ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಲ್‌ ಕೂಡ ಫಲಾನುಭವಿ: ಮೋದಿ ಟ್ವೀಟ್‌

Last Updated 4 ಜುಲೈ 2015, 11:05 IST
ಅಕ್ಷರ ಗಾತ್ರ

ನವದೆಹಲಿ: ಐಪಿಎಲ್‌ ಹಗರಣದ ಆರೋಪಿ ಲಲಿತ್‌ ಮೋದಿ  ಅವರ ಟ್ವಿಟರ್‌ ಸಮರ ಮುಂದುವರಿದಿದೆ. ಪ್ರಿಯಾಂಕ, ಸೋನಿಯಾ ಮತ್ತು ವರುಣ್‌ ಗಾಂಧಿ ನಂತರ ಇದೀಗ  ವೀಸಾ ವಿವಾದದ ಸುಳಿಗೆ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ  ಹಾಗೂ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್‌ ವಾದ್ರಾ ಅವರನ್ನೂ ಎಳೆದು ತಂದಿದ್ದಾರೆ.

‘ಐಪಿಎಲ್‌  ಕ್ರಿಕೆಟ್‌ ಟೂರ್ನಿ ಸಂದರ್ಭದಲ್ಲಿ ರಾಹುಲ್‌ ಗಾಂಧಿ ಸಹ ನನ್ನ ಆತಿಥ್ಯ ಪಡೆದ ಫಲಾನುಭವಿಗಳಲ್ಲಿ ಒಬ್ಬರು’ ಎನ್ನುವುದು ಲಲಿತ್‌ ಮೋದಿ ಅವರ ಹೊಸ ಆರೋಪ. ಈ ಆರೋಪ ಹೊರಿಸಿ ಅವರು ರಾಹುಲ್‌ ವಿರುದ್ಧ ಶನಿವಾರ ಸರಣಿ ಟ್ವೀಟ್‌ ‌ ಮಾಡಿದ್ದಾರೆ.

ರಾಹುಲ್‌ ಗಾಂಧಿ ಮತ್ತು  ರಾಬರ್ಟ್‌ ವಾದ್ರಾ ಅವರು ಇತರೆ ಗಣ್ಯರ ಜತೆಗೆ ಕುಳಿತು ಐಪಿಎಲ್‌ ಪಂದ್ಯ ವೀಕ್ಷಿಸುತ್ತಿರುವ ಚಿತ್ರವೊಂದನ್ನು ಅವರು ಪೋಸ್ಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT