ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಗಳಿಗೆ ಕೇಂದ್ರ ಸೂಚನೆ

ಗಣಿ ಮಂಜೂರಾತಿ ಆದೇಶ
Last Updated 2 ನವೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ಗಣಿ ಸಚಿವಾಲಯದ ಅನು­ಮತಿ ಪಡೆದ ಕಂಪನಿಗಳಿಗೆ ಶೀಘ್ರವೇ ಮಂಜೂರಾತಿ ಆದೇಶಗಳನ್ನು ನೀಡುವಂತೆ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.

ಖನಿಜ ಶೋಧನಾ ಪರವಾನಗಿ (ಪಿಎಲ್‌) ಅಥವಾ ಗಣಿ ಪರವಾನಗಿ ಕೋರಿ ಸಲ್ಲಿಸಲಾದ ಅರ್ಜಿಗಳಿಗೆ ಗಣಿ ಸಚಿವಾಲಯ ಅನುಮತಿ ನೀಡುತ್ತಿ­ದ್ದಂತೆಯೇ ರಾಜ್ಯ ಸರ್ಕಾರಗಳು ಮಂಜೂರಾತಿ ಆದೇಶ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಮಾರ್ಗದರ್ಶಿ ಸೂತ್ರದಲ್ಲಿ ತಿಳಿಸಲಾಗಿದೆ.

ಗಣಿ ಸಚಿವಾಲಯದ ಅನುಮತಿ ಪಡೆದ ಒಂದು ತಿಂಗಳೊಳಗೆ ಅಂತಿಮ ಮಂಜೂರಾತಿ ಆದೇಶ ನೀಡಬೇಕು ಎಂದು ರಾಜ್ಯಗಳಿಗೆ ಸಲಹೆ ನೀಡಲಾಗಿದೆ. ಪ್ರಸ್ತುತ ಪಿಎಲ್‌ ನೀಡಲು ೯ ತಿಂಗಳ ಕಾಲಮಿತಿ ಇದ್ದರೆ, ಗಣಿ ಪರವಾನಗಿ ನೀಡಲು ೧೨ ತಿಂಗಳ ಕಾಲಮಿತಿ ನಿಗದಿ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT