ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೂ 20 ಲಕ್ಷ ಮೌಲ್ಯದ ಆಭರಣ ಜಪ್ತಿ

ಮೂವರು ಕುಖ್ಯಾತ ಸರಗಳ್ಳರ ಬಂಧನ
Last Updated 27 ನವೆಂಬರ್ 2014, 19:41 IST
ಅಕ್ಷರ ಗಾತ್ರ

ಬೆಂಗಳೂರು:  ನಿರ್ಜನ ಪ್ರದೇಶದಲ್ಲಿ ಓಡಾಡುವ ಮಹಿಳೆಯರಿಂದ ಚಿನ್ನದ ಸರ ದೋಚುತ್ತಿದ್ದ ಮೂವರು ಕುಖ್ಯಾತ ಸರಗಳ್ಳರನ್ನು ಕಲಾಸಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.

‘ಮೈಸೂರಿನ ಗೌಸಿಯಾನಗರದ ಸನಾವುಲ್ಲಾ (27), ನಗರದ ಗಂಗೊಂಡ ನ­ಹಳ್ಳಿ ನಿವಾಸಿ ಸಾದಿಕ್ (26) ಹಾಗೂ ಕೇರಳದ ಸುದೇಶ್‌ ಕುಮಾರ್ (28) ಎಂಬುವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ ₨ 20 ಲಕ್ಷ ಮೌಲ್ಯದ 765 ಗ್ರಾಂ ಚಿನ್ನದ ಸರಗಳನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣದ ಮತ್ತೊಬ್ಬ ಆರೋಪಿ ಇಬ್ರಾಹಿಂ ಅಲಿಯಾಸ್ ಕಾಲು ತಲೆ­ಮರೆಸಿ­ಕೊಂಡಿದ್ದಾನೆ’ ಎಂದು ಹೆಚ್ಚುವರಿ ಪೊಲೀಸ್ ಕಮಿ­ಷನರ್‌ ಪಿ.ಹರಿಶೇಖರನ್‌ ತಿಳಿಸಿದರು.

‘ಆರೋಪಿಗಳು ಬೆಳಗಿನ ಜಾವ ಹಾಗೂ ಮಧ್ಯಾ ಹ್ನದ ವೇಳೆ ಬೈಕ್‌ಗಳಲ್ಲಿ ಕಾರ್ಯಾಚರಣೆಗೆ ಇಳಿಯು­ತ್ತಿದ್ದರು. ನಿರ್ಜನ ಪ್ರದೇಶಗಳಲ್ಲಿ ಸಂಚರಿ­ಸುತ್ತಿದ್ದ ಇವರು,  ಒಂಟಿ ಮಹಿಳೆಯರನ್ನು ಗುರು­ತಿ­ಸುತ್ತಿದ್ದರು. ನಂತರ ವಿಳಾಸ ಕೇಳುವ ನೆಪದಲ್ಲಿ ಹತ್ತಿರ ಹೋಗಿ, ಸರ ಕಿತ್ತು­ಕೊಂಡು ಪರಾರಿಯಾ­ಗುತ್ತಿದ್ದರು. ಸುಲ­ಭ­­ವಾಗಿ ಹಣ ಗಳಿಸುವ ಉದ್ದೇಶ­ದಿಂದ ಈ ಕೃತ್ಯಕ್ಕೆ ಇಳಿದಿದ್ದಾಗಿ ಬಂಧಿತರು ಹೇಳಿಕೆ ನೀಡಿದ್ದಾರೆ’ ಎಂದರು.

‘ಸನಾವುಲ್ಲಾ ಮತ್ತು ಇತರ ಆರೋಪಿ­ಗಳು ಚಿನ್ನದ ಸರಗಳನ್ನು ಕಳವು ಮಾಡಿ ಸುದೇಶ್‌ನಿಗೆ ಕೊಡು­ತ್ತಿದ್ದರು. ಆತ, ಪರಿಚಿತರ ಮುಖಾಂತರ ಗಿರವಿ ಅಂಗಡಿ­ಗಳಲ್ಲಿ ಅಡಮಾನವಿಡಿಸಿ ಹಣ ಪಡೆಯುತ್ತಿದ್ದ. ಇವರ ಬಂಧನದಿಂದ ನಗರದಲ್ಲಿ ನಡೆದಿದ್ದ 30 ಸರಗಳವು ಪ್ರಕರಣಗಳು ಬೆಳಕಿಗೆ ಬಂದಿವೆ’ ಎಂದು ಹರಿಶೇಖರನ್ ಹೇಳಿದರು.

‘ಬೆಳಗಿನ ಜಾವ ಮತ್ತು ಮಧ್ಯಾಹ್ನದ ಸಮಯದಲ್ಲಿ ಸರಗಳವು ಪ್ರಕರಣಗಳು ಹೆಚ್ಚಾಗಿದ್ದರಿಂದ ಕಲಾಸಿಪಾಳ್ಯ ಠಾಣೆ ಇನ್‌ಸ್ಪೆಕ್ಟರ್‌ ಜಿ.ಎಸ್.ಅನಿಲ್‌ ಕುಮಾರ್‌ ಅವರ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಸಿಬ್ಬಂದಿ, ಈ ಎರಡು ಅವಧಿಯಲ್ಲೇ ಮಫ್ತಿಯಲ್ಲಿ ಗಸ್ತು ತಿರುಗುತ್ತಿದ್ದರು. ಆಗ ಕೃತ್ಯ ಎಸಗಲು ಬಂದಿದ್ದ ಆರೋಪಿಗಳು ಸಿಕ್ಕಿ ಬಿದ್ದರು. ಪ್ರಮುಖ ಆರೋಪಿ ಸನಾವುಲ್ಲಾನನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಉಳಿದವ­ರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸ­ಲಾಗಿದೆ’ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.

ಬಸ್‌ ಕಳ್ಳನ ಬಂಧನ: ಖಾಸಗಿ ಬಸ್‌ ಕಳವು ಮಾಡಿದ್ದ ನಾರಾಯಣರೆಡ್ಡಿ (38) ಎಂಬಾತನನ್ನು ಉಪ್ಪಾರ­ಪೇಟೆ ಪೊಲೀಸರು ಬಂಧಿಸಿದ್ದಾರೆ. ಚಿಕ್ಕಬಳ್ಳಾಪುರದ ಗುಂಡ್ಲಪಲ್ಲಿ ಗ್ರಾಮದ ನಾರಾ­ಯಣರೆಡ್ಡಿ, ಉಪ್ಪಾರ­ಪೇಟೆಯ ಅಶ್ವಿನಿ ಟ್ರಾವೆಲ್ಸ್‌ನಲ್ಲಿ ಬಸ್‌ ಚಾಲಕನಾಗಿದ್ದ. ಇತ್ತೀಚೆಗೆ ಆತ ಕೆಲಸ ಬಿಟ್ಟಿದ್ದ.  ನಕಲಿ ಕೀ ಬಳಸಿ ಬಸ್‌ ಕದ್ದೊಯ್ದ ಆರೋಪಿ, ಹುಟ್ಟೂ­ರಾದ ಗುಂಡ್ಲುಪಲ್ಲಿಯಲ್ಲಿ ಮಾರಾಟ ಮಾಡುವ ಯತ್ನಿಸಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT