ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಲ್ಸ್ ಗೆಲುವಿನ ಆರಂಭ

Last Updated 18 ಏಪ್ರಿಲ್ 2014, 19:59 IST
ಅಕ್ಷರ ಗಾತ್ರ

ಅಬುಧಾಬಿ (ಪಿಟಿಐ): ಅಜಿಂಕ್ಯ ರಹಾನೆ (59; 53 ಎಸೆತ) ಹಾಗೂ ಸ್ಟುವರ್ಟ್‌ ಬಿನ್ನಿ (ಔಟಾಗದೆ 48) ಅವರ ಬ್ಯಾಟಿಂಗ್‌ ನೆರವಿನಿಂದ ರಾಜಸ್ತಾನ ರಾಯಲ್ಸ್‌ ತಂಡದವರು ಐಪಿಎಲ್‌ ಟೂರ್ನಿಯ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ಎದುರು ನಾಲ್ಕು ವಿಕೆಟ್‌ಗಳ ಗೆಲುವು ಸಾಧಿಸಿದರು.

ಶೇಖ್‌ ಜಾಯೆದ್‌ ಕ್ರೀಡಾಂಗಣದಲ್ಲಿ ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಶಿಖರ್‌ ಧವನ್‌ ಬಳಗ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 133 ರನ್‌ ಪೇರಿಸಿತು. ಈ ಗುರಿಯನ್ನು ರಾಯಲ್ಸ್‌ ತಂಡ 19.3 ಓವರ್‌ಗಳಲ್ಲಿ 6 ವಿಕೆಟ್‌ ಕಳೆದು ಕೊಂಡು ತಲುಪಿತು. 

ಬಿಗಿ ಬೌಲಿಂಗ್‌: ಟಾಸ್‌ ಗೆದ್ದ ರಾಯಲ್ಸ್‌ ನಾಯಕ ಶೇನ್‌ ವಾಟ್ಸನ್‌ ಎದುರಾಳಿ ತಂಡವನ್ನು ಬ್ಯಾಟಿಂಗ್‌ಗೆ ಕಳುಹಿಸಿದರು. ಧವಳ್‌ ಕುಲಕರ್ಣಿ (23ಕ್ಕೆ 2), ಕೇನ್‌ ರಿಚರ್ಡ್ಸನ್‌ (25ಕ್ಕೆ 2) ಮತ್ತು ರಜತ್ ಭಾಟಿಯಾ (22ಕ್ಕೆ 2) ಬಿಗುವಾದ ಬೌಲಿಂಗ್‌ ಮೂಲಕ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಕಾಡಿದರು.

ಹೈದರಾಬಾದ್‌ನ ತಂಡ ಆ್ಯರನ್ ಫಿಂಚ್‌ (2) ಅವರನ್ನು ಮೊದಲ ಓವರ್‌ನಲ್ಲೇ ಕಳೆದುಕೊಂಡಿತು. ಧವನ್‌ (38, 34 ಎಸೆತ) ಹಾಗೂ ಡೇವಿಡ್‌ ವಾರ್ನರ್‌ (32, 35 ಎಸೆತ) ಎರಡನೇ ವಿಕೆಟ್‌ಗೆ 77 ರನ್‌ ಸೇರಿಸಿದರು. ಆದರೆ ಇದಕ್ಕಾಗಿ 64 ಎಸೆತಗಳನ್ನು ತೆಗೆದುಕೊಂಡರು.

ಐದು ರನ್‌ಗಳ ಅಂತರದಲ್ಲಿ ಇವರಿಬ್ಬರನ್ನು ಪೆವಿಲಿಯನ್‌ಗಟ್ಟಿದ ಭಾಟಿಯಾ ರಾಯಲ್ಸ್‌ ಮೇಲುಗೈ ಸಾಧಿಸಲು  ಕಾರಣರಾದರು.  ಕರ್ನಾಟಕದ ಕೆ.ಎಲ್‌. ರಾಹುಲ್‌ (20, 18 ಎಸೆತ, 1 ಬೌಂ, 1 ಸಿಕ್ಸರ್‌) ಉತ್ತಮ ಆರಂಭ ಪಡೆದರೂ ಹೆಚ್ಚುಹೊತ್ತು ನಿಲ್ಲಲಿಲ್ಲ. ಡರೆನ್‌ ಸಮಿ (6) ಬೇಗನೇ ಔಟಾದ ಕಾರಣ ಸನ್‌ ರೈಸರ್ಸ್‌ಗೆ ಕೊನೆಯ ಓವರ್‌ ಗಳಲ್ಲಿ  ಅಬ್ಬರದ ಆಟವಾಡಲು ಆಗಲಿಲ್ಲ.

ಆರಂಭಿಕ ಆಘಾತ: ಸುಲಭ ಗುರಿ ಎದುರು ರಾಜಸ್ತಾನ ರಾಯಲ್ಸ್‌ ಆರಂಭಿಕ ಆಘಾತ ಅನುಭವಿಸಿತು. ಅಭಿಷೇಕ್‌ ನಾಯರ್‌ (4), ಸಂಜು ಸ್ಯಾಮ್ಸನ್‌ (3)ಹಾಗೂ ನಾಯಕ ವಾಟ್ಸನ್‌ (3) ಬೇಗನೇ ಔಟಾದರು. ಆಗ ಜೊತೆಗೂಡಿದ್ದು ರಹಾನೆ ಹಾಗೂ ಬಿನ್ನಿ. ಇವರಿಬ್ಬರು ತಂಡವನ್ನು ಆತಂಕ ದಿಂದ ಪಾರು ಮಾಡಿದರು. ಅಷ್ಟು ಮಾತ್ರವಲ್ಲದೇ, ನಾಲ್ಕನೇ ವಿಕೆಟ್‌ಗೆ 77 ರನ್‌ ಸೇರಿಸಿದರು. ರಹಾನೆ 6 ಬೌಂಡರಿ ಗಳಿಸಿದರು. 1 ಸಿಕ್ಸರ್‌ ಎತ್ತಿದ ಕರ್ನಾಟಕದ ಬಿನ್ನಿ ನಾಲ್ಕು  ಬೌಂಡರಿ ಸಿಡಿಸಿದರು.


ಸ್ಕೋರ್ ವಿವರ:
ಸನ್‌ರೈಸರ್ಸ್‌ ಹೈದರಾಬಾದ್‌: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 133
ಆ್ಯರನ್‌ ಫಿಂಚ್‌ ಸಿ ರಿಚರ್ಡ್ಸನ್‌ ಬಿ ಧವಳ್‌ ಕುಲಕರ್ಣಿ  02
ಶಿಖರ್‌ ಧವನ್‌ ಸಿ ರಿಚರ್ಡ್ಸನ್‌ ಬಿ ರಜತ್‌ ಭಾಟಿಯಾ  38
ಡೇವಿಡ್‌ ವಾರ್ನರ್‌ ಸಿ ರಿಚರ್ಡ್ಸನ್‌ ಬಿ ರಜತ್‌ ಭಾಟಿಯಾ  32
ಕೆ.ಎಲ್‌. ರಾಹುಲ್‌ ಸಿ ರಹಾನೆ ಬಿ ಧವಳ್‌ ಕುಲಕರ್ಣಿ  20
ಡರೆನ್‌ ಸಮಿ ಸಿ ಸ್ಯಾಮ್ಸನ್‌ ಬಿ ಕೇನ್‌ ರಿಚರ್ಡ್ಸನ್‌  06
ವೇಣುಗೋಪಾಲ ರಾವ್‌ ಔಟಾಗದೆ  16
ಕರಣ್‌ ಶರ್ಮ ಸಿ ಹಾಡ್ಜ್‌ ಬಿ ಕೇನ್‌ ರಿಚರ್ಡ್ಸನ್‌  04
ಡೇಲ್‌ ಸ್ಟೇಯ್ನ್‌ ಔಟಾಗದೆ  00
ಇತರೆ: (ಬೈ-1, ಲೆಗ್‌ಬೈ-5, ವೈಡ್‌-9)  15
ವಿಕೆಟ್‌ ಪತನ: 1-2 (ಫಿಂಚ್‌; 0.5), 2-77 (ಧವನ್‌; 11.3), 3-82 (ವಾರ್ನರ್‌; 13.2), 4-108 (ರಾಹುಲ್‌; 16.6), 5-111 (ಸಮಿ; 17.3), 6-130 (ಶರ್ಮ; 19.4)
ಬೌಲಿಂಗ್‌: ಧವಳ್‌ ಕುಲಕರ್ಣಿ 4-0-23-2, ಕೇನ್‌ ರಿಚರ್ಡ್ಸನ್‌ 4-0-25-2, ಜೇಮ್ಸ್‌ ಫಾಕ್ನರ್‌ 3-0-27-0, ಪ್ರವೀಣ್‌ ತಾಂಬೆ 4-0-23-0, ರಜತ್‌ ಭಾಟಿಯಾ 4-0-22-2, ಸ್ಟುವರ್ಟ್‌ ಬಿನ್ನಿ 1-0-7-0

ರಾಜಸ್ತಾನ ರಾಯಲ್ಸ್‌ 19.3 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 135
ಅಭಿಷೇಕ್‌ ನಾಯರ್‌ ಎಲ್‌ಬಿಡಬ್ಲ್ಯು ಬಿ ಡೇಲ್‌ ಸ್ಟೇಯ್ನ್‌  04
ಅಜಿಂಕ್ಯ ರಹಾನೆ ಸಿ ಆ್ಯರನ್‌ ಫಿಂಚ್‌ ಬಿ ಅಮಿತ್‌ ಮಿಶ್ರಾ  59
ಸಂಜು ಸ್ಯಾಮ್ಸನ್‌ ಸಿ ಶಿಖರ್‌ ಧವನ್‌ ಬಿ ಭುವನೇಶ್ವರ್‌ ಕುಮಾರ್‌  03
ಶೇನ್‌ ವಾಟ್ಸನ್‌ ಸಿ ಕೆ.ಎಲ್.ರಾಹುಲ್‌ ಬಿ ಇಶಾಂತ್‌ ಶರ್ಮ  03
ಸ್ಟುವರ್ಟ್‌ ಬಿನ್ನಿ ಔಟಾಗದೆ 48
ಬ್ರಾಡ್‌ ಹಾಡ್ಜ್‌ ಸಿ ಡರೆನ್‌ ಸಮಿ ಬಿ ಅಮಿತ್‌ ಮಿಶ್ರಾ  01
ರಜತ್‌ ಭಾಟಿಯಾ ಸಿ ಆ್ಯರನ್‌ ಫಿಂಚ್‌ ಬಿ ಡೇಲ್‌ ಸ್ಟೇಯ್ನ್‌  04
ಜೇಮ್ಸ್‌ ಫಾಕ್ನರ್‌ ಔಟಾಗದೆ  08
ಇತರೆ (ಲೆಗ್‌ಬೈ–3, ವೈಡ್‌–2)  05
ವಿಕೆಟ್‌ ಪತನ: 1–4 (ಅಭಿಷೇಕ್; 0.3); 2–15 (ಸ್ಯಾಮ್ಸನ್‌; 3.3); 3–31 (ವಾಟ್ಸನ್‌; 6.2); 4–108 (ರಹಾನೆ; 15.6); 5–111 (ಹಾಡ್ಜ್‌; 17.4); 6–121(ಭಾಟಿಯಾ; 18.3)
ಬೌಲಿಂಗ್‌: ಡೇಲ್‌ ಸ್ಟೇಯ್ನ್ 4–0–29–2, ಭುವನೇಶ್ವರ್‌ ಕುಮಾರ್‌ 3.3–0–21–1, ಇಶಾಂತ್‌ ಶರ್ಮ 4–0–29–1 (ವೈಡ್‌–1), ಡರೆನ್‌ ಸಮಿ 2–0–19–0 (ವೈಡ್‌–1), ಅಮಿತ್‌ ಮಿಶ್ರಾ 4–0–26–2, ಕರಣ್‌ ಶರ್ಮ 2–0–8–0
ಫಲಿತಾಂಶ: ರಾಜಸ್ತಾನ ರಾಯಲ್ಸ್‌ಗೆ ನಾಲ್ಕು ವಿಕೆಟ್‌ ಜಯ ಹಾಗೂ 2 ಪಾಯಿಂಟ್‌. ಪಂದ್ಯ ಶ್ರೇಷ್ಠ: ಅಜಿಂಕ್ಯ ರಹಾನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT