ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಸಾವು ತಡೆಗೆ ವಿನೂತನ ಪ್ರಯೋಗ

ಪೋಲಿಸ್‌ ಇಲಾಖೆಯಿಂದ ಕರಪತ್ರ ಹಂಚಿಕೆ, ಜಾಗೃತಿ ಸಭೆ
Last Updated 5 ಜುಲೈ 2015, 19:30 IST
ಅಕ್ಷರ ಗಾತ್ರ

ಮಂಡ್ಯ: ‘ಜೀವನ ಸುಂದರವಾದುದು ಮತ್ತು ಅಮೂಲ್ಯವಾದುದು. ಆತ್ಮಹತ್ಯೆಯೇ ಸಮಸ್ಯೆಗಳಿಗೆ ಪರಿಹಾರವಲ್ಲ. ಈಸಬೇಕು– ಇದ್ದು ಜಯಿಸಬೇಕು’ 

–ಹೀಗೊಂದು ಮನವಿ ಪತ್ರ ಹಿಡಿದುಕೊಂಡು ಜಿಲ್ಲಾ ಪೊಲೀಸ್‌ ಇಲಾಖೆ ಸಿಬ್ಬಂದಿ ಗ್ರಾಮ ಗ್ರಾಮಗಳಿಗೆ ತೆರಳಿ ಜಾಗೃತಿ ಸಭೆಯಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ. ಇಪ್ಪತ್ತು ದಿನದ ಅವಧಿಯಲ್ಲಿ ಎಂಟು ರೈತರು ಆತ್ಮಹತ್ಯೆ ಮಾಡಿಕೊಂಡಿರುವುದರಿಂದ ಈ ಅಭಿಯಾನ ಆರಂಭಿಸಲಾಗಿದೆ.

ಆತ್ಮಹತ್ಯೆ ಮಾಡಿಕೊಳ್ಳದಂತೆ ಮಾಡುವ ಮನವಿಯ ಜತೆಗೆ, ಮಿತಿಮೀರಿದ ಬಡ್ಡಿ ವಿಧಿಸುವಿಕೆಯ ನಿಷೇಧ ಅಧಿನಿಯಮ ಉಲ್ಲಂಘಿಸಿ ಹೆಚ್ಚಿನ ಬಡ್ಡಿ ವಸೂಲಿ ಮಾಡುತ್ತಿರುವವರಿಗೆ ಎಚ್ಚರಿಕೆ ನೀಡುವ ಕರಪತ್ರಗಳನ್ನೂ ವಿತರಣೆ ಮಾಡಲಾಗುತ್ತಿದೆ. ರೈತರಲ್ಲಿ ಮಿತಿ ಮೀರಿದ ಬಡ್ಡಿ ವಸೂಲಾತಿ ಬಗ್ಗೆ ಜಾಗೃತಿ ಮೂಡಿಸಲು ಕರಪತ್ರಗಳಲ್ಲಿ ಅಧಿನಿಯಮದ ಬಗ್ಗೆ ವಿವರವಾಗಿ ಮುದ್ರಿಸಲಾಗಿದೆ. ಸಾಲ ನೀಡಿದ ವ್ಯಕ್ತಿಯ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದು ರುಜುವಾತಾದರೆ ಅವರ ವಿರುದ್ಧ ‘ಆತ್ಮಹತ್ಯೆಗೆ ಪ್ರೇರೇ ಪಿಸಿದ್ದಾರೆ’ ಎಂದು ಪರಿಗಣಿಸಿ ದೂರು ದಾಖಲಿಸಲು ಇಲಾಖೆ ಮುಂದಾಗಿದೆ.

ಮಿತಿಮೀರಿದ ಬಡ್ಡಿ ಕಿರುಕುಳವಿದ್ದರೆ ಕೂಡಲೇ ದೂರು ಸಲ್ಲಿಸಬಹುದು, ಪೊಲೀಸ್‌ ನಿಯಂತ್ರಣ ಕೊಠಡಿಗೆ ಕರೆ ಮಾಡುವಂತೆ ದೂರವಾಣಿ ಸಂಖ್ಯೆ ನೀಡಲಾಗಿದೆ.

ಮತ್ತಿಬ್ಬರು ರೈತರ ಆತ್ಮಹತ್ಯೆ
ಬೆಂಗಳೂರು:
ಸಾಲಬಾಧೆ ಮತ್ತು ಆರ್ಥಿಕ ಸಂಕಷ್ಟದಿಂದ ಮತ್ತಿಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಚನ್ನರಾಯಪಟ್ಟಣ ವರದಿ: ಸಾಲಬಾಧೆ ತಾಳಲಾರದೆ ಶ್ರವಣಬೆಳಗೊಳ ಹೋಬಳಿ ಅರುವನಹಳ್ಳಿ ಗ್ರಾಮದ ರೈತ ಪುಟ್ಟಸ್ವಾಮಿ (60) ಎಂಬುವವರು  ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆ.ಆರ್. ನಗರ ವರದಿ: ಕಬ್ಬು ಬೆಳೆದ ರೈತ ಶ್ರೀನಿವಾಸ್ (55) ಆರ್ಥಿಕ ಸಂಕಷ್ಟದಿಂದ ನೇಣು ಹಾಕಿ ಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲ್ಲೂಕಿನ ಅಡಗೂರಿನಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ.

ಆ.10ರಂದು ಧರಣಿ
ವಿಜಯಪುರ: ‘ರೈತರ ಆತ್ಮಹತ್ಯೆ ತಡೆಗಟ್ಟಲು ವಿಫಲವಾಗಿರುವ ಕೇಂದ್ರ ಸರ್ಕಾರದ ನೀತಿಯನ್ನು ಖಂಡಿಸಿ, ಮೃತಪಟ್ಟ 300ಕ್ಕೂ ಅಧಿಕ ರೈತ ಕುಟುಂಬಗಳ ಸದಸ್ಯರ ಜತೆ ಸಂಸತ್‌ ಎದುರು ಬರುವ ಆಗಸ್ಟ್‌ 10,11ರಂದು ಧರಣಿ ನಡೆಸಲಾಗುವುದು’ ಎಂದು ಪ್ರಾಂತ ರೈತ ಸಂಘದ ರಾಜ್ಯ ಕಾರ್ಯದರ್ಶಿ ಯು.ಬಸವರಾಜು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT