ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಕಾಗೆ 197 ರನ್‌ಗಳ ಗೆಲುವಿನ ಗುರಿ

Last Updated 12 ಫೆಬ್ರುವರಿ 2016, 16:04 IST
ಅಕ್ಷರ ಗಾತ್ರ

ರಾಂಚಿ (ಪಿಟಿಐ): ಶಿಖರ್ ಧವನ್ (51 ರನ್, 2ಸಿ, 7 ಬೌ) ಅವರ ಅರ್ಧ ಶತಕದ ನೆರವಿನಿಂದ ಭಾರತವು ಶ್ರೀಲಂಕಾ ವಿರುದ್ಧದ ಎರಡನೇ ಟ್ವೆಂಟಿ–20 ಪಂದ್ಯದಲ್ಲಿ ಸವಾಲಿನ ಮೊತ್ತ ಪೇರಿಸಿದೆ. ದಿನೇಶ್‌ ಚಾಂಡಿಮಾಲ್‌ ನೇತೃತ್ವದ ಸಿಂಹಳೀಯರಿಗೆ 197 ರನ್‌ಗಳ ಗೆಲುವಿನ ಗುರಿ ನೀಡಿದೆ.

ರಾಂಚಿಯಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಸೋತು ಬ್ಯಾಟಿಂಗ್ ಅವಕಾಶ ಪಡೆದ ಭಾರತ, ನಿಗದಿತ ಓವರ್‌ಗಳಲ್ಲಿ ಆರು ವಿಕೆಟ್‌ಗೆ 196 ರನ್‌ ಗಳಿಸಿತು.

ಮೊದಲ ವಿಕೆಟ್‌ ಜತೆಯಾಟದಲ್ಲಿ ರೋಹಿತ್ ಶರ್ಮಾ (43) ಹಾಗೂ ಧವನ್‌ ಅವರು ಏಳು ಓವರ್‌ಗಳಲ್ಲಿ 75 ರನ್‌ ಕಲೆ ಹಾಕಿ ಭದ್ರ ಬುನಾದಿ ಒದಗಿಸಿದರು.

ಬಳಿಕ ಅಜಿಂಕ್ಯಾ ರಹಾನೆ (25), ಚುಟುಕು ಕ್ರಿಕೆಟ್ ಪರಿಣಿತ ಸುರೇಶ್ ರೈನಾ (30) ಹಾಗೂ ಹಾರ್ದೀಕ್ ಪಾಂಡ್ಯ (27) ಅವರು ತಂಡದ ಮೊತ್ತ ಹೆಚ್ಚಿಸಿದರು.

ಆದರೆ, ಯುವರಾಜ್ ಸಿಂಗ್ ಮೊದಲ ಎಸೆತದಲ್ಲಿಯೇ ಅಬ್ಬರ ಹೊಡೆತಕ್ಕೆ ಮುಂದಾಗಿ ಕ್ಯಾಚಿತ್ತು ನಿರ್ಗಮಿಸಿದರು.

ನಾಯಕ ಮಹೇಂದ್ರ ಸಿಂಗ್ ದೋನಿ(09) ಹಾಗೂ ರವೀಂದ್ರ ಜಡೇಜ (1) ಅಜೇಯರಾಗಿ ಉಳಿದರು.

ತಿಸಾರ ಪೆರೆರಾ ಮೂರು ವಿಕೆಟ್ ಕಬಳಿಸಿ ಮಿಂಚಿದರು. ದುಷ್ಮಂತಾ ಚಾಮೀರಾ ಎರಡು ವಿಕೆಟ್ ಉರುಳಿಸಿದರು. ಸಚಿತ್ರಾ ಸೇನಾನಾಯಕೆ ಒಂದು ವಿಕೆಟ್ ಪಡೆದರು.

ಕಳೆದ ಪಂದ್ಯದಲ್ಲಿ ತಲಾ ಮೂರು ವಿಕೆಟ್‌ ಪಡೆದು ಭಾರತವನ್ನು ಅಲ್ಪಮೊತ್ತಕ್ಕೆ ಕಟ್ಟಿ ಹಾಕಿದ್ದ ಕಸುನಾ ರಜಿತಾ ಮತ್ತು  ದಸುನಾ  ಶನಕಾ ಯಾವುದೇ ವಿಕೆಟ್‌ ಇಲ್ಲದೇ ಪರದಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT