ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೂ. 60.29 ಲಕ್ಷ ಹವಾಲಾ ಹಣ ವಶ: ಬಂಧನ

Last Updated 28 ಫೆಬ್ರುವರಿ 2015, 19:31 IST
ಅಕ್ಷರ ಗಾತ್ರ

ಕಾರವಾರ: ಖಾಸಗಿ ಬಸ್‌ನಲ್ಲಿ ಹವಾಲಾ ಹಣ ಸಾಗಿಸುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ತಾಲ್ಲೂಕಿನ ಚಿತ್ತಾಕುಲ ಪೊಲೀಸರು ಶುಕ್ರವಾರ ತಡರಾತ್ರಿ ಬಂಧಿ­ಸಿದ್ದು, ಅವರ ಬಳಿಯಿದ್ದ ರೂ. 60.29 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ. 

ಗುಜರಾತ್‌ ಮೂಲದ ದಿನೇಶ್‌ ಬಾಯ್‌ ಮೋದಿ ಹಾಗೂ ನಟೋರ್‌­ಲಾಲ್‌ ಪಟೇಲ್‌ ಬಂಧಿತರು. ಕರ್ನಾಟಕ–ಗೋವಾ ಗಡಿಭಾಗವಾದ ಮಾಜಾಳಿ ಚೆಕ್‌ಪೋಸ್ಟ್‌ನಲ್ಲಿ ಅಬಕಾರಿ ಇಲಾಖೆ ಸಿಬ್ಬಂದಿ ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಆರೋಪಿಗಳು ಸಿಕ್ಕಿಬಿದ್ದಿ­ದ್ದಾರೆ. ನಂತರ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಚಿತ್ತಾಕುಲ ಪೊಲೀಸರ ವಶಕ್ಕೆ ನೀಡಿದರು.

ಆರೋಪಿಗಳು ರೂ. 1,000 ಮತ್ತು ರೂ. 500 ನೋಟುಗಳ ಕಂತೆಗಳನ್ನು ಜಾಕೆಟ್‌ ರೂಪದ ಬನಿಯನ್‌ನೊಳಗೆ ಅಡಗಿಸಿಟ್ಟುಕೊಂಡಿದ್ದರು. ತಪಾಸಣೆ ವೇಳೆ ಆರೋಪಿಗಳು ‘ನಮಗೆ ಶಸ್ತ್ರಚಿಕಿತ್ಸೆ­ಯಾಗಿದೆ. ಹಾಗಾಗಿ ನಮ್ಮನ್ನು ಮುಟ್ಟ­ಬೇಡಿ, ನೋವಾಗುತ್ತದೆ’ ಎಂದು ಹೇಳಿದ್ದಾರೆ. ಇದರಿಂದ ಅನುಮಾನ ಬಂದು, ಅವರನ್ನು ತಪಾಸಣೆ ಮಾಡಿ­ದಾಗ ಹಣ ದೊರೆಯಿತು. ಗೋವಾ­ದಿಂದ ಮಂಗ­ಳೂರಿಗೆ ಅವರು ಈ ಹಣ ಸಾಗಿಸುತ್ತಿದ್ದರು ಎಂದು ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ.

‘ಈ ಹಣಕ್ಕೆ ಯಾವುದೇ ದಾಖಲೆ ಇಲ್ಲ. ಅಲ್ಲದೇ ಇದು ಅಸಲಿಯೇ ಅಥವಾ ನಕಲಿಯೇ ಎಂಬುದನ್ನು ತಿಳಿಯಬೇಕಿದೆ. ಆರೋಪಿಗಳು ಗುಜರಾತ್‌ನಿಂದ ಮಡ­ಗಾಂವ್‌ಗೆ ರೈಲಿನಲ್ಲಿ ಬಂದು, ಅಲ್ಲಿಂದ ಏಜೆಂಟ್‌ ನೀಡಿದ ಹಣವನ್ನು ಮಂಗ­ಳೂರಿಗೆ ತೆಗೆದುಕೊಂಡು ಹೋಗುತ್ತಿ­ದ್ದರು. ವಶಪಡಿಸಿಕೊಂಡ ಹಣವನ್ನು ಆದಾಯ ತೆರಿಗೆ ಇಲಾಖೆಗೆ ಹಸ್ತಾಂತರಿ­ಸ­ಲಾಗುವುದು ಹಾಗೂ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿ­ಸಲಾ­ಗುವುದು’ ಎಂದು ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ದೇವರಾಜು ‘ಪ್ರಜಾವಾಣಿ’ ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT