ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾರೆನ್ಸ್‌ನಿಂದ ತಾಯಿಗಾಗಿ ದೇವಾಲಯ

ಪಂಚರಂಗಿ
Last Updated 31 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ತಮಿಳಿನ ನಟ, ನಿರ್ದೇಶಕ ರಾಘವ ಲಾರೆನ್ಸ್‌ ತಮಿಳುನಾಡಿನಲ್ಲೇ ತಮ್ಮ ತಾಯಿಗೆ ದೇವಾಲಯ ನಿರ್ಮಿಸಲು ನಿರ್ಧರಿಸಿದ್ದಾರೆ.
‘ತಂದೆಯ ಹುಟ್ಟೂರಾದ ಪುವಿರುಂಧವಲ್ಲಿಯಲ್ಲಿ ನನ್ನ ತಾಯಿಗಾಗಿ ದೇವಾಲಯ ನಿರ್ಮಾಣ ಮಾಡುತ್ತಿದ್ದೇನೆ. ಕೆಲಸ ಈಗಾಗಲೇ ಪ್ರಾರಂಭವಾಗಿದ್ದು, ಮುಂದಿನ ವರ್ಷ ಪೂರ್ಣಗೊಳ್ಳಲಿದೆ. ನನ್ನ ತಾಯಿ ಜೀವಂತವಾಗಿರುವಾಗಲೇ ಆಕೆಗಾಗಿ ದೇವಾಲಯ ಕಟ್ಟಬೇಕು ಎಂಬುದು ನನ್ನ ಕನಸಾಗಿತ್ತು’ ಎಂದಿದ್ದಾರೆ ಲಾರೆನ್ಸ್‌.

‘ನಾನು ಈ ಮಟ್ಟಕ್ಕೆ ಬೆಳೆಯಲು ಹಾಗೂ ಈ ಭೂಮಿ ಮೇಲೆ ಬರಲು ಆಕೆಯೇ ಕಾರಣ. ನನಗಾಗಿ ತನ್ನ ಇಡೀ ಜೀವನವನ್ನೇ ಮುಡಿಪಾಗಿಟ್ಟ ತ್ಯಾಗಮಯಿ ಆಕೆ. ಇಂತಹ ಎಲ್ಲ ತಾಯಂದಿರಿಗಾಗಿ ಈ ದೇವಾಲಯವನ್ನು ಸಮರ್ಪಿಸುತ್ತೇನೆ’ ಎಂದು ಐಎಎನ್‌ಎಸ್‌ಗೆ ಹೇಳಿದ್ದಾರೆ.

‘ನನ್ನ ತಾಯಿಯ ಮೂರ್ತಿಯನ್ನು ರಾಜಸ್ತಾನದಲ್ಲಿ ಮಾಡಿಸಿದ್ದು, ಮುಂದಿನ ವರ್ಷದೊಳಗಾಗಿ ದೇವಾಲಯದ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ. ನಂತರ ದೊಡ್ಡ ಸಮಾರಂಭದ ಮೂಲಕ ದೇವಾಲಯವನ್ನು ಉದ್ಘಾಟಿಸಲಾಗುವುದು’ ಎಂದಿದ್ದಾರೆ ಅವರು. 
ತಾಯಿಯ ಬದುಕು ಹಾಗೂ ಲಾರೆನ್ಸ್‌ ಭವಿಷ್ಯಕ್ಕಾಗಿ ಅವರು ಪಟ್ಟ ಪರಿಶ್ರಮ ಕುರಿತಂತೆ ಪುಸ್ತಕವನ್ನು ಬರೆಯಲು ಇಚ್ಛಿಸಿರುವ ಅವರು ಸದ್ಯಕ್ಕೆ ತಮಿಳಿನ ‘ಮುನಿ 3’ ಹಾಗೂ ‘ಒರು ಟಿಕೆತ್ತಿಲ್‌ ರೆಂಡು ಸಿನಿಮಾ’ ಚಿತ್ರ ನಿರ್ಮಾಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಆಂಧ್ರಪ್ರದೇಶದ ಕಾಳಹಸ್ತಿಯಲ್ಲಿ  ಅವರು ವಿಶೇಷ ಪೂಜೆಯನ್ನೂ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT