ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಖ್ವಿ ವಿರುದ್ಧ ಮೇಲ್ಮನವಿಗೆ ವಿಫಲ

Last Updated 22 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌ (ಪಿಟಿಐ):  ಮುಂಬೈ ದಾಳಿಯ ಸಂಚು­ಕೋರ ಜಕಿವುರ್‌ ರೆಹಮಾನ್‌ ಲಖ್ವಿಗೆ ಇಸ್ಲಾಮಾಬಾದ್‌ನ ಭಯೋತ್ಪಾದನೆ ತಡೆ ನ್ಯಾಯಾಲಯ ನೀಡಿದ್ದ ಜಾಮೀನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಪಾಕಿಸ್ತಾನ ಸರ್ಕಾರ ವಿಫಲವಾಗಿದೆ.

ಭಯೋತ್ಪಾದನೆ ತಡೆ ನ್ಯಾಯಾ­ಲಯದ ಆದೇಶದ ಪ್ರತಿಯನ್ನು ಪಡೆದುಕೊಳ್ಳಲು ಸಾಧ್ಯವಾಗದೇ ಇರುವುದರಿಂದ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಸಾಧ್ಯವಾಗಿಲ್ಲ.

‘ಭಯೋತ್ಪಾದನೆ ತಡೆ ನ್ಯಾಯಾ­ಲಯದ ಆದೇಶದ ಪ್ರತಿಯನ್ನು ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಆದೇಶದ ಪ್ರತಿ ಕೈ ಸೇರದೆ ಮೇಲ್ಮನವಿ ಅಸಾಧ್ಯವಾಗಿರುವುದರಿಂದ ಮಂಗಳ­ವಾರವೂ ಮೇಲ್ಮನವಿ ಸಲ್ಲಿಸಲು ಸಾಧ್ಯವಾಗಲಿಕ್ಕಿಲ್ಲ. ಅಲ್ಲದೆ ಪ್ರತಿ ಸಿಕ್ಕ ಮೇಲೆ ಅದರ ಅಧ್ಯಯನಕ್ಕೆ ಸಮಯ ಬೇಕು’ ಎಂದು ಪ್ರಾಸಿಕ್ಯೂಷನ್‌ ಮುಖ್ಯಸ್ಥ ಚೌಧರಿ ಅಜರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT