ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮ್‌ದೇವ್‌ಗೆ ಹಿಮಾಚಲ, ಅಮೇಠಿಯಲ್ಲಿ ನಿರ್ಬಂಧ

Last Updated 28 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಶಿಮ್ಲಾ, ನಾಗಪುರ, ಹರಿದ್ವಾರ (ಪಿಟಿಐ):  ‘‘ರಾಹುಲ್‌ ಗಾಂಧಿ ಅವರು ದಲಿತರ ಮನೆಗೆ ‘ಮಧು­ಚಂದ್ರ­ಕ್ಕಾಗಿ’ ತೆರಳು­ತ್ತಾರೆ’’ ಎಂದು ಹೇಳಿಕೆ ನೀಡಿದ ರಾಮ್‌­ದೇವ್‌ ಅವರ ವಿರುದ್ಧ ದಲಿತರ ಮೇಲೆ ದೌರ್ಜನ್ಯ ತಡೆ ಕಾಯ್ದೆ ಅಡಿ ಸೋಮ­ವಾರ ಬಿಹಾರ, ಮಹಾರಾಷ್ಟ್ರ ಮತ್ತು ರಾಜಸ್ತಾನದಲ್ಲಿ ಎಫ್‌ಐಆರ್ ದಾಖಲಾಗಿದೆ.

ಹಿಮಾಚಲ ಪ್ರದೇಶದಲ್ಲಿ ರಾಮ್‌­ದೇವ್‌ ಕಾರ್ಯ­­­ಕ್ರಮದ ಮೇಲೆ ಚುನಾ­ವಣಾ ಆಯೋಗ ನಿರ್ಬಂಧ ಹೇರಿದೆ. ಅಮೇಠಿಯಲ್ಲಿ ನಡೆಯಲಿರುವ ಯೋಗ ಶಿಬಿರದ ಮೇಲೂ ಜಿಲ್ಲಾಡ­ಳಿತ ನಿಷೇಧ ಹೇರಿದೆ.

‘ಈ ನಿರ್ಬಂಧದ ವಿರುದ್ಧ ನ್ಯಾಯಾ­ಲ­ಯಕ್ಕೆ ಹೋಗು­ತ್ತೇನೆ. ನಾನು ರಾಹುಲ್‌ ವಿರುದ್ಧ ನೀಡಿ­ರುವ ಹೇಳಿಕೆ­­ಯನ್ನು ಕಾಂಗ್ರೆಸ್‌ ತಿರು­ಚಿದೆ’ ಎಂದು ರಾಮ್‌ದೇವ್‌ ತಿಳಿಸಿದ್ದಾರೆ.

ಈ ಹೇಳಿಕೆಗೆ ಸಂಬಂಧಿಸಿದಂತೆ ಈಗಾಗಲೇ ನಾನು ಕ್ಷಮೆ ಕೇಳಿ­ದ್ದೇನೆ. ಈ  ವಿಷ­ಯ­ವನ್ನು ಕೆದಕಿ ದಲಿತರನ್ನು ಮತ ಬ್ಯಾಂಕ್‌ ಆಗಿ ಕಾಂಗ್ರೆಸ್‌ ಬಳಸಿಕೊ­ಳ್ಳು­ತ್ತಿದೆ’ ಎಂದು ಅವರು ದೂರಿ­ದ್ದಾರೆ.

ಬಿಹಾರದಲ್ಲಿ ಸಚಿವ, ಜೆಡಿ(ಯು) ನಾಯಕ ಶ್ಯಾಮ್‌ ರಜಕ್‌, ರಾಮ್‌ದೇವ್ ವಿರುದ್ಧ ದೂರು ನೀಡಿದ್ದಾರೆ.

ಶಂಕರಾಚಾರ್ಯ ಸ್ವಾಮಿ ಟೀಕೆ: ರಾಹುಲ್‌ ವಿರು­ದ್ಧದ ರಾಮ್‌­­ದೇವ್‌  ಹೇಳಿಕೆ­­ಯನ್ನು ಪುರಿ ಗೋವ­­­ರ್ಧನ ಪೀಠದ ಶಂಕರಾ­ಚಾರ್ಯ ಸ್ವಾಮಿ ಅಧೋಕ್ಷಾ­ನಂದರು ಖಂಡಿಸಿ­ದ್ದಾರೆ. ಸಂತ­ರಿಂದ ಜನರು ಪವಿತ್ರ ಪದಗ­ಳನ್ನು ನಿರೀಕ್ಷಿಸು­ತ್ತಾರೆ. ಅಶ್ಲೀಲ ಪದಗ­ಳನ್ನಲ್ಲ ಎಂದು ಅವರು ಹೇಳಿ­ದ್ದಾರೆ.

ಚಿಕ್ಕ ವಯಸ್ಸಿ­ನಲ್ಲೇ ಅಜ್ಜಿ ಹಾಗೂ ತಂದೆಯ ಭದ್ರತೆ­ಯಿಂದ ವಂಚಿತರಾಗಿ­ರುವ ರಾಹುಲ್‌ ಗಾಂಧಿಯ ಮೇಲೆ ಈ ರೀತಿಯ ಪದ­ಪ್ರಹಾರ ಸರಿಯಲ್ಲ ಎಂದು ಸ್ವಾಮಿ ಅಧೋಕ್ಷಾ­ನಂದರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT