ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೆಕ್ಕೆ ಬಿಚ್ಚಿತು ‘ಪಾತರಗಿತ್ತಿ’

Last Updated 28 ಮೇ 2015, 19:30 IST
ಅಕ್ಷರ ಗಾತ್ರ

‘ಪಾತರಗಿತ್ತಿ ಅಂದ ಕೂಡಲೇ ಬಹುತೇಕ ಜನರ ಮನಸ್ಸಿನಲ್ಲಿ ಹೆಣ್ಣಿನ ಚಿತ್ರ ಮೂಡುತ್ತದೆ. ಆದರೆ ನಾವು ಹೇಳುತ್ತಿರುವುದು ಬೇರೆಯದೇ ಕಥೆ. ಮನಸ್ಸು ಪಾತರಗಿತ್ತಿ ಇದ್ದಂತೆ, ಅಷ್ಟು ಚಂಚಲ’ ಎಂಬ ಸ್ಪಷ್ಟನೆಯನ್ನು ಮೊದಲೇ ಕೊಟ್ಟರು ನಿರ್ದೇಶಕ ಕೆ. ಈಶ್ವರ್.

ಐದಾರು ನಿರ್ದೇಶಕರ ಬಳಿ ಸಹಾಯಕನಾಗಿ ದುಡಿದು, ಮೊದಲ ಬಾರಿಗೆ ಸ್ವತಂತ್ರವಾಗಿ ನಿರ್ದೇಶನಕ್ಕೆ ಇಳಿದಿರುವ ಈಶ್ವರ್ ಅವರಲ್ಲಿ ಸಮಾಜಕ್ಕೆ ಸಂದೇಶ ಹಾಗೂ ಮನರಂಜನೆ ಎರಡನ್ನೂ ನೀಡುವ ಸಿನಿಮಾ ಕೊಡುವ ಉತ್ಸಾಹವಿದೆ. ಅದಕ್ಕೆಂದೇ ತುಂಬ ಸೂಕ್ಷ್ಮವಾದ ವಿಚಾರವನ್ನು ಅವರು ‘ಪಾತರಗಿತ್ತಿ’ಗೆ ಆಯ್ದುಕೊಂಡಿದ್ದಾರಂತೆ. ಇಂದು (ಮೇ 29) ತೆರೆಗೆ ಬಂದಿರುವ ಈ ಸಿನಿಮಾಕ್ಕೆ ಸಂಬಂಧಿಸಿದಂತೆ ಅವರು ಹೇಳುವುದು ಒಂದೇ ಮಾತು: ಚಿತ್ರ ನಿರ್ಮಾಣ ಸುಲಭ, ಬಿಡುಗಡೆ ಕಷ್ಟ!

ಮಹಿಳೆಯನ್ನು ಶೀಲದ ಚೌಕಟ್ಟಿನಲ್ಲಿ ಬಂಧಿಸಿಡುವ ಧೋರಣೆ ಸರಿಯೇ ತಪ್ಪೇ ಎಂಬ ಜಿಜ್ಞಾಸೆ ಚಿತ್ರದಲ್ಲಿ ಕಾಣುತ್ತದಂತೆ. ಅಂದಹಾಗೆ ಈ ಸಿನಿಮಾಕ್ಕೆ ಯುವತಿಯೊಬ್ಬಳ ಜೀವನದಲ್ಲಿ ನಡೆದ ಘಟನೆಯೇ ಪ್ರೇರಣೆಯಂತೆ. ‘ಆ ಯುವತಿ ಈಗ ಉನ್ನತ ಹುದ್ದೆಯಲ್ಲಿ ಇದ್ದಾಳೆ.
ಸಿನಿಮಾ ತೆರೆಕಂಡ ಸ್ವಲ್ಪ ದಿನಗಳ ಬಳಿಕ ಆಕೆಯನ್ನು ಮಾಧ್ಯಮಗಳ ಎದುರು ಕರೆತರುತ್ತೇನೆ’ ಎಂದು ನಿರ್ದೇಶಕರು ಪ್ರಕಟಿಸಿದರು.

ಹಾಡಿಗೆ ಡಾನ್ಸ್ ಮಾಡಿಸಲು ಒಂದು ವಾರ ಪ್ರಾಕ್ಟೀಸ್ ಮಾಡಿದ್ದನ್ನು ನಾಯಕ ನಟ ಶ್ರೀಕಿ ನೆನಪಿಸಿಕೊಂಡರು. ‘ಇದೊಂದು ಕಲರ್‌ಫುಲ್ ಸಿನಿಮಾ’ ಎಂಬುದು ಅವರ ಬಣ್ಣನೆ. ಚಿತ್ರೀಕರಣದ ಅವಧಿಯಲ್ಲಿ ನಿರ್ದೇಶಕ ಹಾಗೂ ಶ್ರೀಕಿ ಮಾರ್ಗದರ್ಶನ ಮಾಡಿದ್ದರಿಂದಲೇ ತಮಗೆ ಅಭಿನಯಿಸುವುದು ಸುಲಭವಾಯಿತು ಎಂದು ನಾಯಕಿ ಪ್ರಜ್ಜು ಪೂವಯ್ಯ ಹೇಳಿಕೊಂಡರು. ಸ್ನೇಹಿತ ಈಶ್ವರ್ ಕೋರಿಕೆ ಮೇರೆಗೆ ಒಂದು ಪಾತ್ರ ಮಾಡಿರುವ ನಿರ್ದೇಶಕ ಲಕ್ಕಿ ಶಂಕರ್, ಶೀರ್ಷಿಕೆಯಷ್ಟೇ ಸಿನಿಮಾ ಕೂಡ ಮುದ್ದಾಗಿದೆ ಎಂದು ಹೊಗಳಿದರು.

ಸಿನಿಮಾ ಸಿದ್ಧಪಡಿಸಿದ ಮೇಲೆ ಸಾಕಷ್ಟು ವಿತರಕರಿಗೆ ತೋರಿಸಿದಾಗ, ಎಲ್ಲರೂ ಹೊಗಳಿದರೇ ವಿನಾ ಹಂಚಿಕೆಗೆ ಮುಂದಾಗಲಿಲ್ಲವಂತೆ. ಕೊನೆಗೆ ಒಪ್ಪಿಗೆ ಸೂಚಿಸಿದ್ದು ಮುನಿರಾಜು. ಕನ್ನಡ ಸಿನಿಮಾಗಳನ್ನು ಪ್ರದರ್ಶಿಸಲು ಚಿತ್ರಮಂದಿರಗಳು ನೆರವಾಗುತ್ತಿಲ್ಲ ಎಂಬ ಸಮಾಧಾನ ಮುನಿರಾಜು ಅವರಲ್ಲಿದೆ. ‘ಸಮಾಜಕ್ಕೆ ಸಂದೇಶ ಕೊಡುವುದರ ಜತೆಗೆ ಮನರಂಜನೆಯನ್ನೂ ನೀಡುವ ಈ ಸಿನಿಮಾವನ್ನು ಎಲ್ಲರೂ ನೋಡಬೇಕು’ ಎಂದವರು ಮನವಿ ಮಾಡಿದರು. ನಿರ್ಮಾಪಕಾದ ಮಂಜುನಾಥ ಎಂ.ಸಿ. ಲೋಕೇಶ್ ತಾರಾನಗರ ಇತರರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯದ ಸುಮಾರು 70 ಚಿತ್ರಮಂದಿರಗಳಲ್ಲಿ ‘ಪಾತರಗಿತ್ತಿ’ ತೆರೆ ಕಾಣಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT