ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆ ‘ದಡ್ಡತನ’

Last Updated 20 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ರೈಲ್ವೆ ಇಲಾಖೆ ಇತ್ತೀಚೆಗೆ  ಪ್ಲಾಟ್‌ ಫಾರಂ ಟಿಕೆಟ್‌ ದರವನ್ನು ₨ 5ರಿಂದ ₨ 10ಕ್ಕೆ ಏರಿಸಿದೆ. ಈ ಏರಿಕೆ ಅವೈಜ್ಞಾನಿಕ. ಏಕೆಂದರೆ ಪ್ಯಾಸೆಂಜರ್‌ ರೈಲು ಪ್ರಯಾಣಕ್ಕೆ 5 ರೂಪಾಯಿ ದರದ ಟಿಕೆಟ್‌ ಇದೆ. ಅದನ್ನೇ ತೆಗೆದುಕೊಂಡು  ರೈಲ್ವೆ ನಿಲ್ದಾಣ ಪ್ರವೇಶಿಸಲು ಯಾರದ್ದೂ ಅಡ್ಡಿ ಇಲ್ಲ ತಾನೆ? ಆ ಟಿಕೆಟ್‌ಗೂ 2 ತಾಸಿನ ಮಾನ್ಯತೆ ಇದೆ. ಯಾವ ದಡ್ಡ ₨ 10  ಕೊಟ್ಟು ಪ್ಲಾಟ್‌ಫಾರಂ ಟಿಕೆಟ್‌ ಕೊಳ್ಳುತ್ತಾನೆ?

ನಾನು 10 ವರ್ಷಗಳಿಂದ ಬೆಂಗಳೂರು– ಮೈಸೂರು ಪ್ಯಾಸೆಂಜರ್‌ ರೈಲಿನಲ್ಲಿ ನಿಯಮಿತವಾಗಿ ಪ್ರಯಾಣಿಸುತ್ತಿದ್ದೇನೆ. ಆದರೆ ಒಂದೇ ಒಂದು ಸಲವೂ ಟಿಕೆಟ್‌ ತಪಾಸಣೆಗೆ ಯಾರೂ  ಬಂದಿಲ್ಲ. ನೂರಾರು ಜನರು ಟಿಕೆಟ್‌ ಇಲ್ಲದೆ ಪ್ರಯಾಣಿಸುತ್ತಾರೆ.  ಇದಕ್ಕೆ ನನ್ನದೊಂದು ಸಲಹೆ: ಟಿಕೆಟ್‌ ತಪಾಸಣೆ ಕಾರ್ಯವನ್ನು  ಖಾಸಗಿ ಸಂಸ್ಥೆಗಳಿಗೆ ವಹಿಸಬೇಕು. ದಂಡ ಸಂಗ್ರಹದಲ್ಲಿ  ಅವರಿಗೆ ಒಂದಷ್ಟು  ಕಮಿಷನ್‌ ನೀಡಿದರೆ ರೈಲ್ವೆಗೂ ಸಾಕಷ್ಟು ಆದಾಯ ಬರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT