ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಮನೆತನದ ಕೈತಪ್ಪಿದ ದೇಗುಲ ಆಡಳಿತ

Last Updated 25 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ಕೇರಳದ ಶ್ರೀ ಪದ್ಮನಾಭ ಸ್ವಾಮಿ ದೇವಾಲಯದ ಆಡಳಿತ ನಿರ್ವಹಣೆಗಾಗಿ ಸುಪ್ರೀಂಕೋರ್ಟ್‌್ ಗುರುವಾರ ರಚಿಸಿರುವ ಐವರು ಸದಸ್ಯರ ಸಮಿತಿಯಲ್ಲಿ ತಿರುವಾಂಕೂರು ರಾಜ ಮನೆತದವರು ಇಲ್ಲ ಎನ್ನುವುದು  ದೇವಾಲ­ಯದ ಇತಿಹಾಸದಲ್ಲಿಯೇ ಮಹತ್ವದ ಬೆಳವಣಿಗೆ­ಯಾಗಿದೆ.

ತಿರುವನಂತಪುರದ ಜಿಲ್ಲಾ ನ್ಯಾಯಾ­ಧೀಶರು ಈ ಸಮಿತಿಯ ಅಧ್ಯಕ್ಷರಾಗಿ­ರುತ್ತಾರೆ. ದೇವಸ್ಥಾನದ ತಂತ್ರಿ ಸೇರಿದಂತೆ ಇನ್ನೂ ಮೂರು ಜನ ಸಮಿತಿಯ ಸದಸ್ಯರಾಗಿರುತ್ತಾರೆ. ಇದಲ್ಲದೇ ಹಿರಿಯ ಐಎಎಸ್‌ ಅಧಿಕಾರಿ ಸತೀಶ್‌ ಕುಮಾರ್‌ ಅವರನ್ನು ದೇವಸ್ಥಾನದ ಕಾರ್ಯ­ನಿರ್ವಾ­ಹಕ ಅಧಿಕಾರಿಯಾಗಿ ನೇಮಿಸಲಾಗಿದೆ.

ದೇವಾಲಯದ ಆಡಳಿತ ನಿರ್ವಹಣೆ­ಯಲ್ಲಿ ರಾಜಮನೆತನದವರು ಮೂಗು ತೂರಿ­ಸ­ದಂತೆ ನಿರ್ದೇಶನ ನೀಡ­ಬೇ­ಕೆಂದು ಕೋರಿ ನ್ಯಾಯಾ­ಲಯದ ಸಹಾ­ಯಕ ಗೋಪಾಲ ಸುಬ್ರಮಣಿ­ಯಮ್‌್ ಕೋರ್ಟ್‌ಗೆ  ಮನವಿ ಸಲ್ಲಿಸಿದ್ದರು.

ರಾಜಮನೆತನದ ಮನೆ ದೇವರು: 18ನೇ ಶತಮಾನದಿಂದಲೂ ಶ್ರೀ ಪದ್ಮನಾಭ ಸ್ವಾಮಿ ತಿರುವಾಂಕೂರು ರಾಜ­ಮನೆತನದ ಮನೆ ದೇವರು. 1947ರಲ್ಲಿ ಅರಸೊತ್ತಿಗೆ ಅಂತ್ಯ­ಗೊಂಡಾಗ ತಿರುವಾಂ­ಕೂರಿನ ಬಹು­ತೇಕ ದೇಗುಲ­ಗಳು ದೇವ­ಸ್ಥಾನ ಮಂಡಳಿಗಳ ಸುಪರ್ದಿಗೆ ಬಂದವು.

ಆದರೆ ಪದ್ಮನಾಭಸ್ವಾಮಿ ದೇವಾಲಯದ ಆಡಳಿತ ನಿರ್ವಹಣೆ­ಯನ್ನು ಮಾತ್ರ ರಾಜ­ಮನೆ­ತನಕ್ಕೆ ಬಿಟ್ಟು­ಕೊಡ­ಲಾಯಿತು. ಅಲ್ಲಿಂದ ಮುಂದೆ ಕೇರಳದ ಚುನಾಯಿತ ಸರ್ಕಾರ­ಗಳು ದೇವಾ­ಲಯ ಅಥವಾ ನೆಲಮಾಳಿಗೆ­ಯಲ್ಲಿನ ಅಪಾರ ಸಂಪತ್ತಿನ ಬಗ್ಗೆ ಅಷ್ಟೇನು ತಲೆ ಕೆಡಿಸಿಕೊಳ್ಳಲಿಲ್ಲ. ಹಳೆ ತಲೆಮಾರಿ­ನವರು ಇಲ್ಲಿನ ನೆಲಮಾಳಿಗೆ­ಯಲ್ಲಿರುವ ‘ಮಹಾ ನಿಧಿ’ ಬಗ್ಗೆ ಮಾತ­ನಾಡಿ­ಕೊಳ್ಳುತ್ತಿದ್ದರೂ ಸಾರ್ವ­ಜನಿಕರು ಮಾತ್ರ ಇದನ್ನು ನಂಬುತ್ತಿರಲಿಲ್ಲ.

ಲೆಕ್ಕಪರಿಶೋಧನೆ ಕಷ್ಟದ ಕೆಲಸ
ಶ್ರೀ ಪದ್ಮನಾಭ ಸ್ವಾಮಿ ದೇವಾಲಯದ ವಿಶೇಷ ಲೆಕ್ಕಪರಿ­ಶೋಧನೆಯ ಉಸ್ತುವಾರಿ ವಹಿಸಿ­ಕೊಳ್ಳುವಂತೆ ಸುಪ್ರೀಂಕೋರ್ಟ್‌್ ನೀಡಿರುವ ಆದೇಶವನ್ನು ಗೌರವಿ­ಸು­ತ್ತೇನೆ. ಇದೊಂದು ಕಷ್ಟದ ಕೆಲಸ­ವಾ­ಗಿದ್ದು, ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ ಎಂದು ನಿವೃತ್ತ ಮಹಾ­­ಲೇಖಪಾಲ ವಿನೋದ್‌ ರಾಯ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT