ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಕ್ಕೆ ಕೇಂದ್ರದಿಂದ ಸಿಗಲಿದೆ ₹ 900 ಕೋಟಿ

Last Updated 29 ಜುಲೈ 2016, 19:30 IST
ಅಕ್ಷರ ಗಾತ್ರ

ನವದೆಹಲಿ: ಪರಿಹಾರ ಅರಣ್ಯೀಕರಣ ಮಸೂದೆಗೆ ಸಂಸತ್ತಿನ ಅನುಮೋದನೆ ದೊರೆತಿರುವ ಕಾರಣ, ಅರಣ್ಯೀಕರಣ ಹಾಗೂ ಪರಿಸರ ಸಂರಕ್ಷಣೆಗೆ ಕರ್ನಾಟಕಕ್ಕೆ ಕೇಂದ್ರದಿಂದ ₹ 917 ಕೋಟಿ ಸಿಗಲಿದೆ.

ಮೂಲಸೌಕರ್ಯ ಮತ್ತು ಕೈಗಾರಿಕಾ ಉದ್ದೇಶಗಳಿಗೆ ದೊಡ್ಡ ಪ್ರಮಾಣದಲ್ಲಿ ಅರಣ್ಯ ಭೂಮಿ ಬಳಸಿಕೊಂಡಿರುವ ತಮಿಳುನಾಡು (₹106 ಕೋಟಿ), ಕೇರಳ (₹ 76 ಕೋಟಿ), ಆಂಧ್ರಪ್ರದೇಶ (₹ 2,223 ಕೋಟಿ) ಮತ್ತು ಮಹಾರಾಷ್ಟ್ರ (₹ 2,435 ಕೋಟಿ) ರಾಜ್ಯಗಳಿಗೂ ಕೇಂದ್ರದಿಂದ ಹಣಕಾಸಿನ ಅನುದಾನ ಸಿಗಲಿದೆ.

ಒಡಿಶಾ, ಛತ್ತೀಸಗಡ, ಮಧ್ಯಪ್ರದೇಶ ಮತ್ತು ಜಾರ್ಖಂಡ್ ರಾಜ್ಯಗಳಿಗೆ ತಲಾ ₹ 3 ಸಾವಿರ ಕೋಟಿಗಿಂತ ಹೆಚ್ಚು ಹಣ ಸಿಗಲಿದೆ. ಒಡಿಶಾಕ್ಕೆ ಅಂದಾಜು ₹ 6 ಸಾವಿರ ಕೋಟಿ ಸಿಗಲಿದೆ ಎನ್ನಲಾಗಿದೆ.

ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪರಿಹಾರ ಅರಣ್ಯೀಕರಣ ನಿಧಿ ಹಾಗೂ ಈ ನಿಧಿಯ ನಿರ್ವಹಣೆಗೆ ಪ್ರಾಧಿಕಾರ ರಚಿಸಬೇಕು ಎಂದು ಮಸೂದೆ ಹೇಳುತ್ತದೆ. ಯೋಜನೆಗಳಿಗೆ ಅರಣ್ಯ ಜಮೀನು ಬಳಸಿಕೊಳ್ಳುವವರು ನಿಧಿಗೆ ಹಣ ಕೊಡಬೇಕಾಗುತ್ತದೆ.

ಈ ನಿಧಿಯಲ್ಲಿ ಈಗ ₹ 42 ಸಾವಿರ ಕೋಟಿ ಇದೆ. ಇದು ಸುಪ್ರೀಂ ಕೋರ್ಟ್‌ ಕಣ್ಗಾವಲಿನಲ್ಲಿದೆ. ನಿಧಿಗೆ ಪ್ರತಿ ವರ್ಷ ₹ 6 ಸಾವಿರ ಕೋಟಿ ಸಿಗುವ ಸಾಧ್ಯತೆ ಇದೆ. ಮಸೂದೆಗೆ ರಾಜ್ಯಸಭೆ ಶುಕ್ರವಾರ ಧ್ವನಿಮತದ ಮೂಲಕ ಅಂಗೀಕಾರ ನೀಡಿತು. ಲೋಕಸಭೆ ಈ ಹಿಂದೆಯೇ ಅಂಗೀಕಾರ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT