ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲು ನಿಲ್ದಾಣದಲ್ಲಿ ಕಾಣೆಯಾಗಿದ್ದ ಅಮಿತಾಭ್

Last Updated 25 ಜೂನ್ 2014, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಬಾಲಿವುಡ್‌ ಬಿಗ್‌ ಬಿ ಅಮಿತಾಭ್ ಬಚ್ಚನ್‌ ಅವರು ಎರಡು ವರ್ಷದ ಪುಟ್ಟ ಬಾಲಕನಾ­ಗಿ­ದ್ದಾಗ ರೈಲು ನಿಲ್ದಾಣದಲ್ಲಿ  ತಪ್ಪಿಸಿ­ಕೊಂಡು ಕೆಲ ಹೊತ್ತು ಹೆತ್ತವರಿಗೆ ಆತಂಕ ತಂದಿದ್ದರಂತೆ!

ಬಾಲ್ಯದ ಆ ಘಟನೆಯನ್ನು ಬಚ್ಚನ್‌ ತಮ್ಮ ಬ್ಲಾಗ್‌ನಲ್ಲಿ ಸವಿಸ್ತಾರವಾಗಿ ಬರೆದುಕೊಂಡಿದ್ದಾರೆ.

ಬಿಗ್‌ ಬಿ ಹೇಳಿದ್ದು...
‘ನಾನಾಗ ಎರಡು ವರ್ಷದ ಬಾಲಕ. ಅಜ್ಜನನ್ನು ನೋಡಲೆಂದು ಅಲಹಾ­ಬಾದ್‌ನಿಂದ ಕರಾಚಿಗೆ ಹೋಗು­ತ್ತಿದ್ದೆ. ಆಗ ಕರಾಚಿ ತಲುಪು­ವುದಕ್ಕೆ ಎರಡು ದಿನಗಳು ಬೇಕಾಗು­ತ್ತಿದ್ದವು. ಕರಾಚಿ­ಯಿಂದ ವಾಪಸ್‌್ ಬರು­ತ್ತಿದ್ದಾಗ ನಡೆದ ಘಟನೆ ಇದು. ನಾವು ಒಂದು ಕಡೆ ಬೇರೆ ರೈಲು ಹತ್ತಬೇಕಿತ್ತು. ಜನಜಂಗು­ಳಿಯಲ್ಲಿ ನಾನು ಹೆತ್ತವರಿಂದ ಬೇರೆಯಾಗಿಬಿಟ್ಟೆ.  ನಾನು ಅಪ್ಪನ ಜತೆಯಲ್ಲಿ ಇಲ್ಲ ಎನ್ನುವುದು ಅಮ್ಮನಿಗೆ ಗೊತ್ತಾಯಿತು.

‘ಕಂಗಾಲಾದ ಅವರು, ನನ್ನ ಹೆಸರು ಕೂಗುತ್ತ, ‘‘ಎರಡು ವರ್ಷದ ಬಾಲಕ­ನನ್ನು ಎಲ್ಲಾದರೂ ಕಂಡಿರಾ” ಎಂದು ಪ್ಲಾಟ್‌ಫಾರ್ಮ್‌ ಉದ್ದಕ್ಕೂ ನನಗಾಗಿ ಹುಡುಕಾಡಿದರಂತೆ. ಆಗ ಅಲ್ಲಿಗೆ ಬಂದ ಪ್ರಯಾಣಿಕರೊಬ್ಬರು “ಮೇಲ್ಸೇತುವೆ ಮೇಲೆ ಬಾಲಕನೊಬ್ಬ ನಿಂತಿದ್ದನ್ನು ನೋಡಿದೆ” ಎಂದರಂತೆ.

  ‘ಕೂಡಲೇ ನನ್ನ ತಂದೆ ತಾಯಿ ಆ ಸ್ಥಳಕ್ಕೆ ಓಡಿ ಬಂದರು. ಅಲ್ಲಿ ನನ್ನನ್ನು ನೋಡಿ ಸಮಾಧಾನದ ನಿಟ್ಟುಸಿರು ಬಿಟ್ಟರು’ ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ ಬಚ್ಚನ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT