ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಡಾಕ್‌ನಲ್ಲಿ ಚೀನಿಯರು: ಜಿನ್‌ಪಿಂಗ್‌ ಜತೆ ಗಡಿ ತಂಟೆ ಚರ್ಚೆ

Last Updated 15 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭಾರತಕ್ಕೆ ಭೇಟಿ ನೀಡುತ್ತಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್‌­ಪಿಂಗ್‌ ಜತೆ ಉಭಯ ದೇಶಗಳ ಗಡಿ ವಿವಾದ ಸೇರಿದಂತೆ ಅನೇಕ ವಿಷ­ಯ­ಗಳ ಬಗ್ಗೆ ಸಮಾಲೋಚನೆ ನಡೆಸ­ಲಾ­­ಗುತ್ತದೆ ಎಂದು ವಿದೇಶಾಂಗ ಸಚಿವಾಲ­ಯದ ವಕ್ತಾರ ಸೈಯದ್‌ ಅಕ್ಬರುದ್ದೀನ್‌ ಹೇಳಿದ್ದಾರೆ.

ಈ ನಡುವೆ, ಸರ್ಕಾರಿ ವಾಹನಗಳಲ್ಲಿ ಚೀನಿಯರು ಲಡಾಕ್‌ನ ಡೆಮ್‌­ಚೊಕ್‌ ಪ್ರದೇಶ ನುಸುಳಿದ್ದು, ಇಲ್ಲಿ ನಡೆ­ಯುತ್ತಿ­ರುವ ನೀರಾವರಿ ಯೋಜನೆ ಕಾಮಗಾರಿ­ಯನ್ನು ತಡೆಯುತ್ತಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

‘ನೀರಾವರಿ ಕಾಮಗಾರಿಗೆ ಚೀನಾ ಕಳೆದ ವಾರದಿಂದ ವಿರೋಧ ವ್ಯಕ್ತ­ಪಡಿ­ಸು­ತ್ತಿದೆ’ ಎಂದು ಲೆಹ್‌ ಜಿಲ್ಲಾಧಿಕಾರಿ ಸಿಮ್ರನ್‌ದೀಪ್‌ ಸಿಂಗ್‌ ಹೇಳಿದ್ದಾರೆ.

ಈ ಬಗ್ಗೆ ಅಕ್ಬರುದ್ದೀನ್‌ ಅವರನ್ನು ಪ್ರಶ್ನಿಸಿ­ದಾಗ, ‘ಗಡಿ ಕಾಯುವವರು ಇದ­ನ್ನೆಲ್ಲ ನಿಭಾಯಿಸುತ್ತಾರೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT