ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲತಾ, ಸಚಿನ್‌ ಅಪಹಾಸ್ಯ ವಿಡಿಯೊ: ಎಐಬಿ ವಿರುದ್ಧ ಕ್ರಮಕ್ಕೆ ಆಗ್ರಹ

Last Updated 30 ಮೇ 2016, 10:35 IST
ಅಕ್ಷರ ಗಾತ್ರ

ಮುಂಬೈ(ಪಿಟಿಐ): ಹಿರಿಯ ಗಾಯಕಿ ಲತಾ ಮಂಗೇಶ್ಕರ್‌ ಹಾಗೂ ಕ್ರಿಕೆಟಿಗ ಸಚಿನ್‌ ತೆಂಡುಲ್ಕರ್ ಅವರನ್ನು ವಿಡಿಯೊವೊಂದರಲ್ಲಿ ಅಪಹಾಸ್ಯ ಮಾಡಿರುವ ಎಐಬಿ ಹಾಗೂ ಹಾಸ್ಯಗಾರ ತನ್ಮಯ್‌ ಭಟ್‌ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಶಿವ ಸೇನಾ ಹಾಗೂ ಬಿಜೆಪಿ ಆಗ್ರಹಿಸಿವೆ.

ವಿಡಿಯೊದಲ್ಲಿ ಕೀಳು ಅಭಿರುಚಿ ವ್ಯಕ್ತಪಡಿಸಿರುವ ಎಐಬಿ ಹಾಗೂ ತನ್ಮಯ್‌ ಭಟ್‌ ಅವರ ವಿರುದ್ಧ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಶಿವ ಸೇನೆ ಒತ್ತಾಯಿಸಿದೆ.

ಈ ಸಂಬಂಧ ಮುಖ್ಯಮಂತ್ರಿಗೆ ಪತ್ರ ಬರೆದಿರುವ ಸೇನೆ ಮುಖ್ಯಸ್ಥ ನೀಲಂ ಗೊರೆ ಅವರು, ‘ಬುದ್ಧಿಗೆಟ್ಟ ಮನಸ್ಥಿತಿ‘ಯವರು ವಿಡಿಯೊ ಸಿದ್ಧಪಡಿಸಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಎಂದು ಒತ್ತಾಯಿಸಿದ್ದಾರೆ.

ನೀಲಂ ಗೊರೆ ಅವರು ಮುಂಬೈ ಪೊಲೀಸ್‌ ಆಯುಕ್ತರಿಗೆ ಬರೆದಿರುವ ಪತ್ರದಲ್ಲಿ ಎಐಬಿ ಹಾಗೂ ತನ್ಮಯ ಭಟ್‌ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಈಸಂಬಂಧ ಮುಂಬೈ ಬಿಜೆಪಿ ಅಧ್ಯಕ್ಷ ಅಶಿಶ್‌ ಶೇಲಾರ್‌ ಅವರು ಪೊಲೀಸ್ ಆಯುಕ್ತರ ಜತೆ ಮಾತನಾಡಿದ್ದು, ಎಐಬಿ ಹಾಗೂ ತನ್ಮಯ್‌ ಭಟ್‌ ವಿರುದ್ಧ ದೂರು ದಾಖಲಿಸಬೇಕು ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT