ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಸುರಕ್ಷತೆಗಾಗಿ ಸಮಿತಿ ನೇಮಿಸಿದ ಸುಪ್ರೀಂ ಕೋರ್ಟ್‌

Last Updated 22 ಏಪ್ರಿಲ್ 2014, 19:45 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್‌ಎಸ್‌): ರಾಷ್ಟ್ರದ ರಸ್ತೆಗಳನ್ನು ‘ಸಾವಿನ ಗುಂಡಿಗಳು’ ಎಂದು ಚಾಟಿ ಬೀಸಿರುವ ಸುಪ್ರೀಂ ಕೋರ್ಟ್‌, ರಸ್ತೆ ಸುರಕ್ಷತೆಗಾಗಿ ಮೂವರು ಸದಸ್ಯರ ಸಮಿತಿ ನೇಮಕ ಮಾಡಿದೆ. ಮೋಟಾರು ವಾಹನಗಳ ಕಾಯಿದೆಯಲ್ಲಿರುವ ನಿಯಮಗಳ ಪರಿಶೀಲನೆ ಹಾಗೂ ಅವುಗಳ ಅನುಷ್ಠಾನ ಕುರಿತು ಈ ಸಮಿತಿ ಗಮನ ವಹಿಸಲಿದೆ.

ಮುಖ್ಯ ನ್ಯಾಯಮೂರ್ತಿ ಪಿ.ಸದಾಶಿವಂ, ನ್ಯಾಯಮೂರ್ತಿಗಳಾದ ರಂಜನ್‌ ಗೊಗೋಯ್‌ ಮತ್ತು ಎನ್‌.ವಿ.ರಮಣ ಅವರ ಪೀಠ ಮಂಗಳವಾರ ಈ ಕ್ರಮ ಕೈಗೊಂಡಿದೆ. ನಿಯಮಾವಳಿಗಳ ಜಾರಿ, ಎಂಜಿನಿಯರಿಂಗ್‌, ಶಿಕ್ಷಣ ಮತ್ತು ತುರ್ತು ಚಿಕಿತ್ಸಾ ವ್ಯವಸ್ಥೆ– ಈ ನಾಲ್ಕು ಆಯಾಮಗಳನ್ನು ಆಧರಿಸಿ ರಾಷ್ಟ್ರದ ರಸ್ತೆಗಳಲ್ಲಿ ಸುರಕ್ಷತೆ ಹೆಚ್ಚಿಸುವ ತುರ್ತು ಅಗತ್ಯವಿದೆ ಎಂದು ಪೀಠ ಅಭಿಪ್ರಾಯಪಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT