ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿತು ಪ್ರಿಮ್ನಾಲಿಗೆ ಜಾಮೀನು

Last Updated 25 ಜುಲೈ 2014, 11:09 IST
ಅಕ್ಷರ ಗಾತ್ರ

ರಾಮನಗರ:  ಮಾಗಡಿಯ ಸಾಲು ಮರದ ತಿಮ್ಮಕ್ಕ ಹೆಸರು ದುರ್ಬಳಕೆ ಮಾಡಿಕೊಂಡು ಅಮೆರಿಕದಲ್ಲಿ ಸಂಸ್ಥೆ ಸ್ಥಾಪಿಸಿ ಅಕ್ರಮವಾಗಿ ಹಣ ಸಂಪಾದಿಸಿ ದ್ದಾರೆ ಎಂಬ ಆರೋಪದ ಮೇಲೆ ಬಂಧಿತ­ರಾಗಿದ್ದ ಪರಿಸರವಾದಿ ರಿತು ಪ್ರಿಮ್ನಾಲಿ ಅವರಿಗೆ ಜೆಎಂಎಫ್‌ಸಿ ನ್ಯಾಯಾಲಯ ಗುರುವಾರ ಷರತ್ತು­ಬದ್ಧ ಜಾಮೀನು ನೀಡಿದೆ.

₨ 15 ಸಾವಿರ ಠೇವಣಿ ಹಾಗೂ ಇಬ್ಬರ ವೈಯಕ್ತಿಕ ಭದ್ರತೆ ಆಧಾರದ ಮೇಲೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಷರತ್ತುಗಳು:  ಪ್ರಿಮ್ನಾಲಿ ಅವರು ತಮ್ಮ ಪಾಸ್ ಪೋರ್ಟ್‌ ಅನ್ನು ನ್ಯಾಯಾ­ಲಯದ ವಶಕ್ಕೆ ಒಪ್ಪಿಸಬೇಕು. ಪ್ರತಿ ತಿಂಗಳ 20ರಂದು ಪ್ರಿಮ್ನಾಲಿ ಅವರು ಐಜೂರು ಪೊಲೀಸ್ ಠಾಣಾ­ಧಿಕಾರಿಗಳ ಮುಂದೆ ಹಾಜರಾಗಿ ಸಹಿ ಮಾಡಬೇಕು. ಪ್ರಕರಣದ ತನಿಖೆ ನಡೆಸುವ ತನಿಖಾ­ಧಿಕಾರಿಯೊಂದಿಗೆ ತನಿಖೆಗೆ ಸಹಕರಿಸಬೇಕು. ತಮ್ಮ ವಿರುದ್ಧ ದಾವೆ ಹೂಡಿರುವವರಿಗೆ ಯಾವ ತೊಂದರೆ ನೀಡಬಾರದು. ಸಾಕ್ಷ್ಯ  ನಾಶಕ್ಕೆ ಯತ್ನಿಸ­ಬಾರದು. ನ್ಯಾಯಾಲಯ ನಿಗದಿ­ ಪಡಿಸಿದ ವಿಚಾ­ರಣಾ ದಿನ­ಗಳಂದು ತಪ್ಪದೆ ಹಾಜರಾ­ಗಬೇಕು ಎಂದು ಷರತ್ತು­ಗಳನ್ನು ವಿಧಿಸಲಾಗಿದೆ. ಸಾಲು ಮರದ ತಿಮ್ಮಕ್ಕ ಅವರು ದಾಖಲಿಸಿದ್ದ ಖಾಸಗಿ ದಾವೆ ಮತ್ತು ನ್ಯಾಯಾ­ಲಯದ ಆದೇಶದ ಮೇರೆಗೆ  ಕಳೆದ 19ರಂದು ರಿತು ಪ್ರಿಮ್ನಾಲಿ ಅವರನ್ನು ಬಂಧಿಸಿ ನ್ಯಾಯಾ­ಲಯದ ಮುಂದೆ ಹಾಜರು­ಪಡಿಸಿ­ದ್ದರು.
ನ್ಯಾಯಾಲಯ ಸೋಮ­ವಾರ­­­ದ­ವರೆಗೆ ಬಂಧನಕ್ಕೆ ಆದೇಶ ನೀಡಿತ್ತು. ನಂತರ ಅವರನ್ನು ಗುರು­ವಾರ­­­ದವರೆಗೆ ನ್ಯಾಯಾಂಗ ಬಂಧನದಲ್ಲಿರಿಸಿತ್ತು.

ಪದಾಧಿಕಾರಿಗಳ ಆಯ್ಕೆ: ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ನೂತನ ಅಧ್ಯಕ್ಷರಾಗಿ ಎಲ್‌.ಸಿ.ಮಹ­ದೇವಯ್ಯ ಆಯ್ಕೆಯಾಗಿ­ದ್ದಾರೆ. ಉಪಾ­ಧ್ಯಕ್ಷರಾಗಿ ಆರ್‌.ರುದ್ರೇಶಯ್ಯ, ಎಸ್‌.ಬಿ. ­ಬಸವರಾಜಪ್ಪ, ಖಜಾಂಚಿ ಟಿ.ಎಂ. ಪ್ರಕಾಶ್‌, ಸಹ ಕಾರ್ಯದರ್ಶಿ ಎಂ.ಎನ್‌. ದೇವರಾಜ, ಸಂಘಟನಾ ಕಾರ್ಯ­ದರ್ಶಿ ಆರ್‌.ಸಿ.ವಿಜಯ್‌ ಕುಮಾರ್‌, ರಾಜ್ಯ ಪರಿಷತ್ತಿನ ಸದಸ್ಯರಾಗಿ ಜಿ. ಶಿವಶಂಕರ್‌ ಆಯ್ಕೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT