ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆ ಬಜೆಟ್: ನಿರೀಕ್ಷೆಗಳ ಮೂಟೆ

Last Updated 7 ಜುಲೈ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):  ರೈಲ್ವೆ ಸಚಿವ­ರಾದ ನಂತರ ಇದೇ ಮೊದಲ ಬಾರಿ ಸದಾನಂದ ಗೌಡ ಅವರು ಮಂಗಳ­ವಾರ  ಮಂಡಿಸಲಿರುವ 2014–15ರ ರೈಲ್ವೆ ಬಜೆಟ್‌ ಸಹಜವಾಗಿ ಭಾರಿ ನಿರೀಕ್ಷೆ ಹಾಗೂ ಕುತೂಹಲ ಹುಟ್ಟಿಸಿದೆ.

ಬಜೆಟ್‌ಗೂ ಮುನ್ನವೇ ಶೇ 14.2 ರಷ್ಟು ರೈಲು ಪ್ರಯಾಣ ದರ ಹಾಗೂ ಸರಕು ಸಾಗಣೆ ದರ (ಶೇ 6.5) ಹೆಚ್ಚಿ­ಸಿ­ರುವ ಕಾರಣ ಎಚ್ಚರಿಕೆಯ ಹೆಜ್ಜೆಗಳನ್ನು ಇಡಬೇಕಾದ ಅನಿವಾ­ರ್ಯತೆಯೂ ಅವರಿಗಿದೆ. ರೈಲ್ವೆ ಇಲಾಖೆಯ ಸದ್ಯದ ಆರ್ಥಿಕ ಸ್ಥಿತಿ ಗಮನದಲ್ಲಿಟ್ಟು
ಕೊಂಡು ಬಜೆಟ್‌ ಸಿದ್ಧಪ­ಡಿಸಲಾಗಿದೆ. ಹೀಗಾಗಿ ಸಹ­ಜವಾಗಿ ಇದು ವಾಸ್ತವ ಬಜೆಟ್‌ ಆಗಿರು­ತ್ತದೆ ಎಂದೂ ವಿಶ್ಲೇಷಿಸಲಾ­ಗುತ್ತಿದೆ.

ಬಜೆಟ್‌ನಲ್ಲಿ ಹೊಸ ರೈಲು, ರೈಲು ಮಾರ್ಗ ಘೋಷಿಸುವ ಮುನ್ನ ಅವರು, ರೈಲ್ವೆ ಇಲಾಖೆಯ ವರಮಾನ, ನಷ್ಟ­ದಂತಹ ಆರ್ಥಿಕ ಹಾಗೂ
ವಾಸ್ತವ ಅಂಶಗಳನ್ನು ಗಮನದಲ್ಲಿ ಇಟ್ಟು­ಕೊಂಡಿ­ರುತ್ತಾರೆ.

ನಷ್ಟದಲ್ಲಿರುವ ರೈಲ್ವೆ ಇಲಾಖೆಯ ವರಮಾನ ಹೆಚ್ಚಿಸಲು ಹೊಸ ಮಾರ್ಗೋ­ಪಾಯ ಹಾಗೂ ತಂತ್ರ­ಗ­ಳನ್ನೂ ಅವರು ಪ್ರಸಕ್ತ ಬಜೆಟ್‌ನಲ್ಲಿ ಘೋಷಿಸಬಹುದು. 

ಕೆಲವು ಹಳೆಯ ಯೋಜನೆಗಳನ್ನು ಕೈಬಿಡುವ ಸಾಧ್ಯತೆಗಳು ದಟ್ಟವಾಗಿದ್ದು ಆದ್ಯತೆ ಆಧಾರದ ಮೇಲೆ ಕೆಲವು ಹೊಸ ಯೋಜನೆಗಳನ್ನು ಘೋಷಿಸುವ ನಿರೀಕ್ಷೆಯೂ ಇದೆ.

ಬಜೆಟ್‌ನಲ್ಲಿ ಏನಿರಬಹುದು?
*ತೈಲ ಬೆಲೆ ಏರಿಕೆ ಬಿಸಿಯಿಂದ ತಪ್ಪಿಸಿಕೊಳ್ಳಲು ರೈಲುಗಳಲ್ಲಿ ಸೌರಶಕ್ತಿ, ಜೈವಿಕ ಇಂಧನಗಳಂತಹ ಪರ್ಯಾಯ ಶಕ್ತಿಗಳ  ಬಳಕೆಗೆ ಪ್ರೋತ್ಸಾಹ
*ರೈಲು ನಿಲ್ದಾಣಗಳ ಖಾಲಿ ಜಾಗ ಹಾಗೂ ರೈಲುಗಳ ಮೇಲೆ ಸೌರಶಕ್ತಿ ಫಲಕ ಅಳವಡಿಕೆಗೆ ಒತ್ತು
*ಪ್ರಯಾಣಿಕರ ಸುರಕ್ಷತೆ ದೃಷ್ಟಿ­ಯಿಂದ ಮುಂಬೈ ಉಪನಗರಗಳ ವಿದ್ಯುತ್‌ ಚಾಲಿತ ರೈಲು ಹಾಗೂ ಶತಾಬ್ದಿ ರೈಲು ಬೋಗಿಗಳಲ್ಲಿ ಸ್ವಯಂ­ಚಾಲಿತ ಬಾಗಿಲು ಅಳವಡಿಸಲು ಕ್ರಿಯಾ ಯೋಜನೆ 
*ದೇಶದ ಪ್ರಸಿದ್ಧ ಯಾತ್ರಾ ಸ್ಥಳಗಳನ್ನು ಜೋಡಿಸಲು ಹೊಸ ಸಂಪರ್ಕ ರೈಲುಗಳ ಆರಂಭ
*ರೈಲು ನಿಲ್ದಾಣಗಳ ಆಧುನೀ­ಕರಣ, ಮೂಲಸೌಕರ್ಯ  ವಿಸ್ತರಣೆ ಹಾಗೂ ಹೈಸ್ಪೀಡ್‌ ರೈಲುಗಳ ಆರಂಭಕ್ಕೆ ವಿದೇಶಿ ಹಾಗೂ ಖಾಸಗಿ ಬಂಡವಾಳ ಹೂಡಿಕೆಗೆ ಹಸಿರು ನಿಶಾನೆ
*ಹೈ ಸ್ಪೀಡ್‌ ರೈಲುಗಳ ಸಂಚಾರಕ್ಕೆ ‘ ಚತುಷ್ಕೋನ ಮಾರ್ಗ’ ನಿರ್ಮಾಣ ರೂಪುರೇಷೆ ಚರ್ಚೆ
*ರೈಲು ಪ್ರಯಾಣ ದರ  ಪ್ರಾಧಿಕಾರ ಮತ್ತು ಹೈಸ್ಪೀಡ್‌ ರೈಲು ಪ್ರಾಧಿಕಾರ ಕುರಿತು ಸರ್ಕಾರದ ನಿಲುವು  ಬಹಿರಂಗ ಸಾಧ್ಯತೆ
*ರೈಲು ಬೋಗಿಗಳ ಬ್ರೇಕ್‌ ವೈಫಲ್ಯ ಮತ್ತು ಗಾಲಿಗಳ ಬಿಸಿಯಾಗುವುದನ್ನು ಪತ್ತೆ ಹಚ್ಚಲು ಹಳಿಗಳ ಬದಿ ಅತ್ಯಾ­ಧುನಿಕ ಯಂತ್ರೋಪಕರಣ ಅಳವಡಿಕೆ
*ರೈಲು ಆಗಮನ, ನಿರ್ಗಮನ ವೇಳೆ,  ಎಲ್ಲ ನಿಲ್ದಾಣಗಳ ಬಗ್ಗೆ ನಿಖರ ಮಾಹಿತಿ ನೀಡುವ ಹಾಗೂ  ಸಂವಹನ ವ್ಯವಸ್ಥೆ ಬಲಗೊಳಿಸಲು ಹೊಸ ವ್ಯವಸ್ಥೆ 
*ಪ್ರಯಾಣಿಕರಿಗೆ ರುಚಿ, ಶುಚಿ­ಯಾದ ಆಹಾರ ಒದಗಿಸಲು ಕ್ಯಾಂಟೀನ್‌ ಗುಣಮಟ್ಟ ಹೆಚ್ಚಳಕ್ಕೆ ಕ್ರಮ
*ಎಲ್ಲ ಬೋಗಿಗಳಲ್ಲಿ ಇಲಿ, ಕ್ರಿಮಿ, ಕೀಟಗಳ ನಿಯಂತ್ರಣಕ್ಕೆ ಕ್ರಮ
*ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ  ಅಪಘಾತ ತಡೆ  ಮತ್ತು ಬೆಂಕಿ ಅವಘಡ ತಡೆಯಲು  ಮುಂಜಾಗ್ರತಾ ಸುರಕ್ಷತಾ ಕ್ರಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT