ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಭಕೋರರ ಓಲೈಕೆ ಬೇಡ

Last Updated 14 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಸಹಜ, ಸಾವಯವ ಕೃಷಿ ಪುಸ್ತಕ ಮತ್ತು ಪತ್ರಿಕೆಯ ಪ್ರಕಾಶಕರು ಮತ್ತು ಮಾರಾಟ­ಗಾರರಾದ ನಾವು ಕಳೆದ ೧೫-೨೦ ವರ್ಷದಿಂದ ಧಾರವಾಡ ಕೃಷಿ ಮೇಳದಲ್ಲಿ ಪುಸ್ತಕ ಮಳಿಗೆ ಹಾಕುತ್ತಾ ಬಂದಿ­ದ್ದೇವೆ. ಸಾಮಾನ್ಯ ರೈತರು ಸಾವಯವ ಕೃಷಿಗೆ ಹೊರಳುವಲ್ಲಿ ನಮ್ಮ
ಪುಸ್ತಕ, ಪತ್ರಿಕೆಗಳು ಉತ್ತೇಜನ ನೀಡುತ್ತಾ ಬಂದಿವೆ. ಆದರೆ ಈ ಬಾರಿ ನಮ್ಮಂಥವರು ಕೃಷಿ­ಮೇಳದಲ್ಲಿ ಭಾಗವಹಿಸಲಾರದಂಥ ಸ್ಥಿತಿಯನ್ನು ಕೃಷಿ ವಿ.ವಿ ಸೃಷ್ಟಿಸಿದೆ.

ಕಳೆದ ಅನೇಕ ವರ್ಷಗಳಿಂದಲೂ ಪತ್ರಿಕೆ, ಪುಸ್ತಕ ಮಳಿಗೆಗಳಿಗೆ ಕೊಡುತ್ತಿದ್ದ ಶೇ 50­ರಷ್ಟು ರಿಯಾ­ಯಿತಿಯನ್ನು ಈ ಬಾರಿ ತೆಗೆದು­ಹಾಕಿ­ರುವುದೂ ಅಲ್ಲದೆ ಮಳಿಗೆ ದರವನ್ನು ಯದ್ವಾ­ತದ್ವಾ ಹೆಚ್ಚಿಸ­ಲಾಗಿದೆ. ಮಳಿಗೆಗಳಿಗೆ ರಿಯಾ­ಯಿತಿ ಕೊಟ್ಟಲ್ಲಿ ಆಡಿಟ್ ತಕರಾರು ಉಂಟಾ­ಗು­ತ್ತದೆಂದು ಸರ್ಕಾರ ತಮ್ಮ ಮೇಲೆ ಒತ್ತಡ ತಂದಿರುವುದಾಗಿ ಕುಲಪತಿಗಳು ಹೇಳುತ್ತಿ­ದ್ದಾರೆ. ಇದು ಸಬೂಬು.ಲೆಕ್ಕ­ಪರಿಶೋಧಕರ ಕೆಲಸ ಹಣದ ಅಪವ್ಯಯ, ಮೋಸ, ಭ್ರಷ್ಟಾ­ಚಾರದ ವಾಸನೆ ಹಿಡಿ­ಯು­ವುದೇ ಹೊರತು ಕೃಷಿ ಮೇಳದ ನೀತಿ ನಿರೂಪಣೆ ಮಾಡುವುದಲ್ಲ ಎನ್ನುವುದನ್ನು ಸಾಮಾನ್ಯ ಜನರೂ ಬಲ್ಲರು. 

ಕೃಷಿ ವಿ.ವಿಗೆ ಖಂಡಿತವಾಗಿಯೂ ಪುಸ್ತಕ ಮಳಿಗೆಗಳಿಗೆ ರಿಯಾಯಿತಿ ಕೊಡುವುದು ಹೊರೆ­ಯಾಗು­ವುದಿಲ್ಲ. ಏಕೆಂದರೆ ಬೀಜ, ಗೊಬ್ಬರ, ಇತರ ಸರಕುಗಳ ಎಷ್ಟೋ ಮಾರಾಟ­ಗಾರರು ಕೃಷಿಮೇಳಗಳಲ್ಲಿ ಪುಕ್ಕಟೆಯಾಗಿ ಮಳಿಗೆ ಪಡೆ­ಯು­ತ್ತಿದ್ದಾರೆ. ಇಂಥವರಿಗಾಗಿ ಮೀಸಲಿಟ್ಟ ಎಷ್ಟೋ ಮಳಿಗೆಗಳು ಖಾಲಿ ಬಿದ್ದಿರುವುದನ್ನು ಪ್ರತಿ ವರ್ಷವೂ ನೋಡುತ್ತೇವೆ.

ಲಾಭಕೋರ­ರನ್ನು ಓಲೈಸುವ ಈ ಧೋರಣೆಯನ್ನು ಕೈಬಿಟ್ಟು ವಿಷಮುಕ್ತ ಕೃಷಿ­ಯೆಡೆಗೆ ಪ್ರಾಮಾಣಿಕ ಪ್ರಯ­ತ್ನದಲ್ಲಿ ತೊಡಗಿ­ರುವ ಪ್ರಕಾಶಕರಿಗೆ ರಿಯಾಯಿತಿ ನೀಡುವ ತೀರ್ಮಾನವನ್ನು ಕೃಷಿ ವಿ.ವಿ ಕೈಗೊಳ್ಳಲಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT