ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾತ್ರಿ ವಾಹನ ಸಂಚಾರ ನಿರ್ಬಂಧ ರದ್ದಿಗೆ ನಕಾರ

ಬಂಡೀಪುರ ಹುಲಿ ಮೀಸಲು ಅರಣ್ಯ
Last Updated 30 ಜನವರಿ 2015, 19:30 IST
ಅಕ್ಷರ ಗಾತ್ರ

ನವದೆಹಲಿ: ಬಂಡೀಪುರ ಹುಲಿ ಮೀಸಲು ಅರಣ್ಯದಲ್ಲಿ ವಾಹನಗಳ ಸಂಚಾರಕ್ಕೆ ರಾತ್ರಿ ವೇಳೆ ಇರುವ ನಿರ್ಬಂಧವನ್ನು ರದ್ದು ಮಾಡಲು ಸುಪ್ರೀಂಕೋರ್ಟ್‌ ನಿರಾಕರಿಸಿದೆ. ‘ಅರಣ್ಯದ ಮೇಲಿನ ಮೊದಲ ಹಕ್ಕು ಇರುವುದು ಅಲ್ಲಿನ ಪ್ರಾಣಿಗಳಿಗೆ’ ಎಂದು ಅದು ಸ್ಪಷ್ಟವಾಗಿ ಹೇಳಿದೆ.

‘ಅರಣ್ಯವು ಅಲ್ಲಿ ನೆಲೆ ಕಂಡು ಕೊಂಡಿರುವ ಪ್ರಾಣಿಗಳು ಮತ್ತು ಬುಡಕಟ್ಟು ಜನರಿಗೆ ಸೇರಿದ್ದಾಗಿದೆ. ಇಂತಹ ಪ್ರದೇಶದಲ್ಲಿ ರಸ್ತೆ ನಿರ್ಮಿಸಿ ಅದನ್ನು ಬಳಸಲು ಅನುಮತಿ ಕೇಳು ವುದು ಸಮರ್ಥನೀಯವಲ್ಲ’ ಎಂದು ಮುಖ್ಯ ನ್ಯಾಯಮೂರ್ತಿ ಎಚ್‌.ಎಲ್‌. ದತ್ತು ಅವರ ನೇತೃತ್ವದ ಪೀಠ ಶುಕ್ರವಾರ ಅಭಿಪ್ರಾಯಪಟ್ಟಿತು.

ಹುಲಿ ಮೀಸಲು ಅರಣ್ಯದಲ್ಲಿ ರಾತ್ರಿ ವೇಳೆ ವಾಹನಗಳಿಗೆ ಮೂರು ಸಲ ಗುಂಪಿನಲ್ಲಿ ಸಾಗಲು ಅನುಮತಿ ನೀಡಬೇಕು ಎಂದು ಕೋರಿ ಕೇರಳ ಹೈಕೋರ್ಟ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಪೀಠವು ಹೀಗೆ ಹೇಳಿತು.

ಸಂಜೆ ೬ರಿಂದ ಬೆಳಿಗ್ಗೆ ೯ ಗಂಟೆಯವರೆಗೆ ವಾಹನ ಸಂಚಾರ ನಿಷೇಧಿಸಿರುವುದರಿಂದ ಕರ್ನಾಟಕ ಮತ್ತು ಕೇರಳ ಮಧ್ಯೆ ಪ್ರಯಾಣಿ ಸುವವರಿಗೆ ಭಾರಿ ತೊಂದರೆಯಾ ಗುತ್ತಿದೆ. ಪ್ರಯಾಣಿಕರು ಬೆಳಗಾಗು ವುದನ್ನೇ ಕಾಯುತ್ತಾ ಗಡಿ ಪ್ರದೇಶದಲ್ಲಿ ರಾತ್ರಿಯನ್ನು ದೂಡಬೇಕಾಗಿ ಬಂದಿದೆ ಎಂದು ಅರ್ಜಿಯಲ್ಲಿ ಹೇಳಲಾಗಿತ್ತು.

ಕೇರಳ ಸರ್ಕಾರದ ಪರವಾಗಿ ಹಿರಿಯ ವಕೀಲ ಗೋಪಾಲ ಸುಬ್ರಮಣಿಯನ್‌ ಅವರು ವಾದ ಮಂಡಿಸಿದರು. ರಾತ್ರಿ ವೇಳೆ ವಾಹನ ಸಂಚಾರಕ್ಕೆ ಅವಕಾಶ ವಿರುವುದರಿಂದ ಹೆಚ್ಚಿನ ಸಂಖ್ಯೆಯ ಪ್ರಾಣಿಗಳು ಅಪಘಾತದಲ್ಲಿ ಸಾವಿಗೀಡಾ ಗುತ್ತವೆಂದು ಹೇಳಲಾ ಗುತ್ತದೆ.
ಆದರೆ ಮಾಹಿತಿ ಹಕ್ಕು ಕಾಯ್ದೆಯಡಿ ಪಡೆ ದಿರುವ ಅಂಕಿಅಂಶಗಳನ್ನು ನೋಡಿದರೆ ೨೦೦೦ನೇ ಇಸವಿಯಿಂದ ೨೦೧೨ನೇ ಇಸವಿವರೆಗಿನ ಅವಧಿಯಲ್ಲಿ ಕೇವಲ ೧೪ ವನ್ಯಪ್ರಾಣಿಗಳು ಮಾತ್ರ ಸಾವಿಗೀಡಾ ಗಿವೆ ಎಂದು ಅವರು ತಿಳಿಸಿದರು.

ಆದರೆ ಈ ವಾದವನ್ನು ನ್ಯಾಯಪೀಠ ಪುರಸ್ಕರಿಸಲಿಲ್ಲ.  ಅಂಡಮಾನ್‌ ನಿಕೋ ಬಾರ್‌ ದ್ವೀಪದಲ್ಲಿ ಜಾರವಾ ಬುಡಕಟ್ಟು ಜನಾಂಗದವರು ವಾಸಿಸುವ ಪ್ರದೇಶದ ಐದು ಕಿ.ಮೀ.  ಫಾಸಲೆಯಲ್ಲಿ ಪ್ರವಾಸಿ ಗರ ಸಂಚಾರಕ್ಕೆ ೨೦೧೩ರಿಂದ ನಿಷೇಧ ಹೇರಿರುವುದನ್ನು ನ್ಯಾಯಪೀಠ ಉದಾ ಹರಿಸಿತು. ಮುಂದಿನ ವಿಚಾರಣೆಯನ್ನು  8 ವಾರಗಳ ನಂತರ ನಡೆಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT