ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ದುರಸ್ತಿಗಾಗಿ ಪಿಡಬ್ಲ್ಯುಡಿಯ ‘ಪುಣ್ಯತಿಥಿ’

Last Updated 21 ಅಕ್ಟೋಬರ್ 2014, 8:15 IST
ಅಕ್ಷರ ಗಾತ್ರ

ತೋವಿನಕೆರೆ: ತುಮಕೂರು ತಾಲ್ಲೂಕಿನ ಕೆಸ್ತೂರು ಗ್ರಾಮದ ರಸ್ತೆ ಸುಧಾರಣೆ ಬಗ್ಗೆ ಲೋಕೋಪಯೋಗಿ ಇಲಾಖೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿ ಗ್ರಾಮಸ್ಥರು ಇಲಾಖೆಯ ಅಣಕು ಪುಣ್ಯತಿಥಿ ನಡೆಸಿ, ಪ್ರತಿಭಟನೆ ನಡೆಸಿದರು.

ಕಳೆದ  25 ವರ್ಷಗಳಿಂದ ದುರಸ್ತಿ ಕಾಣದೇ ಹಲ ಅಪಘಾತಗಳು ಸಂಭ­ವಿಸಿವೆ. ಆದರೂ ಇಲಾಖೆ ಗಮನಹ­ರಿಸುತ್ತಿಲ್ಲ ಎಂದು ಗ್ರಾಮಸ್ಥರು ಇಲಾಖೆ ವಿರುದ್ಧ ಘೋಷಣೆ ಕೂಗಿದರು. ಈ ಹಿಂದೆ ಇಲಾಖೆಯ ತಿಥಿ ಮಾಡಿದರೂ ಎಚ್ಚೆತ್ತುಕೊಂಡಿಲ್ಲ ಎಂದು ಹೇಳಿದರು.
ಕಳೆದ ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ ಮನೆಗೆ ಬಂದಿದ್ದ ಜನಪ್ರತಿನಿಧಿಗಳು ರಸ್ತೆ ಸುಧಾರಣೆಗೆ ಮುಂದಾಗುವುದಾಗಿ ಭರವಸೆ ನೀಡಿ­ದ್ದರೂ ಆದರೂ ಯಾವುದೇ ಕೆಲಸಗಳು ಇಂದಿಗೂ ಆರಂಭವಾಗಿಲ್ಲ ಎಂದು ದೂರಿದರು.
 
ಕೂಡಲೇ ಇಲಾಖೆ ತುಮಕೂರು–ತೋವಿನಕೆರೆ ರಸ್ತೆ ಸುಧಾರಣೆಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಪ್ರತಿ ಭಾನುವಾರ ಹಂತ ಹಂತವಾಗಿ ಪ್ರತಿಭಟನೆ ನಡೆಸಲಾಗುತ್ತದೆ. ನಮ್ಮ ಸಿಟ್ಟು ಇಲಾಖೆ ಮೇಲೆ ಮಾತ್ರ. ಯಾವ ಜನಪ್ರತಿನಿಧಿಯನ್ನು ವೈಯಕ್ತಿವಾಗಿ ದೂರು­ವುದಿಲ್ಲ. ಮುಂದಿನ ದಿನಗಳಲ್ಲಿ ಮೂಲಸೌಕರ್ಯಕ್ಕಾಗಿ ಹೋರಾಟ­ವನ್ನು ತೀವ್ರಗೊಳಿಸಲಾ­ಗುತ್ತದೆ  ಎಂದು ಮೇಳೆಹಳ್ಳಿ ಡಮರುಗ ಉಮೇಶ ಹೇಳಿದರು.

ಹತ್ತು ವರ್ಷಗಳಿಂದ ಅನೇಕ ಬಾರಿ ಪ್ರತಿಭಟನೆ ನಡೆಸಿದ್ದೇವೆ. ರಸ್ತೆ ದುರಸ್ತಿಗೂ ಕೋರಲಾಗಿದೆ. ಪ್ರತಿದಿನ ಅಪಾರ ಸಂಖ್ಯೆಯ ವಿದ್ಯಾರ್ಥಿಗಳು, ಕೂಲಿಕಾರ್ಮಿಕರು ಇದೇ ರಸ್ತೆಯಲ್ಲಿ ಓಡಾಡುತ್ತಾರೆ. ಇದರ ಬಗ್ಗೆ ಇಲಾಖೆ ಗಮನಿಸಬೇಕು ಎಂದರು.

ಕೊನೆಯಲ್ಲಿ ಲೋಕೋಪಯೋಗಿ ಇಲಾಖೆ ಅಣಕು ಪುಣ್ಯತಿಥಿ­ಕಾರ್ಯವು ಶಾಸ್ತ್ರ ಬದ್ಧವಾಗಿ ನಡೆಯಿತು. ಇದೇ ವೇಳೆ ೧೫ಕ್ಕೂ ಹೆಚ್ಚು ಟ್ರ್ಯಾಕ್ಟ್‌ರ, ಎರಡು ಜೆಸಿಬಿ ಯಂತ್ರ ಹಾಗೂ ನೂರಾರು ಜನರು, ವಿದ್ಯಾರ್ಥಿಗಳು ಶ್ರಮದಾನದ ಮೂಲಕ ಐದು ಕಿ.ಮೀ ಉದ್ದದ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT