ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೆಕೋಲ್ಡ್‌ದಿಂದ ‘ಅಲ್ಫಾ ಪ್ರೊ’ ಸೋಲಾರ್ ವಾಟರ್‌ ಹೀಟರ್‌

Last Updated 3 ಮೇ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ನೀರು ಕಾಯಿಸುವ ಯಂತ್ರಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ರೆಕೋಲ್ಡ್‌ ಥರ್ಮೊ ಕಂಪೆನಿ ಇದೇ ಮೊದಲ ಬಾರಿಗೆ ಸೌರಶಕ್ತಿಯಿಂದ ನೀರು ಕಾಯಿಸುವ ‘ಅಲ್ಫಾ ಪ್ರೊ’  ಯಂತ್ರವನ್ನು (ಸೋಲಾರ್‌ ವಾಟರ್‌ ಹೀಟರ್‌) ಮಂಗಳವಾರ ರಾಜ್ಯದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಸೋಲಾರ್‌ ವಾಟರ್‌ ಹೀಟರ್‌ ಬಿಡುಗಡೆ ಮಾಡಿ ಮಾತನಾಡಿದ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ರಾಮನಾಥ್‌ ವೆಂಕಟರಾಮನ್‌, ಇದರ ಬಳಕೆಯಿಂದ ವರ್ಷಕ್ಕೆ ಕನಿಷ್ಠವೆಂದರೂ  ಮೂರು ಸಾವಿರಕ್ಕೂ ಹೆಚ್ಚು ಯೂನಿಟ್‌ ವಿದ್ಯುತ್‌ ಉಳಿತಾಯ ಮಾಡಬಹುದು ಎಂದರು.

ಸೌರಶಕ್ತಿ ಬಳಕೆಯಿಂದ ವಿದ್ಯುತ್‌ ಮಿತವ್ಯಯ ಸಾಧಿಸಬಹುದಲ್ಲದೇ   ಇಂಗಾಲ  ಹೊರಸೂಸುವಿಕೆಯನ್ನು ತಡೆಗಟ್ಟಿ ಪರಿಸರ ರಕ್ಷಿಸಬಹುದಾಗಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ವಿಶ್ವದಲ್ಲಿ ಇದೇ ಮೊದಲ ಬಾರಿಗೆ ಇದರಲ್ಲಿ ‘ಸ್ಮಾರ್ಟ್‌ ಫ್ಲೋಟ್‌’ ಆಧುನಿಕ ತಂತ್ರಜ್ಞಾನ ಅಳವಡಿಸಲಾಗಿದೆ. ಜನರ ಅಗತ್ಯಕ್ಕೆ ತಕ್ಕಂತೆ ನೂರರಿಂದ ಐದುನೂರು ಲೀಟರ್‌ ಸಾಮರ್ಥ್ಯದಲ್ಲಿ ಲಭ್ಯವಿರುವ ಸೋಲಾರ್‌ ವಾಟರ್‌ ಹೀಟರ್‌ ಬೆಲೆ ₹19 ಸಾವಿರದಿಂದ ಆರಂಭವಾಗುತ್ತದೆ.

ಆಕರ್ಷಕ ವಿನ್ಯಾಸ, ತುಕ್ಕು ನಿರೋಧಕ ಹೊರಮೈ, ಕಾಯ್ದ ನೀರು ಬಹಳ ಹೊತ್ತು ಬಿಸಿಯಾಗಿರುವಂತೆ ತಾಪಮಾನ ಕಾಯ್ದುಕೊಳ್ಳಲು ವಿಶೇಷ ಬಗೆಯ ಸ್ಪಂಜನ್ನು (ಪಾಲಿಯುರೇಥಿನ್‌ ಫೋಮ್‌) ಬಳಸಲಾಗಿದೆ.

ವಸತಿ, ವಾಣಿಜ್ಯ, ಆರೋಗ್ಯ ಮತ್ತು ಆತಿಥ್ಯ ಕ್ಷೇತ್ರಗಳ ಬಳಕೆಗೆ ಇದು ಅನುಕೂಲಕರವಾಗಿದೆ ಎಂದು ರಾಮನಾಥ್‌ ತಿಳಿಸಿದರು. ರೆಕೋಲ್ಡ್‌ ದೇಶದಾದ್ಯಂತ 12 ಸಾವಿರ ಮಳಿಗೆ, 170 ಸೇವಾ ಕೇಂದ್ರ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT