ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಪತಿ ಭವನಕ್ಕಿಂತ ವಿಜ್ಞಾನ ಭವನ ಸ್ವಚ್ಛ

Last Updated 4 ಜುಲೈ 2015, 10:16 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಸ್ವಚ್ಛ ಭಾರತ ಅಭಿಯಾನದ ಅನುಷ್ಠಾನದಲ್ಲಿ ಹೈದರಾಬಾದ್ ಹೌಸ್, ವಿಜ್ಞಾನ ಭವನ ಹಾಗೂ ಜವಾಹರ ಲಾಲ್ ನೆಹರೂ ಭವನ ಅಗ್ರಸ್ಥಾನದಲ್ಲಿದ್ದು, ರಾಷ್ಟ್ರಪತಿ ಭವನ ಹಿಂದಿದೆ.

ರಾಷ್ಟ್ರೀಯ ರಾಜಧಾನಿ ವ್ಯಾಪ್ತಿಯ 49 ಸರ್ಕಾರಿ ಕಟ್ಟಡಗಳಲ್ಲಿನ ಒಟ್ಟಾರೆ ಶುಚಿತ್ವವನ್ನು ಆಧರಿಸಿ ಈ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.

ಹೈದರಾಬಾದ್ ಹೌಸ್‌, ವಿಜ್ಞಾನ ಭವನ ಹಾಗೂ ಜವಾಹರಲಾಲ್ ನೆಹರೂ ಭವನ ತಲಾ 20 ಪಾಯಿಂಟ್‌ಗಳೊಂದಿಗೆ ಜಂಟಿ ಮೊದಲ ಸ್ಥಾನದಲ್ಲಿವೆ. ರಾಷ್ಟ್ರಪತಿ ಭವನ ಹಾಗೂ ಸೌಥ್‌ ಬ್ಲಾಕ್‌ ಕ್ರಮವಾಗಿ 6 ಹಾಗೂ 14ನೇ ಸ್ಥಾನ ಪಡೆದಿವೆ ಎಂದು ನಗರಾಭಿವೃದ್ಧಿ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಟ್ಟಡಗಳು ಹಾಗೂ ಕಟ್ಟಡಗಳ ಆವರಣದಲ್ಲಿನ ನೈರ್ಮಲ್ಯ ಸೌಕರ್ಯಗಳು, ಸ್ವಚ್ಛತೆ ಹಾಗೂ ಕಸದ ಡಬ್ಬಿಗಳ ಲಭ್ಯತೆಯ ಆಧಾರದಲ್ಲಿ ಕಳೆದು ತಿಂಗಳು ಕೇಂದ್ರದ ಸಾರ್ವಜನಿಕ ಲೋಕೋಪಯೋಗಿ ಇಲಾಖೆ (ಸಿಪಿಡಬ್ಲ್ಯುಡಿ) ಈ ಸಮೀಕ್ಷೆ ನಡೆಸಿತ್ತು. ಎಲ್ಲದಕ್ಕೂ ಗರಿಷ್ಠ 10 ಪಾಯಿಂಟ್‌ಗಳನ್ನು ನಿಗದಿಪಡಿಸಲಾಗಿತ್ತು.

ಹೈದರಾಬಾದ್ ಹೌಸ್, ವಿಜ್ಞಾನ ಭವನ ಹಾಗೂ ಜವಾಹರಲಾಲ್ ನೆಹರೂ ಭವನ ಗರಿಷ್ಠ ಹತ್ತು ಪಾಯಿಂಟ್‌ಗಳ ಪೈಕಿ ನೈರ್ಮಲ್ಯ ಸೌಕರ್ಯಗಳಿಗೆ ಹತ್ತಕ್ಕೆಹತ್ತು, ಶುಚಿತ್ವಕ್ಕೆ ಎಂಟು ಹಾಗೂ ಕಸದ ಡಬ್ಬಿಗಳ ಲಭ್ಯತೆಗೆ ಎರಡು...ಹೀಗೆ ತಲಾ 20
ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿವೆ.

ಸರ್ದಾರ್ ಪಟೇಲ್ ಭವನವು 18 ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನ ಪಡೆದಿದೆ. ಸಿಎಜಿ ಕಟ್ಟಡವು 17 ಪಾಯಿಂಟ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.

ಕೃಷಿ ಭವನ ಹಾಗೂ ಶಾಸ್ತ್ರೀ ಭವನಗಳು ತಲಾ 8 ಪಾಯಿಂಟ್‌ಗಳೊಂದಿಗೆ ಕೊನೆಯ ಸ್ಥಾನದಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT