ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಮಳೆ ಕ್ಷೀಣ: 3,417 ಮನೆಗಳಿಗೆ ಹಾನಿ

Last Updated 1 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಉತ್ತರ ಕರ್ನಾಟಕ ಮತ್ತು ಹೈದರಾ­ಬಾದ್ ಕರ್ನಾಟಕದಲ್ಲಿ ಸೋಮವಾರ ಮಳೆ ಕ್ಷೀಣಿಸಿತ್ತು. ಕೊಡಗು ಜಿಲ್ಲೆಯಲ್ಲಿ ಸ್ವಲ್ವ ಚುರುಕು-ಗೊಂಡಿತ್ತು. ನಾಲ್ಕೈದು ದಿನಗಳಿಂದ ಎಡೆಬಿಡದೆ ಸುರಿದ ಮಳೆಯಿಂದ ಗದಗ ಜಿಲ್ಲೆಯಲ್ಲಿ 1,600, ಗುಲ್ಬರ್ಗ ಜಿಲ್ಲೆಯಲ್ಲಿ 900, ಯಾದಗಿರಿ ಜಿಲ್ಲೆಯಲ್ಲಿ 820 ಮತ್ತು ಹಾವೇರಿ ಜಿಲ್ಲೆಯಲ್ಲಿ 97 ಸೇರಿ 3,417 ಮನೆಗಳಿಗೆ ಹಾನಿಯಾಗಿದೆ.

ಗದಗ ಜಿಲ್ಲೆಯಲ್ಲಿ ನಾಲ್ಕೈದು ದಿನ­ಗಳಿಂದ ಸುರಿದ ಜಡಿಮಳೆ ಸೋಮವಾರ ಇಳಿಮುಖ-ವಾಗಿದೆ. ವಿವಿಧೆಡೆ ಮನೆಗಳು ಕುಸಿದು ತೊಂದರೆ-ಗೀಡಾದ ಜನರಿಗಾಗಿ ಗದಗ ಜಿಲ್ಲೆಯ ರೋಣ ತಾಲ್ಲೂಕಿನಲ್ಲಿ ಆರು ಗಂಜಿ ಕೇಂದ್ರಗಳನ್ನು ತೆರೆಯ­ಲಾಗಿದ್ದು, ಸೋಮವಾರವೂ ಈ ಕೇಂದ್ರ-ಗಳು ಮುಂದುವರಿದಿವೆ.

ಜಿಲ್ಲಾಧಿಕಾರಿಗಳ ಆದೇಶ ಬರುವ­ವರೆಗೆ ಗಂಜಿ ಕೇಂದ್ರಗಳನ್ನು ಮುಂದುರಿ­ಸಲಾಗುವುದು ಎಂದು ತಹಶೀಲ್ದಾರ್ ಚಂದ್ರಯ್ಯ ತಿಳಿಸಿದ್ದಾರೆ.
ಹಾವೇರಿ ಜಿಲ್ಲೆಯಲ್ಲಿ ನಾಲ್ಕೈದು ದಿನಗಳಿಂದ ಸುರಿದ ಮಳೆಯಿಂದ 97 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ವರದಾ, ಕುಮುದ್ವತಿ, ತುಂಗ-ಭದ್ರಾ ಹಾಗೂ ಧರ್ಮಾ ತುಂಬಿ ಹರಿ­ಯುತ್ತಿ-ದ್ದು, ಅಪಾಯದ ಮಟ್ಟ ಮೀರಿಲ್ಲ.

ಕೃಷ್ಣಾ ಒಳಹರಿವು ಹೆಚ್ಚಳ:  ಬೆಳಗಾವಿ ಜಿಲ್ಲೆ-ಯಲ್ಲಿ ಸೋಮವಾರ ಮಳೆ ಇಳಿಮುಖ-ವಾಗಿ-ದ್ದರೂ ಮಹಾ­ರಾಷ್ಟ್ರ­ದಲ್ಲಿ ಕೃಷ್ಣಾ ನದಿ ಜಲಾ-ನಯನ ಪ್ರದೇಶಗಳಲ್ಲಿನ ಧಾರಾಕಾರ ಮಳೆ­ಯಿಂದಾಗಿ ರಾಜ್ಯಕ್ಕೆ ಹರಿದು ಬರುವ ನೀರಿನ ಪ್ರಮಾಣ ಹೆಚ್ಚತೊಡಗಿದೆ. ಸೋಮವಾರ ಮಹಾರಾಷ್ಟ್ರದ ಕಾಳಮ್ಮ-ವಾಡಿ ಜಲಾಶಯದಿಂದ ದೂಧಗಂಗಾ ನದಿಗೆ 12,008 ಕ್ಯೂಸೆಕ್‌ ಹಾಗೂ ರಾಜಾಪುರ ಬ್ಯಾರೇಜ್‌-ನಿಂದ ಕೃಷ್ಣಾ ನದಿಗೆ 50,421-ಕ್ಯೂಸೆಕ್‌ ನೀರು ಹರಿಸಿರುವುದರಿಂದ ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿಯಲ್ಲಿ 62,429 ಕ್ಯೂಸೆಕ್‌ ಒಳಹರಿವು ದಾಖಲಾಗಿದೆ.

ಮಹಾರಾಷ್ಟ್ರದ ಮಹಾ­ಬಳೇಶ್ವರದಲ್ಲಿ 122 ಮಿ.ಮೀ., ನವಜಾದಲ್ಲಿ 96 ಮಿ.ಮೀ., ಹಾಗೂ ಕೊಲ್ಹಾಪುರದಲ್ಲಿ 67 ಮಿ.ಮೀ.ಮಳೆ ದಾಖಲಾಗಿದೆ. ಚಿಕ್ಕೋಡಿ ತಾಲ್ಲೂಕಿನ ಕಾರದಗಾ–ಭೋಜ್‌ ನಡುವಿನ ಸೇತುವೆ ಸೋಮ­ವಾರ ಮುಳುಗಡೆ-ಯಾಗಿದೆ. ತಾಲ್ಲೂಕಿ­ನಲ್ಲಿ ನಾಲ್ಕು ದಿನಗಳಿಂದ ಕಲ್ಲೋಳ– ಯಡೂರ ಮತ್ತು ಜತ್ರಾಟ– ಭೀವಶಿ ಕೆಳಮಟ್ಟದ ಸೇತುವೆಗಳು ಜಲಾವೃತ­ಗೊಂಡಿ-ರುವ ಸ್ಥಿತಿಯಲ್ಲಿಯೇ ಇವೆ.

ಪ್ರವಾಹ ಇಳಿಮುಖ: ಗುಲ್ಬರ್ಗ ಜಿಲ್ಲೆಯ ಕಾಗಿಣಾ ನದಿಯ ನೀರಿನ ಪ್ರವಾಹ ಇಳಿಮುಖ-ವಾಗಿದ್ದು, ಸತತ 15 ಗಂಟೆಗಳ ಕಾಲ ಸ್ಥಗಿತ­ಗೊಂಡಿದ್ದ ಗುಲ್ಬರ್ಗ–ಚಿತ್ತಾಪುರ ಮತ್ತು ಗುಲ್ಬರ್ಗ–ಸೇಡಂ ನಡುವಿನ ರಸ್ತೆ ಸಂಚಾರ ಆರಂಭಗೊಂಡಿದೆ. ಮಳಖೇಡ ಬಳಿಯ ಸಂಗಾವಿ ಸೇತುವೆಗೆ ಭಾನು-ವಾರ ಕಟ್ಟಿಹಾಕಿದ್ದ ವ್ಯಕ್ತಿಯೊಬ್ಬರ ಶವ-ವನ್ನು ಸೋಮವಾರ ನದಿಯಿಂದ ಹೊರತೆಗೆದ ಮಳಖೇಡ ಪೊಲೀಸರು,  ಚಿಂಚೋಳಿ ತಾಲ್ಲೂ-ಕಿನ ಸುಲೇಪೇಟ ಪೊಲೀಸರಿಗೆ ಹಸ್ತಾಂತರಿ­ಸಿದರು.

‘ಜಿಲ್ಲೆಯಲ್ಲಿ ಇದುವರೆಗೆ 900 ಮನೆಗಳು ಭಾಗಶಃ ಕುಸಿದಿದ್ದು  ₨ 1.30 ಕೋಟಿ ಹಾಗೂ 15,270 ಹೆಕ್ಟೇರ್ ಬೆಳೆ ಹಾನಿಯಿಂದ ₨17.5 ಕೋಟಿ ನಷ್ಟ ಉಂಟಾ-ಗಿದೆ’ ಎಂದು ಜಿಲ್ಲಾ----ಧಿಕಾರಿ ಡಾ.ಎನ್.ವಿ.ಪ್ರಸಾದ್ ತಿಳಿಸಿದ್ದಾರೆ. ಯಾದಗಿರಿ ಜಿಲ್ಲೆಯಲ್ಲಿ ಸೋಮ­ವಾರ ಅಲ್ಪ ಪ್ರಮಾಣದ ಮಳೆಯಾಗಿದೆ. ಒಂದು ವಾರದಿಂದ ಸುರಿದ ಮಳೆಯಿಂದ ಜಿಲ್ಲೆಯ ಸುಮಾರು 820 ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.

ವೃದ್ಧೆ ಸಾವು: ಚಿತ್ರದುರ್ಗ ಜಿಲ್ಲೆ ಭರಮಸಾಗರ ಹೋಬಳಿಯ ಕಾಲ್ಗೆರೆ ಗ್ರಾಮದಲ್ಲಿ ಭಾನುವಾರ ರಾತ್ರಿ ಮನೆಯ ಗೋಡೆ ಕುಸಿದು ಲಕ್ಷ್ಮಮ್ಮ (65) ಎಂಬುವವರು ಮೃತಪಟ್ಟಿದ್ದಾರೆ. ಕೆಲವು ದಿನಗಳಿಂದ ಸುರಿಯುತ್ತಿರುವ  ಮಳೆಗೆ ತೇವಗೊಂಡಿದ್ದ ಗೋಡೆ ಭಾನು­ವಾರ ರಾತ್ರಿ ಮಲಗಿದ್ದ ಲಕ್ಷ್ಮಮ್ಮ ಅವರ ಮೇಲೆ ಬಿದ್ದಿದೆ. ಘಟನೆ ನಡೆದ ವೇಳೆ ಲಕ್ಷ್ಮಮ್ಮ ಅವರ ಇಬ್ಬರು ಪುತ್ರರು, ಮೊಮ್ಮಕ್ಕಳು ಗ್ರಾಮದಲ್ಲಿ ನಡೆಯು-ತ್ತಿದ್ದ ಸಾರ್ವಜನಿಕ ಗಣಪತಿ ವಿಸರ್ಜನೆ ಮೆರ-ವಣಿಗೆ ನೋಡಲು ಹೋಗಿದ್ದ ಕಾರಣ ಅಪಾಯ-ದಿಂದ ಪಾರಾಗಿದ್ದಾರೆ.

8 ಮನೆಗೆ ಹಾನಿ: ದಾವಣಗೆರೆ ಜಿಲ್ಲೆಯಲ್ಲಿ ಸತತ ಮಳೆಯಿಂದಾಗಿ ಹರಿಹರ ತಾಲ್ಲೂಕಿನಲ್ಲಿ 5 ಮನೆ, ಹೊನ್ನಾಳಿ ತಾಲ್ಲೂಕಿನಲ್ಲಿ 2 ಮನೆ ಮತ್ತು ಚನ್ನಗಿರಿ ತಾಲ್ಲೂಕಿನಲ್ಲಿ 1 ಸೇರಿ ಒಟ್ಟು  8  ಮನೆಗಳು ಭಾಗಶ: ಹಾನಿಗೊಳಗಾಗಿವೆ. ಮೆಕ್ಕೆಜೋಳ, ಹತ್ತಿ ಗದ್ದೆಗಳಲ್ಲಿ ನೀರು ನಿಂತಿದ್ದು, ಬೆಳೆ ಕೊಳೆಯುವ ಸ್ಥಿತಿ ನಿರ್ಮಾಣ-ವಾಗಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ­ದಲ್ಲಿ ಮಳೆ ನಿರಂತರವಾಗಿ ಸುರಿಯು­ತ್ತಿದ್ದರೆ, ತೀರ್ಥಹಳ್ಳಿ-ಯಲ್ಲಿ ಸಂಜೆಯ ನಂತರ ಮಳೆ ಕೊಂಚ ಬಿಡುವು ನೀಡಿತ್ತು. ಜಿಲ್ಲೆಯ ಉಳಿದೆಡೆ ಬಿಟ್ಟು ಬಿಟ್ಟು ಮಳೆ ಸುರಿಯುತ್ತಿದೆ.

ಕೊಡಗಿನಲ್ಲಿ ಮಳೆ ಚುರುಕು: ಕೊಡಗು ಜಿಲ್ಲೆಯ ಬ್ರಹ್ಮಗಿರಿ, ಪುಷ್ಪಗಿರಿ ಪರ್ವತ ಶ್ರೇಣಿಯಲ್ಲಿ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆ ಸೋಮವಾರವೂ ಮುಂದುವರಿದಿದೆ. ಇದರಿಂದ ಕಾವೇರಿ, ಲಕ್ಷ್ಮಣತೀರ್ಥ, ಬರಪೊಳೆ, ಹಾರಂಗಿ, ಚಿಕ್ಲಿಹೊಳೆಗಳು ಮತ್ತೆ ಮೈದುಂಬಿ ಹರಿಯುತ್ತಿವೆ.

ಭಾಗಮಂಡಲ ಸುತ್ತಮುತ್ತ ಉತ್ತಮ­ವಾಗಿ ಮಳೆಯಾಗುತ್ತಿದೆ. ತ್ರಿವೇಣಿ ಸಂಗಮದಲ್ಲಿ ಕಾವೇರಿ ನದಿಯ ಹರಿವು ಜಾಸ್ತಿಯಾಗಿದೆ. ಮುಂಜಾಗ್ರತಾ ಕ್ರಮವಾಗಿ ದೋಣಿ ವ್ಯವಸ್ಥೆ-ಯನ್ನು ಮುಂದು­ವರಿಸಲಾಗಿದೆ. ಗೃಹರಕ್ಷಕ ದಳದ ಸಿಬ್ಬಂದಿಯನ್ನು  ಸ್ಥಳದಲ್ಲಿ ನಿಯೋಜಿಸ-ಲಾಗಿದೆ.
(ಪೂರಕಮಾಹಿತಿ: ವಿವಿಧ ಬ್ಯೂರೋಗಳಿಂದ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT