ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಹೋರಾಟದ ಕನಸು ನನಸು

₹ 25.55 ಕೋಟಿ ವೆಚ್ಚದ ಕೊಂಗಂಡಿ ಏತ ನೀರಾವರಿ ಯೋಜನೆಗೆ ಚಾಲನೆ
Last Updated 5 ಮೇ 2016, 10:35 IST
ಅಕ್ಷರ ಗಾತ್ರ

ಶಹಾಪುರ: ಕಾಲುವೆಯ ಕೊನೆ ಭಾಗದ ರೈತರಿಗೆ ಸಮರ್ಪಕವಾಗಿ ನೀರು ದೊರಕದೆ ಸಂಕಷ್ಟ ಎದುರಿಸುತ್ತಿದ್ದಾರೆ. ರೈತರ ಸಮಸ್ಯೆಯ ಪರಿಹಾರಕ್ಕಾಗಿ ನಿರಂತರ ಹೋರಾಟ ಮಾಡಿ ದೊಡ್ಡಮೊತ್ತದ ಯೋಜನೆಗೆ ಚಾಲನೆ ನೀಡುತ್ತಿರುವುದು ಹೆಚ್ಚು ಖುಷಿ ನೀಡುತ್ತದೆ ಎಂದು ಶಾಸಕ ಡಾ.ಎ.ಬಿ.ಮಾಲಕರಡ್ಡಿ ಹೇಳಿದರು.

25.55 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುವ ತಾಲ್ಲೂಕಿನ ಕೊಂಗಂಡಿ ಏತ ನೀರಾವರಿಯಿಂದ ಶಹಾಪುರ ಶಾಖಾ ಕಾಲುವೆಯ ವಿತರಣಾ ನಂಬರ.9ರ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಒದಗಿಸುವುದು ಹಾಗೂ ಕುಡಿಯುವ ನೀರಿನ ಜೊತೆಯಲ್ಲಿ ಅಂತರ್ಜಲಮಟ್ಟವನ್ನು ಪುನಶ್ಚೇತನ ಕಾಮಗಾರಿಗೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.

ಯೋಜನೆ ಅನುಷ್ಠಾನ ಗೊಳ್ಳುವುದ ರಿಂದ ತಾಲ್ಲೂಕಿನ ಸಾವೂರ, ನಂದಿಹಳ್ಳಿ(ಜೆ), ಕೊಳ್ಳೂರ (ಎಂ), ಟೊಣ್ಣೂರ, ಯಕ್ಷಿಂತಿ, ಗೌಡೂರ, ಬಿರನೂರ, ಮದರಕಲ್ ಗ್ರಾಮಗಳಿಗೆ ಹೆಚ್ಚಿನ ಅನುಕೂಲವಾಗಿದೆ. ಕಾಮಗಾರಿ ನಿರ್ವಹಿಸಲು ನಬಾಡರ್್ ಯೋಜನೆ ಅಡಿಯಲ್ಲಿ ಅವಕಾಶ ದೊರಕಿದೆ. ಕೊಂಗಂಡಿ ನಾಲಾದಿಂದ ಜಲಮೂಲ ವಾಗಿದೆ. ಇದರಿಂದ 4849.77 ಹೆಕ್ಟೇರ್ ಪ್ರದೇಶದ ಜಮೀನುಗಳಿಗೆ ಅನುಕೂಲ ವಾಗಿದೆ. 2500 ಮೀಟರ್ ಕೊಳವೆ ಮಾರ್ಗವಿದೆ.2017ರಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಅಮೃತ ಕನಸ್ಟ್ರಕ್ಷನ್ ಕಂಪನಿ ಕಾಮಗಾರಿಯ ನಿರ್ವಹಣೆ ಹೊತ್ತಿದೆ ಎಂದು ವಿವರಿಸಿದರು. 

ವಿತರಣಾ ಕಾಲುವೆ 9 ವ್ಯಾಪ್ತಿಯ ಹೆಚ್ಚಿನ ಹಳ್ಳಿಗಳು ನೀರಾವರಿ ಸೌಲಭ್ಯದಿಂದ ವಂಚಿತವಾಗಿದ್ದು ಹಲವಾರು ವರ್ಷದಿಂದ ರೈತರಿಗೆ ದೊಡ್ಡ ಸಮಸ್ಯೆಯಾಗಿತ್ತು. ಯೋಜನೆ ಅನುಷ್ಠಾನಗೊಂಡರೆ 8 ಹಳ್ಳಿಗಳು ನೀರಿನ ಬರದಿಂದ ಹೊರಬರಲಿವೆ. ನೀರನ್ನು ಸದ್ಭಳಕೆ ಮಾಡಿಕೊಂಡು ರೈತರ ಬದುಕಿನಲ್ಲಿ ಹಸಿರು ಮೂಡಬೇಕು. ಗುಣಮಟ್ಟದ ಕಾಮಗಾರಿಯಾಗಬೇಕು. ನಿಗದಿಪಡಿಸಿದ ಅವಧಿಯಲ್ಲಿ ಕೆಲಸ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಕಲಬುರ್ಗಿ ನೀರಾವರಿ ಯೋಜನೆಗಳ ಕಾಡಾದ ಅಧ್ಯಕ್ಷ  ಶ್ರೀನಿವಾಸರಡ್ಡಿ ಕಂದಕೂರ,ಕೆಬಿಜೆಎನ್ಎಲ್ ನಿಗಮದ  ಭೀಮರಾಯನಗುಡಿವಲಯದ ಮುಖ್ಯ ಎಂಜಿನಿಯರ್ ಪ್ರಮೋದರಡ್ಡಿ ಪಾಟೀಲ್, ಹತ್ತಿಗೂಡೂರ ಗ್ರಾಮ ಪಂಚಾಯಿತಿ ಅಧ್ಯಕ್ಷ ತಿಮ್ಮಾರಡ್ಡಿ, ಚಂದ್ರಶೇಖರ ಮರಕಲ್, ವಿಶ್ವನಾಥರಡ್ಡಿ ಸಾಹು, ಶರಣಪ್ಪ ದೇಸಾಯಿ, ಬಸಣ್ಣ ಭಂಗಿ,ಶಿವರಡ್ಡಿ, ಬಿರನೂರ ಗ್ರಾಪಂ ಅಧ್ಯಕ್ಷೆ ವಿಜಯಲಕ್ಷ್ಮಿ ನಾಟೇಕಾರ, ಶರಣಪ್ಪ ಪಾಟೀಲ್, ಚಂದಪ್ಪ ಚಲವಾದಿ, ಮಾಣಿಕರಡ್ಡಿ ಕುರಕುಂದಾ, ಮಲ್ಲಿಕಾರ್ಜುನ ಪಾಟೀಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT