ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಹೊಂಡದಲ್ಲಿ ಅರಳಿದ ಬಾದಲ್‌ ಕಲೆ

Last Updated 24 ಜುಲೈ 2016, 12:26 IST
ಅಕ್ಷರ ಗಾತ್ರ

ಬೆಂಗಳೂರು: ಕಲಾವಿದ ಬಾದಲ್ ನಂಜುಂಡಸ್ವಾಮಿ ಅವರು ನಗರದ ನಾಯಂಡಹಳ್ಳಿ ಜಂಕ್ಷನ್‌  ರಸ್ತೆಯ ‘ಹೊಂಡ’ದಲ್ಲಿ  ಭಾನುವಾರ ಕಲಾತ್ಮಕ ಚಿತ್ರ ಬಿಡಿಸುವ ಮೂಲಕ  ಗಮನ ಸೆಳೆದಿದ್ದಾರೆ.

ಈ ರಸ್ತೆಯಲ್ಲಿರುವ ಹೊಂಡವನ್ನು ಸುಂದರ ಕೊಳವನ್ನಾಗಿ ಮಾಪರ್ಡಿಸಿ  ಅದರಲ್ಲಿ  ತಾವರೆ ಹೂಗಳನ್ನು ಅರಳಿಸಿದ್ದಾರೆ. ನಂತರ ಯುವತಿಯೊಬ್ಬರ ಕೈಯಲ್ಲಿ  ಕಪ್ಪೆಯೊಂದನ್ನು ಕೊಡುವ ಮೂಲಕ ಗಾಢ ನಿದ್ರೆಯಲ್ಲಿರುವ ಪಾಲಿಕೆ ಅಧಿಕಾರಿಗಳನ್ನು ಎಚ್ಚರಿಸುವ ಕೆಲಸ ಮಾಡಿದ್ದಾರೆ.

ಕಲಾವಿದ ಬಾದಲ್‌ ನಂಜುಂಡಸ್ವಾಮಿ ಅವರು ಕಳೆದ ಕೆಲವು ವಷರ್ಗಳಿಂದ  ರಸ್ತೆಯ ಗುಂಡಿಗಳ ಸುತ್ತ ಕಲಾತ್ಮಕ ಚಿತ್ರಗಳನ್ನು ಬಿಡಿಸುವ ಮೂಲಕ ಪಾಲಿಕೆ ಅಧಿಕಾರಿಗಳನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದಾರೆ.

ಇಂತಹ ಎಷ್ಟೋ ಕಲಾ ಚಿತ್ರಗಳನ್ನು ಕಂಡ ಪಾಲಿಕೆ ಕೆಲವೇ ದಿನಗಳಲ್ಲಿ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಿದೆ. 

ಒಟ್ಟಿನಲ್ಲಿ ಬಾದಲ್‌ ಅವರ ಈ ಕಲಾತ್ಮಕ ಪ್ರತಿಭಟನೆಯ ಹಾದಿ ವಾಹನ ಸವಾರರಿಗೆ  ಮತ್ತು ಪಾದಾಚಾರಿಗಳಿಗೆ ಅನುಕೂಲ ಮಾಡಿಕೊಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT