ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜೀವ್ ಆವಾಸ್ ಯೋಜನೆ: 5 ಲಕ್ಷ ಮನೆ ನಿರ್ಮಾಣ ಗುರಿ

Last Updated 22 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜೀವ್ ಆವಾಸ್ ಯೋಜನೆ (ಆರ್‌ಎವೈ) ಅಡಿಯಲ್ಲಿ   ರಾಜ್ಯ­ದಲ್ಲಿ 5 ಲಕ್ಷ ಮನೆಗಳನ್ನು ನಿರ್ಮಿ­ಸುವ ಗುರಿ ಹೊಂದಲಾಗಿದೆ’ ಎಂದು ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ  ಅಧ್ಯಕ್ಷ  ಬಿ.ಆರ್.ರಮೇಶ್ ಅವರು ತಿಳಿಸಿದರು.

ಮಂಡಳಿ ವತಿಯಿಂದ ನಗರದ ಲಕ್ಷ್ಮಣ್ ರಾವ್ ನಗರದಲ್ಲಿ ಸೋಮ­ವಾರ ಏರ್ಪಡಿಸಿದ್ದ 1,614 ಮನೆಗಳ  ನಿರ್ಮಾ­ಣದ ಶಂಕುಸ್ಥಾಪನೆ ನೆರ­ವೇರಿ­ಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಗರದಲ್ಲಿ 597 ಕೊಳಚೆ ಪ್ರದೇಶ­ಗಳಿವೆ. ಅವುಗಳ ಪೈಕಿ 55 ಕೊಳೆಗೇರಿ ಪ್ರದೇಶ­­ಗಳಲ್ಲಿ 13  ವಿವಿಧ  ಯೋಜನೆ­ಗಳ ಮೂಲಕ ₨ 674,28 ಕೋಟಿ ಮೊತ್ತದ  12,435 ಮನೆಗಳ  ನಿರ್ಮಾ­ಣಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರ­ದಿಂದ ೨೦೧೩–೧೪ ಮತ್ತು ೨೦೧೪–೧೫ನೇ ಸಾಲಿನಲ್ಲಿ ಅನುಮೋದನೆಯನ್ನು ಪಡೆದುಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.

ಶಂಕುಸ್ಥಾಪನೆ ನೆರವೇರಿಸಿ ಮಾತ­ನಾ­ಡಿದ ವಸತಿ ಸಚಿವ ಅಂಬರೀಷ್ ಅವರು, ‘ಆರ್‌ಎವೈ ಅಡಿಯಲ್ಲಿ  ಕೇಂದ್ರ ಸರ್ಕಾ­ರವು ಶೇ 50 ಅನುದಾನ  ಒದಗಿಸಿದರೆ, ರಾಜ್ಯ ಸರ್ಕಾರವು ಶೇ 40ರಷ್ಟು ಹಣ ನೀಡ­ಲಿದೆ.  ಉಳಿದ ಶೇ 10 ಹಣವನ್ನು ಫಲಾನುಭವಿಗಳು  ನೀಡುವ ಮೂಲಕ ವಸತಿ­ಯನ್ನು ಪಡೆಯಬಹುದು’ ಎಂದರು.

ಸಚಿವ ರಾಮಲಿಂಗಾರೆಡ್ಡಿ ಅವರು ಮಾತನಾಡಿ, ‘ಆರ್‌ಎವೈ ಅಡಿಯಲ್ಲಿ ಜಯರಾಜ್ ನಗರದಲ್ಲಿ 80, ಲಕ್ಷ್ಮಣ್ ರಾವ್ ನಗರದಲ್ಲಿ 534, ಅಂಬೇಡ್ಕರ್ ನಗರದಲ್ಲಿ 476, ಜೆ.ಕೆ.ಪುರದಲ್ಲಿ 256, ರುದ್ರಪ್ಪ ಗಾರ್ಡನ್‌ನಲ್ಲಿ  144, ನಾಗಮ್ಮ ನಗರ 80 ಮತ್ತು ಧೀನಬಂದು ನಗರದಲ್ಲಿ 44 ಮನೆಗಳ ನಿರ್ಮಾಣ ಮಾಡಲಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT