ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜೀನಾಮೆಯೊಂದೇ ನಮ್ಮ ಮುಂದಿರುವ ಹಾದಿಯಲ್ಲ

Last Updated 19 ಮೇ 2014, 15:14 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಲೋಕಸಭೆ ಚುನಾವಣೆಯಲ್ಲಿ ಉಂಟಾದ ಪಕ್ಷದ ಸೋಲಿಗೆ ವರಿಷ್ಠರ ರಾಜೀನಾಮೆಯೊಂದೇ ನಮ್ಮ ಮುಂದಿರುವ ಹಾದಿಯಲ್ಲ ಎಂದು ಕಾಂಗ್ರೆಸ್ ಮುಖಂಡ ಮನೀಶ್ ತಿವಾರಿ ಸೋಮವಾರ ಹೇಳಿದರು.

ಪಕ್ಷದ ಕಾರ್ಯಕಾರಿಣಿ ಸಮಿತಿ (ಸಿಡಬ್ಲ್ಯುಸಿ) ಸಭೆಗೂ ಮುನ್ನ ತಿವಾರಿ ಅವರಿಂದ ಈ ಹೇಳಿಕೆ ಹೊರಬಿದ್ದಿದೆ.

ಸೋಲಿನ ಹೊಣೆ ಹೊತ್ತು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡುತ್ತಾರಾ? ಎಂದು ವರದಿಗಾರರ ಪ್ರಶ್ನೆಗೆ ಉತ್ತರಿಸಿದ ತಿವಾರಿ ಅವರು `ಫಲಿತಾಂಶವು ತುಂಬಾ ನಿರಾಸೆ ಉಂಟುಮಾಡಿದೆ. ರಾಜೀನಾಮೆ ಕುರಿತಂತೆ ನಾನು ಯೋಚನೆ ಮಾಡಿಲ್ಲ. ಹುದ್ದೆ ತೊರೆಯುವುದೊಂದೇ ಮುಂದಿನ ದಾರಿಯಲ್ಲ' ಎಂದು ತಿಳಿಸಿದರು.

`ಕಾಂಗ್ರೆಸ್‌ನ ಪ್ರಮಾದಗಳ ಕುರಿತಂತೆ ಆತ್ಮಾವಲೋಕನ ನಡೆಸುವ ಅಗತ್ಯವಿದೆ. ಅಷ್ಟೇ ಅಲ್ಲದೇ, ವಿರೋಧ ಪಕ್ಷದವರು ಬಳಸಿದ ಕಾರ್ಯತಂತ್ರ ಕಂಡುಹಿಡಿಯಬೇಕಿದೆ' ಎಂದು  ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವರಾದ ತಿವಾರಿ ಹೇಳಿದರು.

`ಈವರೆಗಿನ ಪ್ರಕ್ರಿಯೆ ಕುರಿತಂತೆ ಸಮಗ್ರವಾದ ವಿಶ್ಲೇಷಣೆ ಮತ್ತು ಆತ್ಮಾವಲೋಕನ ನಡೆಸುವ ಅಗತ್ಯವಿದೆ. ಈ ಪ್ರಕ್ರಿಯೆಯಿಂದಲೇ ಪಕ್ಷವನ್ನು ಪುನರ್ ಸಂಘಟನೆ ಸಾಧ್ಯ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT