಪುರುಷ ವೈದ್ಯ­ರೊ­ಬ್ಬರು ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ­ದ್ದಾರೆ’ ಎಂದು  ವರ್ಮಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT