ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೂ 80 ಸಾವಿರ ಕೋಟಿ ರಕ್ಷಣಾ ಯೋಜನೆಗೆ ಒಪ್ಪಿಗೆ

Last Updated 25 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ರಕ್ಷಣಾ ಇಲಾಖೆಗೆ ಸೇರಿದ ಒಟ್ಟು ರೂ 80 ಸಾವಿರ ಕೋಟಿ ವೆಚ್ಚದ ಯೋಜನೆಗಳಿಗೆ ಕೇಂದ್ರ ಸರ್ಕಾರ ಶನಿವಾರ ಒಪ್ಪಿಗೆ ನೀಡಿದೆ. ಆರು ಜಲಾಂತರ್ಗಾಮಿ­ಗ­ಳನ್ನು ದೇಶೀ­ಯ­ವಾಗಿ ನಿರ್ಮಿಸಲು ತೀರ್ಮಾನಿಸಿದ್ದು, ಇದಕ್ಕಾಗಿ ರೂ50 ಸಾವಿರ ಕೋಟಿ ವೆಚ್ಚ ಮಾಡಲಾಗುತ್ತದೆ.

ಇಸ್ರೇಲ್‌ನಿಂದ ಎಂಟು ಸಾವಿರಕ್ಕೂ ಹೆಚ್ಚು ಟ್ಯಾಂಕ್‌ನಿರೋಧಕ ಕ್ಷಿಪಣಿ  ಖರೀದಿ ಹಾಗೂ 12 ಅತ್ಯಾಧುನಿಕ ಡಾರ್ನಿಯರ್‌ ಬೇಹುಗಾರಿಕಾ ವಿಮಾನ­ಗಳನ್ನು ಖರೀದಿಸುವುದೂ ರೂ80 ಸಾವಿರ ಕೋಟಿಗಳ ಯೋಜನೆಯ ಭಾಗವಾಗಿದೆ. ರಕ್ಷಣಾ ಸಚಿವ ಅರುಣ್‌ ಜೇಟ್ಲಿ ಅವರು ರಕ್ಷಣಾ ಸಾಧನ– ಸಲಕರಣೆ ಸಂಗ್ರಹಣಾ ಮಂಡಳಿಯಲ್ಲಿ ಎರಡು ಗಂಟೆ ಕಾಲ ಸಮಾಲೋಚನೆ ನಡೆಸಿದ ನಂತರ ಈ ತೀರ್ಮಾನ ತೆಗೆದುಕೊಳ್ಳ­ಲಾ­ಗಿದೆ. ಸಭೆಯಲ್ಲಿ ರಕ್ಷಣಾ ಕಾರ್ಯ­ದರ್ಶಿ, ಸೇನೆಯ ಮೂರು ಪಡೆಗಳ ಮುಖ್ಯಸ್ಥರು, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಮುಖ್ಯಸ್ಥರು ಮತ್ತಿತರರು ಭಾಗವಹಿಸಿದ್ದರು.

ಇಸ್ರೇಲ್‌ನಿಂದ 8,356 ಕ್ಷಿಪಣಿಗ­ಳನ್ನು ರೂ3,200 ಕೋಟಿ ವೆಚ್ಚದಲ್ಲಿ ಖರೀದಿಸಲಾಗುತ್ತದೆ. ಎಚ್‌ಎಎಲ್‌ನಿಂದ 12 ಅತ್ಯಾಧುನಿಕ ವಿಮಾನಗಳ ಖರೀದಿಗೆ ರೂ1,850 ಕೋಟಿ ವೆಚ್ಚ ಮಾಡಲು ನಿರ್ಧರಿಸಲಾಗಿದೆ. ಇದಲ್ಲದೆ ಭೂ ಸೇನೆಗೆ 362 ವಾಹನಗಳನ್ನು ರೂ662 ಕೋಟಿ ವೆಚ್ಚದಲ್ಲಿ ಖರೀದಿಸಲಾಗುತ್ತದೆ. ಆರು ಜಲಾಂತರ್ಗಾಮಿ ಹಡಗುಗಳನ್ನು ನಿರ್ಮಾಣ ಸಂಬಂಧ ಸಮಿತಿಯೊಂದನ್ನು ರಚಿಸಿದ್ದು, ಸಾಧಕ – ಬಾಧಕಗಳ ಬಗ್ಗೆ ರಕ್ಷಣಾ ಇಲಾಖೆ ಅಧ್ಯಯನ ಮಾಡಲಿದೆ ಎಂದು ಮೂಲಗಳು ತಿಳಿಸಿವೆ. ಸರ್ಕಾರಿ ಅಥವಾ ಖಾಸಗಿ ಸಹ­ಭಾಗಿತ್ವ­ದಲ್ಲಿ ಹಡಗುಕಟ್ಟೆಗಳನ್ನು  ಸ್ಥಾಪಿ­ಸುವ ಬಗ್ಗೆ ಅಧ್ಯಯನ ನಡೆಸಿ ಸಮಿತಿಯು 68 ವಾರಗಳಲ್ಲಿ ವರದಿ ನೀಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT