ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಸಭೆಗೆ ಕನ್ನಡಿಗರನ್ನೇ ಆಯ್ಕೆ ಮಾಡಲು ಆಗ್ರಹ

ಕರ್ನಾಟಕ ನವ ನಿರ್ಮಾಣ ವೇದಿಕೆ ಮನವಿ
Last Updated 24 ಮೇ 2016, 5:50 IST
ಅಕ್ಷರ ಗಾತ್ರ

ವಿಜಯಪುರ: ರಾಜ್ಯಸಭೆಗೆ ಕನ್ನಡಿಗರನ್ನೇ ಆಯ್ಕೆ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ನವ ನಿರ್ಮಾಣ ಸೇನೆ ಪದಾಧಿಕಾರಿಗಳು ಜಿಲ್ಲಾಧಿಕಾರಿ ಮೂಲಕ ರಾಷ್ಟ್ರೀಯ ಪಕ್ಷದ ಅಧ್ಯಕ್ಷರು ಸೇರಿದಂತೆ ಪ್ರಾದೇಶಿಕ ಪಕ್ಷದ ಮುಖಂಡರಿಗೂ ಸೋಮವಾರ ಮನವಿ ಸಲ್ಲಿಸಿದರು.

ರಾಜ್ಯಸಭೆಗೆ ಆಯ್ಕೆ ಬಯಸುವವರು ಕನ್ನಡಿಗರೇ ಆಗಿರಲಿ, ಅವರಿಗೆ ನಾಡು, ನುಡಿ, ಗಡಿ, ಜಲದ ಬಗ್ಗೆ ಕಳಕಳಿ ಕಾಳಜಿ ಇರಲಿ. ಅಂತವರನ್ನೇ ರಾಜ್ಯಸಭೆಗೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ ಪಕ್ಷಗಳು ಆಯ್ಕೆ ಮಾಡಬೇಕು ಎಂದು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಭೀಮಾಶಂಕರ ಕೊಟಾರಗಸ್ತಿ ಒತ್ತಾಯಿಸಿದರು.

ಬಿಜೆಪಿ ಪಕ್ಷದಿಂದ ಕಳೆದ ಮೂರು ಅವಧಿಗೆ ರಾಜ್ಯದಿಂದ ಆಯ್ಕೆಯಾದ ವೆಂಕಯ್ಯನಾಯ್ಡು ರಾಜ್ಯದ ಪರವಾಗಿ ಮಾತನಾಡಿದ್ದೇ ಕಡಿಮೆ. ರಾಜ್ಯದ ಯಾವುದೇ ಸಮಸ್ಯೆ ವಿಷಯದಲ್ಲಿ ಧ್ವನಿ ಎತ್ತದ ನಾಯ್ಡು, ಸಂಸದರ ಆದರ್ಶ ಗ್ರಾಮಕ್ಕಾಗಿ ಆಯ್ಕೆ ಮಾಡಿಕೊಂಡಿದ್ದು ಆಂಧ್ರಪ್ರದೇಶದ ಹಳ್ಳಿಯೊಂದನ್ನು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚಿತ್ರನಟಿ ಹೇಮಾಮಾಲಿನಿ ಸಹ ಇದನ್ನೇ ಮಾಡಿದ್ದಾರೆ. ರಾಜ್ಯಸಭಾ ಇತಿಹಾಸದಲ್ಲೇ ಕನ್ನಡೇತರರಿಂದ ರಾಜ್ಯಕ್ಕೆ ಯಾವುದೇ ಲಾಭವಾಗಿಲ್ಲ. ಆದ್ದರಿಂದ ರಾಷ್ಟ್ರೀಯ ಪಕ್ಷಗಳು ಕನ್ನಡಿಗರನ್ನೇ ಆಯ್ಕೆ ಮಾಡಿ ಕನ್ನಡಿಗರ ಸ್ವಾಭಿಮಾನವನ್ನು ಕಾಯುವ ಕೆಲಸ ಮಾಡಬೇಕು.

ಒಂದು ವೇಳೆ ಅನ್ಯ ಭಾಷಿಕರಿಗೆ ಮಣಿ ಹಾಕಿದ್ದೆ ಆದರೆ ರಾಷ್ಟ್ರೀಯ ಪಕ್ಷದ ಮುಖಂಡರು ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಕರ್ನಾಟಕ ನವ ನಿರ್ಮಾಣ ಸೇನೆಯ ಕಾರ್ಯಕರ್ತರು ಕಪ್ಪು ಬಾವುಟ  ಪ್ರದರ್ಶಿಸಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ. 

ಸೇನೆಯ ಜಿಲ್ಲಾ ಉಪಾಧ್ಯಕ್ಷ ಪ್ರಮೋದ ಬಾಗೇವಾಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಮೇಶ ಪಾಟೀಲ, ಜಿಲ್ಲಾ ಕಾರ್ಯಾಧ್ಯಕ್ಷ ಈಶು ತೆಲಸಂಗ, ವಿಶ್ವನಾಥ ಕೋರಳ್ಳಿ, ವಿನಯ, ಶ್ರೀಧರ ಇಮ್ನದ, ಮುತ್ತು ನಾವಿ ಭಾಗವಹಿಸಿದ್ದರು.

** *** **
ಅನ್ಯ ಭಾಷಿಕರಿಗೆ ಮಣೆ ಹಾಕಿದ್ದೇ ಆದಲ್ಲಿ ರಾಷ್ಟ್ರೀಯ ಪಕ್ಷಗಳ ಮುಖಂಡರು ಪಾಲ್ಗೊಳ್ಳುವ ಕಾರ್ಯಕ್ರಮಗಳಲ್ಲಿ ಕಪ್ಪು ಬಾವುಟ ಪ್ರದರ್ಶಿಸಲಾಗುವುದು.
-ಭೀಮಾಶಂಕರ ಕೊಟಾರಗಸ್ತಿ,
ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT