ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೂ17,330 ಕೋಟಿ ತೆರಿಗೆ ಸಂಗ್ರಹ

ಕಡಿಮೆಯಾದ ಮನರಂಜನೆ, ವಿಲಾಸಿ ತೆರಿಗೆ
Last Updated 18 ಸೆಪ್ಟೆಂಬರ್ 2014, 20:07 IST
ಅಕ್ಷರ ಗಾತ್ರ

ಬೆಂಗಳೂರು: ಮನರಂಜನೆ ಮತ್ತು ವಿಲಾಸಿ ತೆರಿಗೆ ನಿರೀಕ್ಷಿತ ಪ್ರಮಾಣದಲ್ಲಿ ಸಂಗ್ರಹ ಆಗುತ್ತಿಲ್ಲ. ಈ ನಿಟ್ಟಿನಲ್ಲಿ ಹೆಚ್ಚು ನಿಗಾವಹಿಸಬೇಕು ಎಂದು ಮುಖ್ಯ­ಮಂತ್ರಿ ಸಿದ್ದರಾಮಯ್ಯ ಅವರು ಹಣಕಾಸು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಇಲಾಖೆಯ ಪ್ರಗತಿ ಪರಿಶೀಲನೆ ವೇಳೆ ಅವರು ಈ ತಾಕೀತು ಮಾಡಿದರು. ‘ಏಪ್ರಿಲ್‌ನಿಂದ ಆಗಸ್ಟ್‌ವರೆಗೆ ಮನರಂಜನಾ ತೆರಿಗೆ ಕೇವಲ 83 ಕೋಟಿ (ಶೇ 36ರಷ್ಟು) ಮತ್ತು ವಿಲಾಸಿ ತೆರಿಗೆ ರೂ 140 ಕೋಟಿ (ಶೇ 33ರಷ್ಟು) ಸಂಗ್ರಹ ಆಗಿದೆ. ನನ್ನ ಪ್ರಕಾರ ಇನ್ನೂ ಹೆಚ್ಚು ಸಂಗ್ರಹಿಸಬೇಕಿತ್ತು’ ಎಂದು ಅವರು ಅಭಿಪ್ರಾಯಪಟ್ಟರು ಎನ್ನಲಾಗಿದೆ.

ಏಪ್ರಿಲ್‌ನಿಂದ ಆಗಸ್ಟ್‌ವರೆಗೆ ಒಟ್ಟು ರೂ 17,330 ಕೋಟಿ ತೆರಿಗೆ (ಶೇ 40ರಷ್ಟು) ಸಂಗ್ರಹಿಸಲಾಗಿದೆ. ಇದೇ ಅವಧಿಯಲ್ಲಿ ಕಳೆದ ವರ್ಷ ರೂ 15,099 ಕೋಟಿ ಸಂಗ್ರಹವಾಗಿತ್ತು ಎಂದು ಅವರು ವಿವರಿಸಿದರು.

ಗುರಿಮೀರಿ ತೆರಿಗೆ ಸಂಗ್ರಹಿಸಬೇಕು. ಗುರಿ ಸಾಧಿಸಿದ ತಕ್ಷಣ ಸುಮ್ಮನೆ ಕೂರುವಂತಿಲ್ಲ ಎಂದೂ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಅಮೆಜಾನ್‌: 2 ದಿನದಲ್ಲಿ ವರದಿ

ಮನರಂಜನೆ ಮತ್ತು ವಿಲಾಸಿ ತೆರಿಗೆ ನಿರೀಕ್ಷಿತ ಪ್ರಮಾಣದಲ್ಲಿ ಸಂಗ್ರಹ ಆಗುತ್ತಿಲ್ಲ. ಈ ನಿಟ್ಟಿನಲ್ಲಿ ಹೆಚ್ಚು ನಿಗಾವಹಿಸಬೇಕು ಎಂದು ಮುಖ್ಯ­ಮಂತ್ರಿ ಸಿದ್ದರಾಮಯ್ಯ ಅವರು ಹಣಕಾಸು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ನವದೆಹಲಿ (ಪಿಟಿಐ): ಕೇಂದ್ರ ಸರ್ಕಾ­ರದ ಜನ ಧನ ಯೋಜನೆಯಡಿ ಈವರೆಗೆ 4 ಕೋಟಿ ಖಾತೆ  ತೆರೆಯ­ಲಾಗಿದ್ದು, ಒಟ್ಟು ₨3,700 ಕೋಟಿ ಆರಂಭಿಕ ಠೇವಣಿ ಸಂಗ್ರಹ­ವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT