ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಯಲ್‌ ಎಸ್ಟೇಟ್‌ನಲ್ಲಿ ಕಪ್ಪು ಹಣದ ಕುಣಿತ

Last Updated 28 ನವೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕ, ದೆಹಲಿ ಹಾಗೂ ಮಹಾರಾಷ್ಟ್ರ ಸೇರಿದಂತೆ ೯ ರಾಜ್ಯಗಳಲ್ಲಿನ ರಿಯಲ್‌ ಎಸ್ಟೇಟ್‌ ಕಂಪೆನಿಗಳು ಖರೀದಿದಾರರಿಂದ ಕಪ್ಪು ಹಣ ತೆಗೆದುಕೊಳ್ಳುತ್ತಿವೆ. ಜತೆಗೆ, ವಿದೇಶಗಳ ಹವಾಲಾ ಜಾಲಗಳ ಮೂಲಕವೂ ಹಣ ತೆಗೆದುಕೊಳ್ಳುತ್ತಿವೆ ಎಂಬುದು ಕೋಬ್ರಾಪೋಸ್ಟ್‌ ‘ಮಾರು­ವೇಷದ ಕಾರ್ಯಾಚರಣೆ’ಯಿಂದ ಬಹಿರಂ­ಗವಾಗಿದೆ.

ಬೆಂಗಳೂರು, ದೆಹಲಿ, ನೊಯ್ಡಾ, ಘಾಜಿಯಾಬಾದ್‌, ಜೈಪುರ, ಲಖನೌ, ಮುಂಬೈ, ಕೋಲ್ಕತ್ತ, ಹೈದರಾಬಾದ್‌ ಹಾಗೂ ಕೊಚ್ಚಿಯಲ್ಲಿರುವ  ಈ ಕಂಪೆನಿ­ಗಳ ಕಚೇರಿಗಳು ಈ ಅವ್ಯವ­ಹಾರದಲ್ಲಿ ಭಾಗಿಯಾಗಿವೆ.

೧೮ ತಿಂಗಳ ಕಾಲ ರಿಯಲ್‌ ಎಸ್ಟೇಟ್‌ ಕಂಪೆನಿಗಳನ್ನು ಕೋಬ್ರಾ­ಪೋಸ್ಟ್‌ ರಹಸ್ಯವಾಗಿ ತನಿಖೆಗೆ ಒಳಪಡಿ­ಸಿತ್ತು. ಈ ಅವಧಿಯಲ್ಲಿ ಕಂಪೆನಿಗಳ ಮುಖ್ಯಸ್ಥರು, ವ್ಯವಸ್ಥಾಪಕ ನಿರ್ದೇಶ­ಕರು, ಮುಖ್ಯ ಕಾರ್ಯನಿರ್ವಹಣಾಧಿ­ಕಾರಿಗಳು ಹಾಗೂ ಉನ್ನತ ಅಧಿಕಾರಿ­ಗಳ ಸಂಭಾಷಣೆಗಳನ್ನು ವಿಡಿಯೊ ಚಿತ್ರೀಕರಣ ಮಾಡಿಕೊಂಡಿತ್ತು.

ಅನಿವಾಸಿ ಭಾರತೀಯ ಗಣಿ ಉದ್ಯಮಿ ಹಾಗೂ ದಕ್ಷಿಣ ಭಾರತದ ರಾಜಕಾರಣಿಯ ಸೋಗಿ­ನಲ್ಲಿ ಕೋಬ್ರಾಪೋಸ್ಟ್‌್ ವರದಿ­ಗಾ­ರೊ­ಬ್ಬರು ಈ ಕಂಪೆನಿಗಳಿಗೆ ಭೇಟಿ ನೀಡಿ­ದ್ದರು.  ಈ ಕಂಪೆನಿ­ಗಳ ಅಧಿಕಾರಿಗಳು ಆಸ್ತಿ ಖರೀದಿ ಮೊತ್ತದ ಶೇ೧೦­ರಿಂದ ೯೦ರಷ್ಟು ಹಣವನ್ನು ಕಪ್ಪುಹಣದ ರೂಪ­ದಲ್ಲೇ ಸ್ವೀಕರಿ­ಸಲು ಸಿದ್ಧವಿರು­ವುದು ಕೂಡ ಕೋಬ್ರಾ­ಪೋಸ್ಟ್‌ ನಡೆ­ಸಿದ ‘ಆಪರೇಷನ್‌್ ಬ್ಲ್ಯಾಕ್‌ ನಿಂಜಾ’ದಿಂದ ಬಹಿರಂಗಗೊಂಡಿದೆ.

₨480 ಕೋಟಿ ಠೇವಣಿ ಇಡಲು ಆದೇಶ
ನವದೆಹಲಿ (ಐಎಎನ್‌ಎಸ್‌):
ತನ್ನ ಸ್ಥಾನದ ದುರ್ಬಳಕೆ ಮಾಡಿ­ಕೊಂಡು ವಂಚನೆ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ­ದಂತೆ ದಂಡದ ಒಟ್ಟು ₨630 ಕೋಟಿ­ಯಲ್ಲಿ ₨480 ಕೋಟಿ ಮೊತ್ತವನ್ನು ಠೇವಣಿ ಇಡುವಂತೆ ಪ್ರಮುಖ ರಿಯಲ್‌ ಎಸ್ಟೇಟ್‌ ಕಂಪೆನಿ ಡಿಎಲ್‌ಎಫ್‌ಗೆ  ಸುಪ್ರೀಂಕೋರ್ಟ್‌ ಶುಕ್ರವಾರ ಆದೇಶ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಎಚ್‌.­ಎಲ್‌.­­ ದತ್ತು ನೇತೃತ್ವದ ಸುಪ್ರೀಂ ಕೋರ್ಟ್‌ ಪೀಠ, ಜನವರಿ 15ರಿಂದ ₨75 ಕೋಟಿ­ಯಂತೆ ಕಂತುಗಳಲ್ಲಿ ದಂಡವನ್ನು ಕಟ್ಟಿ ಮುಗಿಸುವಂತೆ ಡಿಎಲ್‌­ಎಫ್‌ಗೆ ತಿಳಿಸಿದೆ. ಗುಡಗಾಂವ್‌ನಲ್ಲಿ ಮೂರು ಯೋಜ­ನೆ­­ಗಳಲ್ಲಿ ತನ್ನ ಸ್ಥಾನದ ದುರ್ಬಳಕೆ ಮಾಡಿಕೊಂಡು ಗ್ರಾಹ­ಕರಿಗೆ ವಂಚಿಸಿದ ಆರೋಪದಲ್ಲಿ ಭಾರತೀಯ ಸ್ಪರ್ಧಾ ಆಯೋಗ ಡಿಎಲ್‌­ಎಫ್‌ಗೆ ₨630 ಕೋಟಿ ದಂಡ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಡಿಎಲ್‌ಎಫ್‌ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT