ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಪ್ರಾಣಿ: ಸಲಹೆ

Last Updated 27 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಪ್ರತೀ ದೇಶದಲ್ಲಿಯೂ ತನ್ನದೇ ಆದ ಒಂದು ರಾಷ್ಟ್ರ ಪ್ರಾಣಿ ಮತ್ತು ರಾಷ್ಟ್ರ ಪಕ್ಷಿ ಇರುವುದು. ಹಾಗೆಯೇ ನಮ್ಮ ದೇಶದಲ್ಲಿ ಹುಲಿಯನ್ನು ರಾಷ್ಟ್ರ ಪ್ರಾಣಿಯೆಂದು ಮತ್ತು ನವಿಲನ್ನು ರಾಷ್ಟ್ರ ಪಕ್ಷಿಯೆಂದು ಸರ್ಕಾರ ಗುರ್ತಿಸಿದೆ. ರಾಷ್ಟ್ರ ಪಕ್ಷಿಯ ಬಗ್ಗೆ ವಿವಾದ ಇಲ್ಲ. ಇದಕ್ಕಿಂತ ಸುಂದರವಾದ ಮತ್ತು ಆಕರ್ಷಣೀಯ ಪಕ್ಷಿಯಿಲ್ಲ.

ಆದರೆ ಹುಲಿಯನ್ನು ರಾಷ್ಟ್ರ ಪ್ರಾಣಿಯೆಂದು ಗುರ್ತಿಸುವುದರಲ್ಲಿ ವಾದ ವಿವಾದವಿದೆ. ಹುಲಿ ಒಂದು ಭಯಂಕರ ಪ್ರಾಣಿ. ಮನುಷ್ಯರನ್ನು ಕಾಡುವ, ಪೀಡಿಸುವ ಹಾಗೂ ಕೊಂದು ತಿನ್ನುವ ಪ್ರಾಣಿ. ಇದನ್ನು ಹೇಗೆ ತಾನೆ ನಾವು ರಾಷ್ಟ್ರ ಪ್ರಾಣಿ ಎಂದು ಕರೆಯಲು ಸಾಧ್ಯ ಭಾರತೀಯರು ಸಾಧು ಸ್ವಭಾವದವರು. ನಮಗೂ ಈ ಕ್ರೂರ ಪ್ರಾಣಿಗೂ ಅಜಗಜಾಂತರ. ಆದಕಾರಣ, ಹುಲಿ ಬದಲು ಗೋವನ್ನು ರಾಷ್ಟ್ರ ಪ್ರಾಣಿಯೆಂದು ಗುರ್ತಿಸುವುದು ಉತ್ತಮ.

ಗೋವು ಸಾಧು ಪ್ರಾಣಿ. ಇದನ್ನು ಗೋಮಾತೆಯೆಂದು ಕರೆಯುವರು. ಮನುಷ್ಯನಿಗೆ ಪುಷ್ಟಿಕರ ಆಹಾರ ಒದಗಿಸುತ್ತದೆ. ಸಣ್ಣ ಮಕ್ಕಳೂ ಗೋವಿನ ಜೊತೆಯಲ್ಲಿ ಆಡುವರು. ಇದು ಪೂಜನೀಯ. ಇದನ್ನು ರಾಷ್ಟ್ರ ಪ್ರಾಣಿ ಎಂದು ಕರೆದರೆ ಯಾರ ಆಕ್ಷೇಪಣೆಯೂ ಇರುವುದಿಲ್ಲ. ಮತ, ಜಾತಿ ಹೆಸರಲ್ಲಿ ಕಚ್ಚಾಟವೂ ಇರುವುದಿಲ್ಲ.
ಪ್ರೊ. ಮುಮ್ತಾಜ಼್ ಅಲಿ ಖಾನ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT