ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕಾಲುವೆ ಹೂಳು ತೆಗಿಸಿ

Last Updated 2 ಮೇ 2016, 19:54 IST
ಅಕ್ಷರ ಗಾತ್ರ

ಬೆಂಗಳೂರು ಬೃಹತ್ ಮಹಾನಗರವಾಗಿ  ಬೆಳೆದು ಕೋಟ್ಯಾಂತರ ಜನರಿಗೆ ಆಶ್ರಯ ನೀಡಿದೆ. ಅವರು ವಾಸಿಸುವ ಸಲುವಾಗಿ ಮನೆಗಳು, ಅಪಾರ್ಟ್‌ಮೆಂಟ್‌ಗಳು ಅಧಿಕ ಪ್ರಮಾಣದಲ್ಲಿ ನಿಮಾ೯ಣವಾಗಿವೆ. ಅವುಗಳಿಂದ ಬರುವ ತ್ಯಾಜ್ಯ ನೀರನ್ನು ನಗರದಿಂದ ಹೊರಗೆ ಕಳಿಸುವ ಸಲುವಾಗಿ ವಿವಿಧ ಭಾಗಗಳಲ್ಲಿ ರಾಜಕಾಲುವೆಗಳ ನಿಮಾ೯ಣ ಮಾಡಿದೆ.

ಪ್ರಕಾಶನಗರದ ಗಾಯತ್ರಿ ವನದ ಬಳಿ ವಾಜಪೇಯಿ ಒಳಾಂಗಣದಲ್ಲಿ ಕ್ರೀಡಾ ಭವನದ ಪೂವ೯ಭಾಗದಲ್ಲಿ ರಾಜಕಾಲುವೆಯನ್ನು ನಿಮಿ೯ಸಲಾಗಿದೆ. ಆದರೆ ನಿವ೯ಹಣಾ ಕೊರತೆಯ ಕಾರಣ ಕಾಲುವೆಯಲ್ಲಿ ಹೂಳುತುಂಬಿ ಸಣ್ಣಗಿಡ ಕಂಟಿಗಳು ಬೆಳೆದು ಕೊಳಚೆ ನೀರುಸರಾಗವಾಗಿ ಹರಿದು ಹೋಗದೆ ಡೆಂಗಿ, ಮಲೇರಿಯಾ ಮುಂತಾದ ರೋಗ ಹರಡುವ ವಿವಿಧ  ಪ್ರಕಾರದ ಸೊಳ್ಳೆಗಳ ಉತ್ಪಾದನಾ ಕೇಂದ್ರದಂತಾಗಿದೆ.

ಅದೇ ಪ್ರಕಾರ ಶೇಷಾದ್ರಿಪುರದಿಂದ ಮಲ್ಲೇಶ್ವರ ಸಂಪರ್ಕ ರಸ್ತೆಯ ಕೆಳಭಾಗದಲ್ಲಿ ಕೂಡಾ ಒಂದು ರಾಜಕಾಲುವೆಯಿದ್ದು ಅದರಲ್ಲಿ ಕೂಡ ಹೂಳು ತುಂಬಿದೆ ಹಾಗೂ ಗಿಡಗಳು ಬೆಳೆದು ಕೊಳಚೆ ನೀರು ಸರಾಗವಾಗಿ ಹೋಗದೆ ನೀರು ಮಲೆತಿರುವದನ್ನು ಕಾಣಬಹುದಾಗಿದೆ. ಅಲ್ಲಿ ಸಹಿತ ರೋಗಾಣುಗಳು ಉತ್ಪಾದನೆಯಾಗಿ ರೋಗ ಹರಡುತ್ತಿದೆ.

ಜನರ ಆರೋಗ್ಯ ರಕ್ಷಿಸಲು ಬಿಬಿಎಂಪಿ ಅಧಿಕಾರಿಗಳು ರಾಜಕಾಲುವೆಗಳನ್ನು ನಿಮ೯ಲವಾಗಿರಿಸಲು ಕ್ರಮ ಜರುಗಿಸಲು  ಕೋರುತ್ತೇನೆ.

–ಬಸವರಾಜ ಹುಡೇದಗಡ್ಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT