ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆ ಸುರಕ್ಷತೆ: ಶೀರ್ಘ ನೀಲನಕ್ಷೆ

Last Updated 6 ಜೂನ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ರೈಲು ಪ್ರಯಾಣದ ಸುರಕ್ಷತೆಗೆ ಸಂಬಂಧಿಸಿದಂತೆ ಕಾಕೋ­ಡ್ಕರ್‌ ಸಮಿತಿ ವರದಿ ಶಿಫಾರಸು­ಗಳನ್ನು  ಅನುಷ್ಠಾನ­ಗೊಳಿಸಲು ರೈಲ್ವೆ ಸಚಿವಾಲಯ ಮುಂದಾಗಿದೆ.

ತಿಂಗಳ ಒಳಗಾಗಿ ಸುರಕ್ಷಿತ ರೈಲು ಪ್ರಯಾಣ ಸಂಬಂಧ ನೀಲನಕ್ಷೆ ಸಿದ್ಧಪಡಿಸುವಂತೆ ರೈಲ್ವೆ ಸಚಿವ   ಡಿ.ವಿ.­ಸದಾನಂದ ಗೌಡ  ಸೂಚಿಸಿ­ದ್ದಾರೆ. ಸಚಿವರ ಆದೇಶದ ಹಿನ್ನೆಲೆ­ಯಲ್ಲಿ ರೈಲ್ವೆ ಇಲಾಖೆಯು ನೀಲನಕ್ಷೆ ಸಿದ್ಧಪಡಿಸಲು ಭರದ ಸಿದ್ಧತೆ ನಡೆ­ಸಿದೆ.

ಸಮಿತಿಯ ಶಿಫಾರಸು­ಗಳನ್ನು ರೈಲ್ವೆ ಮಂಡಳಿ ಕೂಲಂಕ­ಷವಾಗಿ ಪರಿ­ಶೀ­ಲಿಸುತ್ತಿದ್ದು, ತಿಂಗಳ ಒಳ­­ಗಾಗಿ ಈ ಪ್ರಕ್ರಿಯೆ ಪೂರ್ಣ­ಗೊ­ಳ್ಳಲಿದೆ ಎಂದು  ಸಚಿವಾಲಯ ಶುಕ್ರವಾರ ತಿಳಿಸಿದೆ. ಗುರುವಾರ ಇಲ್ಲಿ ಮುಕ್ತಾಯ­ಗೊಂಡ ಎರಡು ದಿನಗಳ ರೈಲ್ವೆ ಮಂಡಳಿ ಸಭೆಯಲ್ಲಿ ವರದಿ ಶಿಫಾರಸುಗಳ ಅನುಷ್ಠಾನ  ಕುರಿತು ಚರ್ಚಿಸಲಾಯಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT