ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಸಂಕ್ಷಿಪ್ತ ಸುದ್ದಿಗಳು

Last Updated 12 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರಿನಿಂದ ವಿಶೇಷ ಪ್ರವಾಸಿ ರೈಲು
ನವದೆಹಲಿ: 
ಐಆರ್‌ಸಿಟಿಸಿ (ಇಂಡಿಯನ್‌್ ರೈಲ್ವೆ ಕೇಟರಿಂಗ್‌್ ಆಂಡ್‌ ಟೂರಿಸಂ ಕಾರ್ಪೋರೇಷನ್‌), ಬೆಂಗಳೂರಿನಿಂದ ವಿಶೇಷ ಪ್ರವಾಸಿ ರೈಲು ಸಂಚಾರ ಆರಂಭಿಸಲಿದೆ. ಬೆಂಗಳೂರು, ಬಾದಾಮಿ, ವಿಜಾಪುರ, ಸೊಲ್ಲಾಪುರ, ಪಂಢರಪುರ, ಔರಂಗಾ­ಬಾದ್‌ ಹಾಗೂ ಶಿರಡಿ ನಡುವೆ ಈ ರೈಲು ಸಂಚರಿಸಲಿದೆ. ಈ ರೈಲು ಅಜಂತಾ, ಎಲ್ಲೋರಕ್ಕೂ ತೆರಳಲಿದೆ. ಅಕ್ಟೋಬರ್‌್ ೨೫ರಂದು ಬೆಂಗಳೂರಿನಿಂದ ಹೊರಡುವ ಈ ರೈಲು ನವೆಂಬರ್‌್ ೨ಕ್ಕೆ ವಾಪಸ್‌್ ಬರಲಿದೆ. 

ಟಿಎಂಸಿ ಕಾರ್ಯಕರ್ತೆಯರ ಪ್ರತಿಭಟನೆ
ಕೋಲ್ಕತ್ತ (ಪಿಟಿಐ):
ಬಹುಕೋಟಿ ಶಾರದಾ ಚಿಟ್‌ ಫಂಡ್‌ ಹಗರಣಕ್ಕೆ ಸಂಬಂಧಿಸಿ­ದಂತೆ ಸಿಬಿಐ  ನಡೆಸುತ್ತಿರುವ ತನಿಖೆಯು ರಾಜಕೀಯ ಪ್ರೇರಿತವಾ­ದುದು ಎಂದು ಆರೋಪಿಸಿ ತೃಣಮೂಲ ಕಾಂಗ್ರೆಸ್‌ನ ಮಹಿಳಾ ಘಟಕ ಇಲ್ಲಿನ ಸಿಬಿಐ ಕಚೇರಿ ಮುಂದೆ ನಡೆಸುತ್ತಿರುವ ಪ್ರತಿಭಟನೆ ಎರಡನೇ ದಿನವಾದ ಶುಕ್ರವಾರವೂ ಮುಂದುವರಿಯಿತು.

ಇಟಲಿಗೆ ತೆರಳಲು ನಾವಿಕನಿಗೆ ಅನುಮತಿ
ನವದೆಹಲಿ (ಪಿಟಿಐ):
ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿ­ರುವ ಇಟಲಿ ನಾವಿಕನಿಗೆ  ಸ್ವದೇಶಕ್ಕೆ ತೆರಳಲು ಸುಪ್ರೀಂ ಕೋರ್ಟ್‌ ಶುಕ್ರವಾರ ಅನುಮತಿ ನೀಡಿದೆ. ಚಿಕಿತ್ಸೆ ಪಡೆಯುವುದಕ್ಕಾಗಿ ನಾಲ್ಕು ತಿಂಗಳ ಅವಧಿಗೆ ತವರಿಗೆ ತೆರಳಲು ಅಭ್ಯಂತರವಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿತು. ಇದನ್ನು ಆಧರಿಸಿ ನ್ಯಾಯಾಲಯವು ನಾವಿಕನಿಗೆ ಅವಕಾಶ ನೀಡಿದೆ.

ಕೇದಾರನಾಥ ಯಾತ್ರೆ ಆರಂಭ
ಡೆಹ್ರಾಡೂನ್‌ (ಪಿಟಿಐ):
ಭಾರಿ ಮಳೆಯ ಕಾರಣ ಸ್ಥಗಿತಗೊಳಿಸಲಾಗಿದ್ದ ಕೇದಾರನಾಥ ಯಾತ್ರೆಯನ್ನು ಮತ್ತೆ ಆರಂಭಿಸಲಾಗಿದ್ದು, ಶುಕ್ರವಾರ 150ಕ್ಕೂ ಹೆಚ್ಚು ಭಕ್ತರು ಶಿವನ ದರ್ಶನ ಪಡೆದರು.

18 ಶಿಶುಗಳ ಮರಣ
ಮಾಲ್ಡಾ (ಪಶ್ಚಿಮ ಬಂಗಾಳ) (ಪಿಟಿಐ):
ಇಲ್ಲಿನ ವೈದ್ಯಕೀಯ ಕಾಲೇಜಿನಲ್ಲಿ ಶುಕ್ರವಾರ ಮೂರು ಶಿಶುಗಳು ಮರಣ ಹೊಂದಿದ್ದು, ಈ ಮೂಲಕ ಕಳೆದ ನಾಲ್ಕು ದಿನಗಳಿಂದ ಮರಣ ಹೊಂದಿರುವ ಶಿಶುಗಳ ಸಂಖ್ಯೆ 18ಕ್ಕೆ ಏರಿದೆ.

ಉತ್ತರಪ್ರದೇಶ: ಸಿಡಿಲಿಗೆ 21 ಬಲಿ
ಲಖನೌ:
ಉತ್ತರಪ್ರದೇಶದ ವಿವಿಧ ಭಾಗಗಳಲ್ಲಿ ಸಿಡಿಲಿನಿಂದಾಗಿ  ಮಗು ಸೇರಿ 21 ಮಂದಿ ಮೃತಪಟ್ಟು, 24ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ನಡೆದಿದೆ. ಭಾರಿ ಮಳೆಯ ಕಾರಣ ಮನೆಗಳಿಗೂ ಹಾನಿ ಸಂಭವಿಸಿದೆ.

ಸನ್ಮಾನ್‌ಖಾನ್‌ ಪ್ರಕರಣ: ದಾಖಲೆಗಳು ಪತ್ತೆ
ಮುಂಬೈ (ಪಿಟಿಐ):
ನಟ ಸಲ್ಮಾನ್‌ ಖಾನ್‌ ಅವರ ಮೇಲಿನ ಆರೋಪಗಳಿಗೆ ಸಂಬಂಧಿಸಿದಂತೆ ಕಣ್ಮರೆಯಾಗಿದ್ದ ದಾಖಲೆಗಳನ್ನು ಪೊಲೀಸರು ಕೊನೆಗೂ ಪತ್ತೆ ಹಚ್ಚಿದ್ದು, ಅವುಗಳನ್ನು ಶುಕ್ರವಾರ ನ್ಯಾಯಾಲಯಕ್ಕೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT