ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಣ: ಪಟ್ಟಣ ಅಭಿವೃದ್ಧಿಗೆ ₨ 4 ಕೋಟಿ ಅನುದಾನ

Last Updated 25 ಅಕ್ಟೋಬರ್ 2014, 6:44 IST
ಅಕ್ಷರ ಗಾತ್ರ

ರೋಣ: ಪಟ್ಟಣದಲ್ಲಿ ಇರುವ 23 ವಾರ್ಡು ಗಳಲ್ಲಿ 4 ಕೋಟಿಗೂ ಹೆಚ್ಚಿನ ಅನುದಾನದ ಕಾಮಗಾರಿಗಳು ಆರಂಭ ವಾಗಿವೆ ಇವುಗಳಲ್ಲಿ ಕೆಲವುಗಳಿಗೆ ಜಿಲ್ಲಾಡಳಿತ ಅನು ಮೋದನೆ ದೊರೆತಿದ್ದು,ಅವುಗಳನ್ನು ಶೀಘ್ರವಾಗಿ ಆರಂಭಿಸ ಲಾಗುವುದು ಎಂದು ಶಾಸಕ ಜಿ. ಎಸ್. ಪಾಟೀಲ ಹೇಳಿದರು.

ಅವರು ಮಂಗಳವಾರ ಪುರಸಭೆ ಆವರಣದಲ್ಲಿ ಪುರಸಭೆಯ 13 ನೇ ಹಣಕಾಸು ಅನುದಾನದಲ್ಲಿ ಬಿಇಎಂಎಲ್ ಕಂಪೆನಿಯಿಂದ ಖರೀದಿಸಿದ ₨ 21 ಲಕ್ಷ ವೆಚ್ಚದ ಜೆಸಿಬಿ ಯಂತ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರತಿ ವಾರ್ಡಿನ ಜನತೆಗೆ ಸಮರ್ಪಕವಾಗಿ ಕುಡಿಯುವ ನೀರು, ಮೂಲಸೌಕರ್ಯ ನೀಡುತ್ತಿ ರುವುದು ಶ್ಲಾಘನಿಯ ಜತೆಗೆ ಪರಿಶಿಷ್ಟ ಜಾತಿ ಪರಿಶಿಷ್ಟ ಜನಾಂಗದವರ ಕಾಲೋನಿ ಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಸರ್ಕಾರ ಜನತೆಗೆ ನೀಡಿರುವ ಅನುದಾನವನ್ನು ಪುರಸಭೆ ಸಮರ್ಪಕವಾಗಿ ಬಳಸುತ್ತಿರುವದು ನೆಮ್ಮದಿ ತಂದಿದೆ.

ಸಾರ್ವಜನಿಕರು ಅಭಿವೃದ್ದಿ ಕಾರ್ಯಗಳಿಗೆ ಸ್ಪಂದಿಸಬೇಕು ವಿನಾಕಾರಣ ರಾಜಕಾರಣ ಬೆರೆಸಿದರೆ ಅಭಿವೃದ್ದಿ ಕುಂಠಿತವಾ ಗುತ್ತದೆ. ಸರ್ಕಾರದ  ಅನುದಾನದ ಪ್ರಯೋಜನ ಪಡೆದ ಫಲಾನುಭವಿಗಳು ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಸಿಬ್ಬಂದಿ ಮತ್ತು ಸದಸ್ಯರು ಜನತೆಯ ಆಶೋತ್ತರಗಳಿಗೆ ಸ್ಪಂದಿಸಿ ಆಡಳಿತವನ್ನು ಮತ್ತಷ್ಟು ಚುರುಕುಗೊಳಿಸುವ ಮೂಲಕ ಪಟ್ಟಣದ ಸರ್ವಾಂಗೀಣ ಪ್ರಗತಿಗೆ ಮುನ್ನುಡಿ ಬರೆಯ ಬೇಕೆಂದರು.

ಪುರಸಭೆ ಮುಖ್ಯಾಧಿಕಾರಿ ರವೀಂದ್ರ ಬಾಗಲಕೋಟಿ ಮಾತನಾಡಿ, ಪಟ್ಟಣದ ಪ್ರತಿ ವಾರ್ಡ್‌ಗೆ ಸಮರ್ಪಕ ಕುಡಿ ಯುವ ನೀರು ಪೂರೈಸುವ ಉದ್ಧೇಶದಿಂದ 16 ಕೊಳವೆಬಾವಿ ಕೊರೆಸಲಾಗಿದ್ದು, ಅವುಗಳಿಗೆ 22 ನೀರಿನ ಸಂಪುಗಳನ್ನು ನಿರ್ಮಿಸಲಾಗಿದೆ. ಪರಿಶಿಷ್ಟ ಜಾತಿ ಪರಿಶಿಷ್ಟ ಜನಾಂಗದವರ ಕುಟುಂಬಗಳಿಗೆ 15 ಗ್ಯಾಸ್‌, ಸಿಲಿಂಡರ್ ನೀಡಿದ್ದು, ವಿವಿಧ ವಾರ್ಡುಗಳಲ್ಲಿ ಚರಂಡಿ ಮತ್ತು ಸಿ ಸಿ ರಸ್ತೆ ಕಾಮಗಾರಿ ಕೆಲವು ಪೂರ್ಣಗೊಂಡಿದ್ದು ಇನ್ನೂ ಕೆಲವು ಕಾಮಗಾರಿಗಳು ನಡೆ ಯುತ್ತಿವೆ. ಅಭಿವೃದ್ದಿ ವಿಷಯದಲ್ಲಿ ಎಲ್ಲಾ ವಾರ್ಡುಗಳಿಗೂ ಸಮರ್ಪಕ ಅನುದಾನ ನೀಡಿ ಕೆಲಸ ಮಾಡುತ್ತಿದ್ದೇವೆ ಇದಕ್ಕೆ ಬಹುಮುಖ್ಯವಾಗಿ ಸಾರ್ವಜನಿಕರ ಸಹಕಾರ ಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಪುರಸಭೆ ಅಧ್ಯಕ್ಷ ಮುತ್ತಣ್ಣ ಸಂಗಳದ ವಹಿಸಿದ್ದರು. ಪುರಸಭೆಯ ಸದಸ್ಯರಾದ ತೋಟಪ್ಪ ನವಲ ಗುಂದ,ಶಫೀಕ ಮೂಗನೂರ, ಮಂಜುವಾಥ ಹಾಳಕೇರಿ,ಅಜ್ಜಪ್ಪ ರಡ್ಡೇರ,ಶರಣಪ್ಪ ದೊಡ್ಡ ಮನಿ,ಗಂಗಮ್ಮ ಹಾದಿಮನಿ,ಗೀತಾ ಕೊಪ್ಪದ, ಯಮನವ್ವ ಜುಮ್ಮನಕಟ್ಟಿ, ನಾಜಿಬೇಗಂ ಯಲಿಗಾರ, ಬಸವರಾಜ ನವಲಗುಂದ, ಯುಸೋಪ ಇಟಗಿ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT