ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಸ್ತಾನ ಪಠ್ಯದಲ್ಲಿ ಅಸಾರಾಂ ‘ಮಹಾನ್‌ ಸಂತ’

Last Updated 2 ಆಗಸ್ಟ್ 2015, 10:19 IST
ಅಕ್ಷರ ಗಾತ್ರ

ಜೋದ್‌ಪುರ (ಪಿಟಿಐ): ಅತ್ಯಾಚಾರ ಆರೋಪ ಹೊತ್ತಿರುವ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ಅವರು 3ನೇ ತರಗತಿ ಪಠ್ಯಪುಸ್ತಕದಲ್ಲಿ ‘ಮಹಾನ್‌ ಸಂತ’ನ ಗೌರವ ಪಡೆದಿದ್ದಾರೆ.

ಜೋದ್‌ಪುರ ಜೈಲಿನಲ್ಲಿರುವ ಅಸಾರಾಂ ಅವರು ರಾಜಸ್ತಾನದ ಪಠ್ಯ ಪುಸ್ತಕದಲ್ಲಿ ಸ್ವಾಮಿವಿವೇಕಾನಂದ, ಮದರ್‌ ತೆರೆಸಾ, ರಾಮಕೃಷ್ಣ  ಪರಮಹಂಸರ ಪಠ್ಯದ ಜೊತೆ ಸ್ಥಾನ ಪಡೆದಿದ್ದಾರೆ. ಇವರ ಜೊತೆ ಯೋಗಗುರು ಬಾಬಾ ರಾಮದೇವ್‌ ಅವರ ಬಗ್ಗೆಯೂ ಒಂದು ಅಧ್ಯಾಯವಿದೆ.

ನೈತಿಕ ಶಿಕ್ಷಣ ಮತ್ತು ಸಾಮಾನ್ಯ ಜ್ಞಾನ ಪಠ್ಯಪುಸ್ತಕದಲ್ಲಿರುವ ಅಸಾರಾಂ ಅವರ ಪಠ್ಯವನ್ನು 3ನೇ ತರಗತಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲಾಗುತ್ತಿದೆ.

ರಾಜಸ್ತಾನದ ಹಲವು ಜಿಲ್ಲೆಗಳಲ್ಲಿ ಬೋಧನೆ ಮಾಡಲಾಗುತ್ತಿದ್ದ ಈ ಪುಸ್ತಕವನ್ನು ದೆಹಲಿ ಮೂಲದ ಪ್ರಕಾಶನ ಸಂಸ್ಥೆ ಸರಬರಾಜು ಮಾಡುತ್ತಿತ್ತು. 

ರಾಜಸ್ತಾನದ ಶಿಕ್ಷಣ ಇಲಾಖೆ ಈ ಬಗ್ಗೆ ದೂರು ದಾಖಲಿಸಿಕೊಂಡು ತನಿಖೆ ನಡೆಸಲು ಮುಂದಾಗಿದೆ. ಅಸಾರಾಂ ಅವರ ಪಠ್ಯವನ್ನು ಪುಸ್ತಕದಿಂದ ತೆಗೆದು ಹಾಕಲಾಗುವುದು ಎಂದು ಶಿಕ್ಷಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT