ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಹಸ್ಯ ನಿಗಾ ಒಪ್ಪಲಾಗದು

ಅಮೆರಿಕಕ್ಕೆ ಸುಷ್ಮಾ ಖಡಕ್‌ ನುಡಿ
Last Updated 31 ಜುಲೈ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭಾರತದಲ್ಲಿ ರಾಜಕೀಯ ಮುಖಂಡರು ಹಾಗೂ ಇತ­ರರ ಮೇಲೆ ಅಮೆರಿಕದ ಗುಪ್ತಚರ ಸಂಸ್ಥೆ ನಿಗಾ ಇಟ್ಟಿದ್ದು ಸರಿಯಲ್ಲ ಎಂದು ಭಾರತವು ಅಮೆರಿಕಕ್ಕೆ ಖಡಾ­ಖಂಡಿತ­ವಾಗಿ ಹೇಳಿದೆ.

ಆದರೆ, ತನ್ನ ದೇಶದ ಕಣ್ಗಾವಲು ಕಾರ್ಯಕ್ರಮವನ್ನು ಬಲವಾಗಿ ಸಮ­ರ್ಥಿ­ಸಿ­­­ಕೊಂಡಿರುವ ಅಮೆರಿಕ, ಈ ವಿಷಯ­ವಾಗಿ  ಭಿನ್ನಾಭಿಪ್ರಾಯ ಇದ್ದಲ್ಲಿ ಉಭಯ ದೇಶಗಳ ಗುಪ್ತಚರ ಸಂಸ್ಥೆ­ಗಳು ಅವುಗಳನ್ನು ಬಗೆಹರಿಸಿ­ಕೊಳ್ಳಬಹುದು ಎಂದು ಪ್ರತಿಕ್ರಿಯಿಸಿದೆ.

ಅಮೆರಿಕದ ವಿದೇಶಾಂಗ ಕಾರ್ಯ­ದರ್ಶಿ ಜಾನ್‌ ಕೆರಿ ಅವರೊಂದಿ­ಗಿನ ಸಭೆ ಬಳಿಕ  ಗುರುವಾರ ರಾತ್ರಿ ಜಂಟಿ ಸುದ್ದಿ­ಗೋಷ್ಠಿಯಲ್ಲಿ ಮಾತನಾಡಿದ ವಿದೇ­ಶಾಂಗ ಸಚಿವೆ ಸುಷ್ಮಾ ಸ್ವರಾಜ್‌, ‘ಮಿತ್ರ ರಾಷ್ಟ್ರದ ಮೇಲೆ ಬೇಹುಗಾರಿಕೆ ಮಾಡು­ವುದು ಸರಿಯಲ್ಲ. ಇದನ್ನು ಒಪ್ಪು­­ವುದಕ್ಕೂ ಸಾಧ್ಯವಿಲ್ಲ’ ಎಂದು ನಿರ್ದಾಕ್ಷಿಣ್ಯವಾಗಿ ಹೇಳಿದರು.

2010ರಲ್ಲಿ ಬಿಜೆಪಿ ಮುಖಂಡರ ಮೇಲೆ ಅಮೆರಿಕದ ರಾಷ್ಟ್ರೀಯ ಭದ್ರತಾ ಸಂಸ್ಥೆ ರಹಸ್ಯ ನಿಗಾವಿಟ್ಟಿದ್ದ ವಿಷಯ­­ವನ್ನು  ಸಂಸ್ಥೆ ಮಾಜಿ ಗುತ್ತಿಗೆ­ದಾರ ಎಡ್ವರ್ಡ್‌ ಸ್ನೋಡೆನ್‌್ ಬಹಿರಂಗ­ಪಡಿಸಿದ್ದರು.

‘ರಹಸ್ಯ ನಿಗಾ ವಿಷಯ ಪತ್ರಿಕೆಗಳಲ್ಲಿ ವರದಿಯಾದಾಗ ಭಾರತದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು ಎನ್ನು­ವುದನ್ನು ನಾನು ಕೆರಿ ಗಮನಕ್ಕೆ ತಂದೆ’ ಎಂದು ಸುಷ್ಮಾ ಹೇಳಿದರು.

ಅಮೆರಿಕದ ಕಣ್ಗಾವಲು ಕಾರ್ಯ­ಕ್ರಮ­­ವ­ನ್ನು ಸಮರ್ಥಿಸಿಕೊಂಡ ಕೆರಿ, ‘ಭಾರತ­­ದೊಂದಿಗಿನ ನಮ್ಮ ಸಂಬಂಧ­ವನ್ನು ಗೌರವಿಸುತ್ತೇವೆ. ಭಯೋತ್ಪಾದನೆ ನಿಗ್ರ­ಹಕ್ಕೆ ಸಂಬಂಧಿಸಿ ಉಭಯ ದೇಶಗಳ ಮಧ್ಯೆ ಮಾಹಿತಿ ವಿನಿಮಯ ಕಾರ್ಯ­ಕ್ರಮಕ್ಕೂ ನಾವು ಬೆಲೆ ಕೊಡುತ್ತೇವೆ’ ಎಂದು ಹೇಳಿದರು.

ಐಐಟಿಗೆ ಕೆರಿ ಭೇಟಿ: ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ) ಎರಡು ಪ್ರಯೋಗಾಲಯಗಳಿಗೆ ಭೇಟಿ ನೀಡಿದ  ಜಾನ್‌ ಕೆರಿ ಅಲ್ಲಿನ ವಿದ್ಯಾರ್ಥಿಗ­ಳೊಂದಿಗೆ ಸಂವಾದ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT