ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಡಾಕ್‌ಗೆ ನುಸುಳಿದ ಚೀನಾ ದನಗಾಹಿಗಳು

Last Updated 28 ಜುಲೈ 2014, 19:30 IST
ಅಕ್ಷರ ಗಾತ್ರ

ಬೀಜಿಂಗ್, ನವದೆಹಲಿ (ಪಿಟಿಐ): ಕಳೆದ ವಾರ ಚೀನಾದ ದನಗಾಹಿಗಳು ಭಾರತದ ಗಡಿ ನುಸುಳಿ ಲಡಾಕ್ ಪ್ರವೇಶಿ­ಸಿದ್ದರು ಎಂಬುದನ್ನು ಭಾರತ ಮತ್ತು ಚೀನಾ ಒಪ್ಪಿಕೊಂಡಿವೆ.


‘ಘಟನೆಗೆ ಸಂಬಂಧಿಸಿದಂತೆ ಸೇನೆಯ ಸ್ಥಳೀಯ ಮುಖ್ಯಸ್ಥರು ಮಾತುಕತೆ ನಡೆಸಿ  ಸಮಸ್ಯೆ ಬಗೆಹರಿಸಿದ್ದಾರೆ. ಗಡಿಯಲ್ಲಿ ಶಾಂತಿ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಈ ಸಭೆ ನಡೆಸಲಾಗಿದೆ’ ಎಂದು ಚೀನಾದ ವಿದೇಶಾಂಗ ಸಚಿವಾ­ಲಯ ತಿಳಿಸಿದೆ.
ವಾಸ್ತವ ನಿಯಂತ್ರಣ ರೇಖೆಯ ಡೆಮ್ಚೊಕ್‌ ಸೆಕ್ಟರ್‌ನ ಚಾರ್ಡಿಂಗ್‌ ನಿಲು ನುಲ್ಲಾ ಜಂಕ್ಷನ್‌ ಮೂಲಕ ಜುಲೈ 25ರಂದು ಲಡಾಕ್‌ ಪ್ರವೇಶಿಸಿದ್ದರು.

ಎರಡೂ ಸೇನೆಯ ಕಮಾಂಡರ್‌ಗಳ ನಡುವೆ ಮಾತುಕತೆ ನಡೆದು ಮರುದಿನ ದನಗಾಹಿಗಳು ಲಡಾಕ್‌ ತೊರೆದರು ಎಂದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT